ಸೋಮವಾರ, ಜೂನ್ 21, 2021
30 °C

ಕಲ್ಲು ಎತ್ತಿಹಾಕಿ ವ್ಯಕ್ತಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆ.ಪಿ.ನಗರ ಸಮೀಪದ ಎಲ್‌ಐಸಿ ಕಾಲೊನಿಯಲ್ಲಿ ಶನಿವಾರ ರಾತ್ರಿ ಎ.ಪುಲ್ಲಯ್ಯ (40) ಎಂಬುವರ ಮೇಲೆ ಸಂಬಂಧಿಕನೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.ಎ.ಪುಲ್ಲಯ್ಯ, ಆಂಧ್ರಪ್ರದೇಶ ಮೂಲ­ದವರು. ಅವರ ತಂಗಿಯ ಪತಿ ಡಿ.ಪುಲ್ಲಯ್ಯ ಎಂಬಾತ ಈ ಕೊಲೆ ಮಾಡಿ­ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಎಲ್‌ಐಸಿ ಕಾಲೊನಿಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದ ಅವರಿಬ್ಬರೂ ಕುಟುಂಬ ಸದಸ್ಯರೊಂದಿಗೆ ಆ ಕಟ್ಟಡದಲ್ಲೇ ವಾಸವಾಗಿದ್ದರು. ಡಿ.ಪುಲ್ಲಯ್ಯ ಮದ್ಯ­ಪಾನ ಮಾಡಲು ಹಣ ಕೊಡುವಂತೆ ಎ.ಪುಲ್ಲಯ್ಯನಿಗೆ ಕೇಳಿದ್ದಾನೆ. ಆದರೆ, ಅವರು ಹಣ ಕೊಡಲು ನಿರಾಕರಿಸಿ­ದ್ದಾರೆ.ಇದರಿಂದ ಕೋಪಗೊಂಡ ಆತ ಅವರೊಂದಿಗೆ ಜಗಳವಾಡಿದ್ದಾನೆ. ನಂತರ ಕುಟುಂಬ ಸದಸ್ಯರೆಲ್ಲಾ ಮಲ­ಗಿದ್ದ ಸಂದರ್ಭದಲ್ಲಿ ರಾತ್ರಿ ಎರಡು ಗಂಟೆ ಸುಮಾರಿಗೆ ಆತ ಅವರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿ­ಯಾಗಿ­­ದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.