ಗುರುವಾರ , ಏಪ್ರಿಲ್ 15, 2021
20 °C

ಕಲೆ ವಿಶ್ವಮಾನ್ಯ: ತೋಂಟದ ಸಿದ್ಧಲಿಂಗ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಟ್ಟೀಹಳ್ಳಿ: ಕಲೆ ಎನ್ನುವುದಕ್ಕೆ ಜಾತಿ ಭೇದಗಳಿಲ್ಲ. ಅದು ವಿಶ್ವಮಾನ್ಯವಾ ದುದು. ಇದಕ್ಕೆ ಮತ, ದೇಶ, ಭಾಷೆ ಯನ್ನು ಮೀರಿದ ಶಕ್ತಿಯಿದೆ. ಒಂಡು ಚಿತ್ರ ಸಾವಿರಾರು ಶಬ್ದಗಳನ್ನು ಸೆರೆ ಹಿಡಿಯಬಲ್ಲದು. ಶರಣರು ನುಡಿಗಳ ಮೂಲಕ ತತ್ವ ಮತ್ತು ಸಂದೇಶಗಳನ್ನು ನೀಡಿದರೆ ಛಾಯಾಚಿತ್ರಕಾರರು, ಕಲಾ ವಿದರು ಚಿತ್ರಗಳ ಮೂಲಕ ಅದನ್ನು ಸಾರುವ ಶಕ್ತಿ ಹೊಂದಿದ್ದಾರೆ ಎಂದು ಗದಗ ಡಂಬಳದ ತೋಂಟದಾರ್ಯ ಸಂಸ್ಥಾನ ಮಠದ ಸಿದ್ಧಲಿಂಗ ಸ್ವಾಮಿಗಳು ನುಡಿದರು.ಇಲ್ಲಿನ ಶ್ರೀ ಸಿದ್ದಲಿಂಗೇಶ್ವರ ಸಮು ದಾಯ ಭವನದಲ್ಲಿ ಜರುಗಿದ ಜಾಗತಿಕ ಛಾಯಾಚಿತ್ರ ದಿನಾಚರಣೆ ಸಂದರ್ಭದಲ್ಲಿ ವಾಶಂಪುರ ಅಭಿನಂದನಾ ಸಮಿತಿ ಮತ್ತು ಹಾವೇರಿ ಜಿಲ್ಲಾ ಛಾಯಾಚಿತ್ರಕಾರರ ಸಂಘದ ವತಿಯಿಂದ ರಟ್ಟೀಹಳ್ಳಿಯ ಛಾಯಾ ಚಿತ್ರಕಾರ ಶಂಕರಣ್ಣ ವಾಲಿ ಇವರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು.ಚಿತ್ರಗಳು ಮತ್ತು ಶಿಲ್ಪಗಳು ದೇಶದ ಇತಿಹಾಸವನ್ನು ಸಾರಿ ಹೇಳುತ್ತವೆ. ಲಿಯೋನಾರ್ಡ್ ಡಾ ವಿಂಚಿ ರಚಿಸಿದ ಮೋನಾಲಿಸಾ ಚಿತ್ರ ಇನ್ನೂ ಬಣ್ಣ ಕಳೆದುಕೊಳ್ಳದೇ ಅದೇ ಮುಗ್ಧ ನಗು ವನ್ನು ಹೊದ್ದು ಮಲಗಿದೆ. ದಶಕ- ದಶಕಗಳಿಂದ ಕೋಟ್ಯಂತರ ಜನರನ್ನು ಮುಗ್ಧಗೊಳಿಸಿದ ಚಿತ್ರವಿದು ಎಂದರು.ದಾವಣಗೆರೆಯ ಛಾಯಾಚಿತ್ರಕಾರ ಎಚ್.ಬಿ.ಮಂಜುನಾಥ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಹಾವೇರಿ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶಂಭು ನಂದಿ,  ತಾಲ್ಲೂಕು ಘಟಕದ ಅಧ್ಯಕ್ಷ ರತ್ನಾಕರ ಕಳಸೂರ, ಉದಯ ಹೊಸಮನಿ, ನಾಗರಾಜ ರಾಶಿನಕರ, ಶಿವಕುಮಾರ ಶಿಲವಂತ, ಮಹೇಶ ಮಾಸೂರ, ಗುರುರಾಜ ಪಾಟೀಲ, ಸುಭಾಸಚಂದ್ರ ಗುಡ್ಡೇರ, ಗ್ರಾಪಂ ಅಧ್ಯಕ್ಷ ಎಸ್.ಬಿ.ಪಾಟೀಲ, ಡಾ.ಇ.ಎಲ್.ನಾಡಗೇರ, ಶಶಿ ಸಾಲಿ, ಪಿ.ಡಿ.ಬಸನಗೌಡ್ರ, ವೈ.ಎಲ್.ಬಾಜೀ  ರಾಯರ, ರುದ್ರೇಶ ಬೆಣ್ಣಿ, ಉಜನೆಪ್ಪ ಬಣಕಾರ, ಎನ್.ಸಿ.ಕಠಾರೆ, ವಸಂತ ದ್ಯಾವಕ್ಕಳವರ, ಬಿ.ಕೆ.ಗೋವಿಂದ    ರಾಜಶೆಟ್ಟಿ, ಎಂ.ಬಿ.ಹರವಿಶೆಟ್ಟರ, ಶಂಬಣ್ಣ ಗೂಳಪ್ಪನವರ,           ಆರ್.ಜಿ.ದ್ಯಾವಕ್ಕಳವರ, ಭೋಜ ರಾಜ ಪವಾರ, ಮುರಳಿ ಬಾಜೀ ರಾಯರ, ಕರಿಯಪ್ಪ ಹಂಚಿನಮನಿ ಮತ್ತು ಜಿಲ್ಲೆಯಾದ್ಯಂತ ಬಂದಿದ್ದ ಛಾಯಾಚಿತ್ರಕಾರರು ಈ ಸಂದರ್ಭ ದಲ್ಲಿ ಭಾಗವಹಿಸಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.