ಭಾನುವಾರ, ಮೇ 22, 2022
23 °C

ಕಲೆ-ವಾಣಿಜ್ಯ: ವೈವಿಧ್ಯ, ಅವಕಾಶ ಹಲವು

ಪ್ರಜಾವಾಣಿ ವಾರ್ತೆ/ ಶ್ರೀಕಾಂತ ಕಲ್ಲಮ್ಮನವರ Updated:

ಅಕ್ಷರ ಗಾತ್ರ : | |

ಮಡಿಕೇರಿ: ನಗರದ ಕಾಲೇಜುಗಳಿಗೆ ವಿದ್ಯಾರ್ಜನೆಗೆಂದು ಬರುವ ಪದವಿ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಷಯಗಳು ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಿವೆ.ಇಲ್ಲಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ದಾಖಲಾತಿ ಪಡೆದಿರುವ ವಿದ್ಯಾರ್ಥಿಗಳನ್ನು ಗಮನಿಸಿದರೆ ಈ ಅಂಶ ಮನದಟ್ಟಾ ಗುತ್ತದೆ.ವಿಜ್ಞಾನ ವಿಭಾಗದಲ್ಲಿ ಪಿಸಿಎಂ (ಭೌತಶಾಸ್ತ್ರ, ರಸಾಯನ ಶಾಸ್ತ್ರ, ಗಣಿತ) ಕಾಂಬಿನೇಷನ್‌ಗೆ ಹೆಚ್ಚು ಬೇಡಿಕೆ ಕಂಡುಬಂದಿದೆ. ವಾಣಿಜ್ಯ ವಿಷಯ ಹಾಗೂ ಪಿಸಿಎಂ ವಿಷಯಗಳಲ್ಲಿ ಪದವಿ ಪಡೆದರೆ ಸಾಕಷ್ಟು ಉದ್ಯೋಗಾವಕಾಶ ಲಭ್ಯವಾಗುತ್ತವೆ ಎನ್ನುವ ವಿದ್ಯಾರ್ಥಿ ಗಳ ಆಶಾಭಾವನೆಯೇ ಇದಕ್ಕೆ ಕಾರಣವಾಗಿದೆ.ಕಲಾ ವಿಭಾಗದಲ್ಲಿ ಅರ್ಥಶಾಸ್ತ್ರ ಸಂಯೋಜಿತ ಎಚ್‌ಇಪಿ (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ), ಎಚ್‌ಇಕೆ (ಇತಿಹಾಸ, ಅರ್ಥಶಾಸ್ತ್ರ, ಐಚ್ಛಿಕ ಕನ್ನಡ) ಓದಲು ವಿದ್ಯಾರ್ಥಿಗಳು ಪ್ರಥಮ ಆದ್ಯತೆ ನೀಡುತ್ತಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬಿಬಿಎಂ ಪದವಿಗೆ ಮೊದಲು ಪ್ರಾಶಸ್ತ್ಯ ನೀಡುತ್ತಿರುವುದು ಸಾಮಾನ್ಯವಾಗಿದೆ.ಎಫ್‌ಎಂಸಿ ಕಾಲೇಜು:

ಅತ್ಯಂತ ಸುಂದರ ಕ್ಯಾಂಪಸ್ ಹೊಂದಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಸಾಂಪ್ರದಾಯಿಕ ವಿಷಯಗಳ ಜೊತೆ ಕೆಲವೊಂದು ಆಕರ್ಷಕ ವಿಷಯಗಳೂ ಉಂಟು. ಬಿ.ಎ ಪದವಿಯಲ್ಲಿ ಪತ್ರಿಕೋದ್ಯಮ, ವುಮೆನ್ ಸ್ಟಡೀಸ್, ಕಂಪ್ಯೂಟರ್ ಡಾಟಾ ಪ್ರೊಸೆಸಿಂಗ್, ಟೂರಿಸಂ ಆ್ಯಂಡ್ ಟ್ರಾವೆಲ್ ಮ್ಯಾನೇಜ್‌ಮೆಂಟ್ ವಿಷಯಗಳು ಗಮನ ಸೆಳೆಯುವಂತಹವು.ಬಿ.ಎಸ್ಸಿ ವಿಭಾಗದಲ್ಲಿ ಕಂಪ್ಯೂಟರ್ ಸೈನ್ಸ್, ಮೈಕ್ರೊಬಯೋಲಜಿ ವಿಷಯಗಳಿವೆ.

ಬ್ಯಾಚುಲರ್ ಆಫ್ ಹ್ಯೂಮನ್ ರಿಸೊರ್ಸ್ ಡೆವಲಪ್‌ಮೆಂಟ್ (ಬಿಎಚ್‌ಆರ್‌ಡಿ), ಬ್ಯಾಚುಲರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್ (ಬಿಬಿಎಂ), ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ (ಬಿಸಿಎ), ಬ್ಯಾಚುಲರ್ ಆಫ್ ಸೋಷಿಯಲ್ ಸ್ಟಡೀಸ್ (ಬಿಎಸ್‌ಡಬ್ಲು) ಹಾಗೂ ಸರ್ಟಿಫಿಕೇಟ್ ಇನ್ ಆ್ಯನಿಮೇಷನ್ ಆ್ಯಂಡ್ ವಿಶ್ಯುವಲ್ ಎಫೆಕ್ಟ್ಸ್          ಕೋರ್ಸ್‌ಗಳಿವೆ.ಮುಖ್ಯ ಪದವಿ ತರಗತಿಯ ಜೊತೆ ಹೆಚ್ಚುವರಿಯಾಗಿ ಟ್ರಾವೆಲ್ ಆ್ಯಂಡ್ ಟೂರಿಸಂ, ಹಾರ್ಡ್‌ವೇರ್ ಹಾಗೂ ನೆಟ್‌ವರ್ಕಿಂಗ್ ಮತ್ತು ಫಂಕ್ಷನಲ್ ಇಂಗ್ಲಿಷ್ ಕೋರ್ಸ್‌ಗಳಿವೆ. ಈ ಕೋರ್ಸ್‌ಗಳು ಯುಜಿಸಿ ಪ್ರಾಯೋಜಕತ್ವದಲ್ಲಿ ನಡೆಯುತ್ತಿವೆ.ಎಂ.ಎಸ್ಸಿ (ಭೌತಶಾಸ್ತ್ರ):

ಈ ವರ್ಷದಿಂದ ಭೌತಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ (ಪಿ.ಜಿ) ಆರಂಭವಾಗಲಿದೆ. ಈಗಾಗಲೇ ಬಯೊಕೆಮಿಸ್ಟ್ರಿ ಹಾಗೂ ಮೈಕ್ರೊಬಯೊಲಜಿಯಲ್ಲಿ ಸ್ನಾತಕೋತ್ತರ ಕೇಂದ್ರವು ಇಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗಮನಾರ್ಹ.ಕಾಲೇಜಿನ ಶಿಕ್ಷಣ ಗುಣಮಟ್ಟವನ್ನು ಮೆಚ್ಚಿಕೊಂಡಿರುವ ನ್ಯಾಕ್ ಕಮಿಟಿಯು `ಎ~ ಗ್ರೇಡ್ ನೀಡಿರುವುದು ಕಾಲೇಜಿಗೆ ಇಂಬು ತಂದಿದೆ. ಕಾಲೇಜು ಹಾಗೂ ಪದವಿ ವಿಷಯಗಳ ಬಗ್ಗೆ ಇತರ ಮಾಹಿತಿ ಪಡೆಯಲು ಬಯಸುವವರು 08272-228334 ಇಲ್ಲಿಗೆ ಸಂಪರ್ಕಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.