ಕಲ್ಲಿದ್ದಲು ಪೂರೈಕೆ ಅಬಾಧಿತ

7

ಕಲ್ಲಿದ್ದಲು ಪೂರೈಕೆ ಅಬಾಧಿತ

Published:
Updated:

ರಾಯಚೂರು: ತೆಲಂಗಾಣ ಹೋರಾಟ ದಿಂದ ಶನಿವಾರ ಆರ್‌ಟಿಪಿಎಸ್ ಕಲ್ಲಿದ್ದಲು ಪೂರೈಕೆಗೆ ಮತ್ತು ಗೂಡ್ಸ್ ರೈಲು ಸಂಚಾರಕ್ಕೆ ಯಾವುದೇ ಅಡ್ಡಿ ಆಗಿಲ್ಲ ಎಂದು ತಿಳಿದುಬಂದಿದೆ.ಶನಿವಾರ ಮುಂಜಾನೆ ಐದು ರೇಕ್ ಕಲ್ಲಿದ್ದಲು ಪೂರೈಕೆಯಾಗಿದೆ. ಆರ್‌ಟಿಪಿಎಸ್‌ನ ಕಲ್ಲಿದ್ದಲು ಸಂಗ್ರಹಾಗಾರದಲ್ಲಿ ಇದೀಗ ಒಂದು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಸಂಗ್ರಹವಿದೆ. ಐದು ಘಟಕ ಗಳಿಂದ 850 ಮೆಗಾವಾಟ್ ವಿದ್ಯುತ್ ಉತ್ಪಾದನೆ ಆಗಿದೆ ಎಂದು ಆರ್‌ಟಿಪಿಎಸ್ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry