ಭಾನುವಾರ, ಮೇ 22, 2022
23 °C

ಕರ್ನಾಟಕ ಸಂಗಾತಿ ಪರಿಷ್ಕಾರಗೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಪುಸ್ತಕ ಪ್ರಾಧಿಕಾರವು 2002ರಲ್ಲಿ  ಪ್ರೊ ಚಿ. ಶ್ರಿನಿವಾಸರಾಜು ಮತ್ತು ಬಸವರಾಜ ಕಲ್ಗುಡಿ ಅವರು ಸಂಪಾದಿಸಿದ  `ಕರ್ನಾಟಕ ಸಂಗಾತಿ~ ಸಾಮಾನ್ಯ ಜ್ಞಾನ ಕೈಪಿಡಿಯನ್ನು ಪ್ರಕಟಿಸಿತ್ತು. 2005ರಲ್ಲಿ ಅದೇ ಕೃತಿಯ ಮರುಮುದ್ರಣವೂ ಆಗಿತ್ತು. ಇದೀಗ ಮತ್ತೊಮ್ಮೆ ಮರುಮುದ್ರಣಕ್ಕಾಗಿ ಟೆಂಡರ್ ಕರೆದಿದೆ.2011ರ ಜನಗಣತಿ ಆಧರಿಸಿದ, ತೀರಾ ಇತ್ತೀಚಿನ ಘಟನಾವಳಿಗಳು, ಯೋಜನೆಗಳು ಮತ್ತು ಅಭಿವೃದ್ಧಿಯ ಮಾಹಿತಿಯನ್ನು ಒಳಗೊಂಡಂತೆ ಹೊಸದಾಗಿ ಈ  ಕರ್ನಾಟಕ ಸಂಗಾತಿ  ಪರಿಷ್ಕಾರಗೊಳ್ಳಬೇಕಿದೆ.  ಹಾಗೆ ಮಾಡದೆ ಸುಮ್ಮನೇ ಹಳೆಯ ಸರಕನ್ನೇ ಮರುಮುದ್ರಿಸುವುದರಿಂದ ಯಾವುದೇ ಲಾಭ ಆಗಲಾರದು.  ಮರುಮುದ್ರಣಗಳು ಅಪ್‌ಡೇಟ್ ಆಗದೇ ಇದ್ದರೆ ಮೂಲೆ ಸೇರುವುದು ಖಚಿತ.ಈ ಹಳಸಲು ಸರಕಿಗೆ ಬದಲಾಗಿ ಈಗಾಗಲೇ ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಪ್ರಕಟಿಸಿರುವ ಕರ್ನಾಟಕ ಕೈಪಿಡಿ 2012 ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಡಿವಿಡಿ ಸಹಿತ ಅತ್ಯುತ್ತಮ ಮಾಹಿತಿಯ ಆಗರವಾಗಿದೆ.  ಅದಕ್ಕೇ ಇನ್ನಷ್ಟು ರಿಯಾಯಿತಿ ದೊರೆಯುವಂತೆ ಮಾಡಿದಲ್ಲಿ ಬಹುತೇಕ ಎಲ್ಲಾ ಸ್ಪರ್ಧಾರ್ಥಿಗಳಿಗೆ ಅನುಕೂಲವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.