ಸೋಮವಾರ, ಮೇ 17, 2021
22 °C

ಕಲಾವಿದರ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಕಲಾವಿದರ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ಸಿಗಬೇಕೆನ್ನುವ ಕನಸು ನನಸು ಮಾಡುವ ಸುಯೋಗ ಸಿಕ್ಕಿದೆ~ ಎಂದು ಕರ್ನಾಟಕ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷೆ ಮಾಲತಿ ಸುಧೀರ ಸಂತಸ ವ್ಯಕ್ತಪಡಿಸಿದರು.`ಕಲಾವಿದರೆಂದೂ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವುದಿಲ್ಲ. ಒಳ್ಳೆಯ ರೀತಿಯಲ್ಲಿ ಬದುಕುವುದಕ್ಕೂ ಅವರಿಗೆ ಅವಕಾಶ ಸಿಗುವುದು ಅಪರೂಪ. ಎಲ್ಲರೂ ಸಂಶಯದ ದೃಷ್ಟಿಯಿಂದಲೇ ನೋಡುತ್ತಾರೆ. ಹೀಗಾಗಿ ಕಲಾವಿದೆಯರು ಎಂದಿಗೂ ನೊಂದ ಜೀವಿಗಳೇ. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಾತಿ ಸಿಕ್ಕರೆ ಅನುಕೂಲವಾಗುತ್ತದೆ. ಇದಕ್ಕಾಗಿ ತೀವ್ರ ಪ್ರಯತ್ನಿಸುವೆ~ ಎಂದು ಅವರು ಭರವಸೆ ನೀಡಿದರು.`ವಯಸ್ಸಾದ ಮೇಲೆ ಕಲಾವಿದೆಯರಿಗೆ ಮಾಸಾಶನ ಸಿಗುತ್ತದೆ. ಆದರೆ ವಯಸ್ಸಾಗುವವರೆಗೂ ಕಲಾವಿದೆಯರು ಬದುಕಿರುವುದಿಲ್ಲ. ಏಕೆಂದರೆ 30-35 ವಯಸ್ಸಿನವರೆಗೆ ನಾಯಕಿ ಪಾತ್ರ ಮಾಡುತ್ತಾರೆ. ಆಮೇಲೆ ಪೋಷಕಿ ಪಾತ್ರ ಮಾಡುತ್ತ ಕಾಲ ತಳ್ಳುತ್ತಾರೆ. ಆದರೆ ಆರ್ಥಿಕವಾಗಿ ಗಟ್ಟಿಯಾಗಿರುವುದಿಲ್ಲ.ಇದಕ್ಕಾಗಿ ಮಾಸಾಶನ ನೀಡುವ ವಯೋಮಾನವನ್ನು ಕಡಿಮೆಗೊಳಿಸುವ ಯೋಜನೆಯಿದೆ. ಜೊತೆಗೆ ಹಿರಿಯ ಕಲಾವಿದರನ್ನು ಸಂಘಟಿಸುವ ಯೋಜನೆಯೂ ಇದೆ. ಇದರಿಂದ ಹೊಸ ತಲೆಮಾರಿನ ಕಲಾವಿದರಿಗೆ ತರಬೇತಿ ಕೊಡಿಸಲು ಸಾಧ್ಯವಾಗುತ್ತದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.