ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಸಿಗುತ್ತಿದೆ. ಹೀಗಾಗಿ ಪ್ರತಿ ವರ್ಷ ಸುಮಾರು 140 ಲಕ್ಷ ವಿದ್ಯಾರ್ಥಿಗಳು ನಾನಾ ವಿಷಯಗಳ ಕಲಿಕೆಗೆ ತಮ್ಮ ಹೆಸರನ್ನು ನೋಂದಣಿ ಮಾಡಿಸುತ್ತಿದ್ದಾರೆ. ಇದರಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಯ್ಕೆ ಬಯಸುತ್ತಿರುವುದು ಕಲೆ ಹಾಗೂ ಮಾನವಿಕ ವಿಷಯಗಳನ್ನು.

ಪದವಿಪೂರ್ವ (ಪಿಯು) ಶಿಕ್ಷಣವನ್ನು ಪರಿಗಣಿಸಿದರೆ ಶೇ 65ರಷ್ಟು ವಿದ್ಯಾರ್ಥಿಗಳು ಆರಿಸುತ್ತಿರುವುದು ಕಲೆ ಹಾಗೂ ವಾಣಿಜ್ಯ ವಿಷಯವನ್ನು. ಅದೇ ರೀತಿ ಸ್ನಾತಕೋತ್ತರ ಪದವಿಗೆ ಕಲೆ ಹಾಗೂ ವಾಣಿಜ್ಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಶೇ 67ರಷ್ಟಿದೆ. ಅಂದರೆ ಪ್ರಸ್ತುತ ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಕಲೆ ಹಾಗೂ ಮಾನವಿಕ ವಿಷಯಗಳ ಬಗ್ಗೆ ಒಲವು ತೋರುತ್ತಿದ್ದಾರೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತಿದೆ. ಇದೇ ಪ್ರವೃತ್ತಿ ಬರುವ ದಿನಗಳಲ್ಲೂ ಮುಂದುವರಿಯಬಹುದು.

ದೇಶದಲ್ಲಿ ವಿಜ್ಞಾನಿಗಳು ಹಾಗೂ ಎಂಜಿನಿಯರ್ಗಳ ಸಂಖ್ಯೆ ಹೆಚ್ಚಿಸಲು ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಆದರೆ ವಿದ್ಯಾರ್ಥಿಗಳ ಆಸಕ್ತಿ ಬೇರೆಯೇ ಇದೆ. ಏಕೆಂದರೆ ಕಲಾ ವಿಭಾಗದಲ್ಲೂ ಓದಿ ಬದುಕಬಹುದು ಎಂಬುದು ಯುವಜನರ ಅರಿವಿಗೆ ಬರುತ್ತಿದೆ. ಎಂಜಿನಿಯರ್, ವೈದ್ಯರಾಗುವುದೇ ಜೀವನದ ಗುರಿ ಎಂಬ ಪ್ರವೃತ್ತಿ ಇರುವ ಸಮಾಜದಲ್ಲಿ ಇದು ನಿಜವಾಗಿಯೂ ಒಳ್ಳೆಯ ಬೆಳವಣಿಗೆ.

ವಿಸ್ತೃತ ಹಾಗೂ ಉತ್ತಮ ಭವಿಷ್ಯದ ಅವಕಾಶ ಇರುವುದು ಮಾನವಿಕ ವಿಷಯಗಳಲ್ಲಿ ಎನ್ನುವುದು ಇನ್ನೊಂದು ಅಂಶ. ಕಲಾ ವಿಭಾಗದಲ್ಲಿ ಪದವಿ ಪೂರೈಸಿದ ವಿದ್ಯಾರ್ಥಿಗೆ ಸಮಾಜದಲ್ಲಿ ಬದುಕಲು ವೈವಿಧ್ಯಮಯ, ಹೇರಳ ಅವಕಾಶಗಳಿವೆ. ಕಾರ್ಯ ನಿರ್ವಹಣಾಧಿಕಾರಿ, ವಿಷಯ ಸಂಪಾದಕತ್ವ, ಸಂಶೋಧನಾ ಸಹಾಯಕ, ಮನಃಶಾಸ್ತ್ರಜ್ಞ, ಗ್ರಂಥಪಾಲಕ, ಪತ್ರಿಕೋದ್ಯಮಿ, ಅಭಿವೃದ್ಧಿ ಅಧಿಕಾರಿ, ಅರಣ್ಯಾಧಿಕಾರಿ, ಜ್ಯೋತಿಷಿ, ಕಾನೂನು, ಚಿತ್ರಕಲೆ, ಸಂಗೀತ ಹೀಗೆ ವಿವಿಧ ವಿಭಾಗಗಳಲ್ಲಿ ಇವರು ಭವಿಷ್ಯ ಕಂಡುಕೊಳ್ಳಬಹುದಾಗಿದೆ.

ಪಿಯುಸಿ ಮುಗಿಸಿದ ನಂತರ ಕಲಾ ವಿಭಾಗದಲ್ಲಿ ಆಯ್ಕೆ ಅಪಾರವಾಗಿರುತ್ತದೆ. ಆಳವಾದ ಜ್ಞಾನ ಸಂಪಾದನೆಗೆ ಇಲ್ಲಿ ಇತಿಹಾಸ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ತತ್ವಶಾಸ್ತ್ರ, ಮನಃಶಾಸ್ತ್ರ ಮುಂತಾದ ವಿಷಯಗಳು ಸಿಗುತ್ತವೆ.

ಇದಲ್ಲದೆ ಕಾರಣಾಂತರದಿಂದ ಓದು ಕೈಬಿಟ್ಟ ಗೃಹಿಣಿಯರು ಕಲಿಕೆ ಮುಂದುವರಿಸಿಕೊಳ್ಳಲು ಕಲೆ ಸಾಕಷ್ಟು ಅವಕಾಶ ಕಲ್ಪಿಸುತ್ತದೆ. ಕೌಟುಂಬಿಕ ಜವಾಬ್ದಾರಿಗಳ ನಿರ್ವಹಣೆಯ ಜತೆಗೇ ಓದಬಹುದು. ಕೆಲ ವರ್ಷಗಳ ಈಚಿನ ವರೆಗೂ ಸಾಕಷ್ಟು ಕಲಿಕಾ ವಿಷಯಗಳು ಜನರ ಮುಂದಿದ್ದವು. ಹೀಗಾಗಿ ಯಾವುದನ್ನು ಭವಿಷ್ಯಕ್ಕೆ ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಎದುರಾಗುತ್ತಿತ್ತು. ಪರಿಸರ ಕಾನೂನು ಅಥವಾ ಫಿಟ್ನೆಸ್ ಥೆರಫಿ, ಆಹಾರ ಉದ್ಯಮ, ಕಾರ್ಪೊರೇಟ್ ಸಂವಹನ ಅಥವಾ ಚಿತ್ರ ನಿರ್ಮಾಣ, ಛಾಯಾಗ್ರಹಣ, ಕ್ರೀಡೆ ಅಥವಾ ವನ್ಯಜೀವಿ ಅಧ್ಯಯನ, ಕಾರ್ಟೂನ್ ಕ್ಯಾರಿಕೇಚರ್ ಚಿತ್ರ ನಿರ್ಮಾಣ, ವಿವಾಹ ಮತ್ತು ಪಾರ್ಟಿ ಪ್ಲಾನ್ ಮಾಡುವುದು, ಪ್ರವಾಸಿ ಪ್ಲಾನರ್ ಹಾಗೂ ಗೈಡ್, ಪೂರ್ಣ ಪ್ರಮಾಣದ ಸಮಾಜಸೇವಕ ಇತ್ಯಾದಿ ಅವಕಾಶಗಳು ಕಣ್ಣ ಮುಂದೆ ಇದ್ದವು. ಅದೆಲ್ಲಕ್ಕೂ ಈಗ ಬೇಡಿಕೆ ಬಂದಿದೆ.

ರೇಡಿಯೊ ಹಾಗೂ ಟೆಲಿವಿಜನ್ ಕ್ಷೇತ್ರ ಕೂಡ ಇಂದು ಕಲಾ ವಿಷಯ ಪದವೀಧರರಿಗೆ ಉದ್ಯೋಗದ ಅವಕಾಶ ಕಲ್ಪಿಸಿವೆ. ಒಟ್ಟಾರೆ ಕಲಾ ವಿಷಯಗಳು ದೊಡ್ಡ ಕನಸು ಕಾಣಲು, ಅದನ್ನು ಈಡೇರಿಸಿಕೊಳ್ಳಲು ಪೂರಕ ವಾತಾವರಣ ನಿರ್ಮಿಸಿಕೊಡುತ್ತಿವೆ. ವಿಜ್ಞಾನ ಹಾಗೂ ವಾಣಿಜ್ಯ ವಿಷಯ ಕಲಿಕೆಯಿಂದ ಮಾತ್ರ ಯಶಸ್ಸಿನ ಮಾರ್ಗ ಸಿಗುತ್ತದೆ ಎನ್ನುವುದನ್ನು ಇವು ಸುಳ್ಳು ಮಾಡಿವೆ.

ಇದನ್ನರಿತೇ ಇಂದು ಸಾಕಷ್ಟು ಮುಕ್ತ ವಿಶ್ವವಿದ್ಯಾಲಯಗಳು ದೂರ ಶಿಕ್ಷಣ ಕಾರ್ಯಕ್ರಮದ ಅಡಿ ಕಲೆ ಹಾಗೂ ಮಾನವೀಯ ಮೌಲ್ಯ ವೃದ್ಧಿಸುವ ಪದವಿ ಗಳಿಸಲು ನೆರವಾಗುತ್ತಿವೆ. ಇದರಲ್ಲಿ ಮನೆಯಲ್ಲಿ ಕುಳಿತು ಅಥವಾ ಬೇರೆ ಉದ್ಯೋಗ ಮಾಡುತ್ತಲೂ ಪದವಿ ಪಡೆಯಬಹುದು. ಸ್ನಾತಕೋತ್ತರ ಶಿಕ್ಷಣವನ್ನೂ ಪೂರೈಸಬಹುದು.

(ನಿರ್ದೇಶಕರು, ಸಿಕ್ಕಿಂ ಮಣಿಪಾಲ ವಿವಿ ದೂರಶಿಕ್ಷಣ ವಿಭಾಗ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.