ಹರಪನಹಳ್ಳಿ: ಅಕ್ಷರ ದಾಸೋಹದ ಬಿಸಿಯೂಟ ಯೋಜನೆ ಅಡಿ ವಿದ್ಯಾರ್ಥಿಗಳಿಗೆ ನಿತ್ಯವೂ ಅರೆಬೆಂದ ಅನ್ನ ಹಾಗೂ ನೀರು ಸಾರು ನೀಡಲಾಗುತ್ತದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಬುಧವಾರ ಸಿಂಗ್ರಿಹಳ್ಳಿ ಗ್ರಾಮ ಪಂಚಾಯ್ತಿ ಹಾಗೂ ಶಾಲೆಯ ಮುಂದೆ ಪ್ರತಿಭಟನೆ ಮಾಡಿದರು.

ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರುವ ಬಿಸಿಯೂಟ ಕಾರ್ಯಕರ್ತೆಯರನ್ನು ತಕ್ಷಣವೇ ಸೇವೆಯಿಂದ ವಜಾ ಮಾಡಬೇಕು ವಿದ್ಯಾರ್ಥಿಗಳು ಆಗ್ರಹಿಸಿದರು.

ಕಳಪೆ ಗುಣಮಟ್ಟದ ಆಹಾರ ಸೇವನೆ ಮಾಡಲು ನಿರಾಕರಿಸಿದ ವಿದ್ಯಾರ್ಥಿಗಳು ಖಾಲಿ ತಟ್ಟೆಗಳನ್ನು ಕೈಯಲ್ಲಿ ಹಿಡಿದುಕೊಂಡು, ಘೋಷಣೆ ಕೂಗುತ್ತಾ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ, ಗ್ರಾಮ ಪಂಚಾಯ್ತಿ ಕಚೇರಿ ಬಳಿ ಮುಂದೆಯೂ ಕೆಲ ಕಾಲ ಪ್ರತಿಭಟನೆ ನಡೆಸಿದರು. ನಂತರ ಶಾಲಾ ಆವರಣದಲ್ಲಿ ಕುಳಿತು ಘೋಷಣೆ ಕೂಗಿದರು.

ಅನ್ನ ಅರೆಬೆಂದಿರುತ್ತದೆ. ಸಾಂಬಾರಿನ ಎಣ್ಣೆ, ಬೇಳೆ, ತರಕಾರಿ ಸೇರಿದಂತೆ ಇತರೆ ಆಹಾರ ಸಾಮಗ್ರಿಯನ್ನು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪಯೋಗಿಸುತ್ತಿಲ್ಲ. ಹೀಗಾಗಿ ಇಡೀ ಸಾಂಬಾರು ನೀರು ನೀರಾಗಿರುತ್ತದೆ. ಉಪ್ಪಿಟ್ಟನ್ನೂ ಸರಿಯಾಗಿ ಬೇಯಿಸುವುದಿಲ್ಲ. ಕಲ್ಲು, ಕಸ- ಕಡ್ಡಿ, ತಂತಿಯ ಚೂರು ಹಾಗೂ ಹುಳುಗಳು ಅನ್ನದಲ್ಲಿರುತ್ತವೆ ಎಂದು ಆರೋಪಿಸಿದರು.

ಈ ಬಗ್ಗೆ ಕೇಳಿದರೆ, ‘ತಿಂದರೆ, ತಿನ್ನಿ. ಇಲ್ಲವಾದರೇ ಮನೆಗೆ ಹೋಗಿ ತಿಂದು ಬನ್ನಿ ಎಂದು ದಬಾಯಿಸುತ್ತಾರೆ. ಈ ಕುರಿತು ಶಿಕ್ಷಕರ ಹಾಗೂ ಎಸ್ಡಿಎಂಸಿ ಗಮನಕ್ಕೂ ತಂದರೂ ಅವರು ಯಾರ ಮಾತನ್ನೂ ಕೇಳುತ್ತಿಲ್ಲ. ಏನಾದರೂ ಹೆಚ್ಚು ಕಡಿಮೆಯಾಗಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಯಾರು ಗತಿ?’ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮಕ್ಕಳ ಹಕ್ಕುಗಳ ಕ್ಲಬ್ನ ಶಶಿಧರ, ಯೋಗೇಶ್, ಗೋಪಾಲ್, ಬಸವರಾಜ, ಕಿರಣ್, ಮೀನಾ ತಂಡದ ಅನಿತಾ, ಎ.ಪಿ.ವನಜಾಕ್ಷಿ, ಸಿ.ಪ್ರಿಯಾಂಕಾ, ಕೆ.ಎ.ಚೈತ್ರಾ ಸೇರಿದಂತೆ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ, ಗ್ರಾ.ಪಂ. ಸದಸ್ಯರಾದ ಮಹಾಂತೇಶ, ಟಿ.ಶಿವಪ್ಪ, ನೀರು ಬಳಕೆದಾರರ ಸಹಕಾರಿ ಸಂಘದ ಅಧ್ಯಕ್ಷ ಟಿ.ಶೇಖರಪ್ಪ, ಎಸ್ಡಿಎಂಸಿ ಸದಸ್ಯರಾದ ಪ್ರವೀಣ್, ಟಿ.ಭೀಮಪ್ಪ, ಬಿ.ಯಲ್ಲಪ್ಪ ಪ್ರತಿಭಟನೆ ಬೆಂಬಲಿಸಿದರು.

ವರದಿ ಸಲ್ಲಿಕೆ ಭರವಸೆ
ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಸರ್ಕಾರಿ ಮಾರ್ಗಸೂಚಿ ಪ್ರಕಾರ ಆಹಾರಧಾನ್ಯ, ಎಣ್ಣೆ ಹಾಗೂ ತರಕಾರಿ ವಿತರಣೆ ಮಾಡುತ್ತೇವೆ. ಆದರೂ, ಅಡುಗೆ ಸಿಬ್ಬಂದಿ ನಿರ್ಲಕ್ಷ್ಯತನದಿಂದ ಅಡುಗೆಯನ್ನು ಸರಿಯಾಗಿ ಮಾಡುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ದೂರು. ಈ ಕುರಿತು ಸಾಕಷ್ಟು ಸಲ ಎಚ್ಚರಿಕೆ ಕೊಟ್ಟಿದ್ದೇವೆ. ಆದರೂ ಅವರು ಯಾರ ಮಾತನ್ನು ಗಣನೆಗೆ ತೆಗೆದುಕೊಂಡಿಲ್ಲದ ಪರಿಣಾಮ, ಮಕ್ಕಳೇ ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಕುರಿತು ಇಲಾಖೆ ಮೇಲಧಿಕಾರಿಗೆ ವರದಿ ಸಲ್ಲಿಸುತ್ತೇವೆ

-–ಆರ್.ರಾಜಣ್ಣ, ಮುಖ್ಯ ಶಿಕ್ಷಕ.

ಕ್ರಮ ಕೈಗೊಳ್ಳುತ್ತೇವೆ..
ಅಡುಗೆ ಸಿಬ್ಬಂದಿ ವಿರುದ್ಧ ಮಕ್ಕಳು ನಡೆಸಿರುವ ಹೋರಾಟವನ್ನು ನಾವೇ ಕಣ್ಣಾರೆ ನೋಡಿದ್ದೇವೆ. ಶಾಲೆಗೆ ಬಂದು ಪರಿಶೀಲಿಸಿದಾಗ ವಿದ್ಯಾರ್ಥಿಗಳ ದೂರು ನಮಗೆ ಮನವರಿಕೆ ಆಗಿದೆ. ಕೂಡಲೇ ಅಡುಗೆ ಸಿಬ್ಬಂದಿ ಬದಲಾವಣೆಗೆ ಕ್ರಮ ಕೈಗೊಳ್ಳುತ್ತೇವೆ .

–ಟಿ.ಮಹಾಂತೇಶ, ಗ್ರಾಮ ಪಂಚಾಯ್ತಿ ಸದಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.