ಸೋಮವಾರ, ಜೂನ್ 14, 2021
27 °C
ನಕಲಿ ಕೀ ಬಳಸಿ ಬೈಕ್‌ ಕದಿಯುತ್ತಿದ್ದ ಬಿಸಿಎ ವಿದ್ಯಾರ್ಥಿ

ಕಳ್ಳರ ಬಂಧನ: 19 ಬೈಕ್‌ ವಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಕ್‌ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ನಗರ ಉತ್ತರ ವಿಭಾಗದ ಪೊಲೀಸರು 19 ಬೈಕ್‌ಗಳನ್ನು ವಶ­ಪಡಿಸಿ­­ಕೊಂಡಿ­ದ್ದಾರೆ. ಬಿಸಿಎ ವಿದ್ಯಾರ್ಥಿ ಕಾಶುಂಗ್ ಚುಯಾಂಗ್(24) ಎಂಬಾ­ತ­ನನ್ನು ಬಂಧಿ­­ಸಿ­ರುವ ಮಲ್ಲೇ­ಶ್ವರ ಪೊಲೀಸರು, ₨ 9 ಲಕ್ಷ ಮೌಲ್ಯದ 9 ಬೈಕ್‌ ವಶ­ಪಡಿಸಿಕೊಂಡಿ­ದ್ದಾರೆ.ಮಣಿಪುರ ಮೂಲದ ಚುಯಾಂಗ್‌, ಎರಡು ವರ್ಷಗಳಿಂದ ನಗರದ ಆರ್‌.ಟಿ.­­ನಗರ­ದಲ್ಲಿ ವಾಸವಿದ್ದಾನೆ. ನಗ­ರದ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಬಿಸಿಎ ಓದು­ತ್ತಿರುವ ಆತ ಮೋಜಿನ ಜೀವನಕ್ಕಾಗಿ ಬೈಕ್‌­ಗಳನ್ನು ಕಳವು ಮಾಡುತ್ತಿದ್ದ ಎಂದು ಪೊಲೀ­ಸರು ತಿಳಿಸಿದ್ದಾರೆ.

ಕೋರಮಂಗಲ, ಇಂದಿರಾನಗರ, ಜೆ.ಪಿ.ನಗರ, ಹುಳಿಮಾವು ಸೇರಿದಂತೆ ನಗ­ರದ ವಿವಿಧ ಕಡೆಗಳಲ್ಲಿ ಆರೋಪಿ ನಕಲಿ ಕೀ­ಗಳನ್ನು ಬಳಸಿ ಬೈಕ್‌ಗಳನ್ನು ಕಳವು ಮಾಡು­ತ್ತಿದ್ದ. ರಾತ್ರಿ ವೇಳೆ ಮನೆಯ ಎದುರು ನಿಲ್ಲಿಸಿದ್ದ ಬೈಕ್‌­ ಕಳವು ಮಾಡು­ತ್ತಿದ್ದ ಆತ, ಬಳಿಕ ವಾಹನ ಸಂಖ್ಯೆ ಬದಲಿಸು­ತ್ತಿದ್ದನು.ಇತ್ತೀಚೆಗೆ ಆರೋಪಿ ಮಲ್ಲೇಶ್ವರ­ದಲ್ಲಿ ಮನೆಯ ಎದುರು ನಿಲ್ಲಿಸಿದ್ದ ಬೈಕ್‌ ಕಳವು ಮಾಡಿದ್ದ. ಮನೆಯ ಎದುರು ಅಳ­ವಡಿಸ­ಲಾ­ಗಿದ್ದ ಸಿ.ಸಿ ಟಿ.ವಿ ಕ್ಯಾಮೆರಾ­ದಲ್ಲಿ ಈ ದೃಶ್ಯ ದಾಖ­ಲಾ­ಗಿತ್ತು. ದೃಶ್ಯಗಳಿಂದ ಸಿಕ್ಕ ಆತನ ಚಹ­ರೆಯ ಆಧಾರದ ಮೇಲೆ ಕಾರ್ಯಾ­­­ಚರಣೆ ನಡೆಸಿ ಆತನನ್ನು ಬಂಧಿಸ­­ಲಾ­ಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಮಣಿಪುರಕ್ಕೆ ಮಾರುತ್ತಿದ್ದ: ನಗರ­ದಲ್ಲಿ ಬೈಕ್‌­ಗಳನ್ನು ಕಳವು ಮಾಡುತ್ತಿದ್ದ ಆರೋಪಿ, ಬೈಕ್‌ಗಳಿಗೆ ನಕಲಿ ದಾಖಲೆ ಸೃಷ್ಟಿಸಿ ರೈಲಿನ ಮೂಲಕ ಮಣಿಪುರಕ್ಕೆ ಸಾಗಿಸಿ, ಅಲ್ಲಿ ಅವುಗಳನ್ನು ಮಾರು­ತ್ತಿದ್ದ. ರಾಯಲ್‌ ಎನ್‌ಫೀಲ್ಡ್‌ ಮತ್ತು ಯಮಹಾ ಬೈಕ್‌ಗಳನ್ನೇ ಆರೋಪಿ ಹೆಚ್ಚು ಕಳವು ಮಾಡುತ್ತಿದ್ದ ಎಂದು ತನಿಖಾ­ಧಿಕಾರಿಗಳು ತಿಳಿಸಿದ್ದಾರೆ.ಮತ್ತೊಂದು ಪ್ರಕರಣ: ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಮುನಿ­­ಸ್ವಾಮಿ (22) ಎಂಬಾತನನ್ನು ಬಂಧಿ­ಸಿ­ರುವ ಆರ್­ಎಂಸಿ ಯಾರ್ಡ್ ಪೊಲೀ­ಸರು, 10 ಬೈಕ್‌  ವಶ­ಪಡಿಸಿ­ಕೊಂಡಿ­ದ್ದಾರೆ.ಪೀಣ್ಯದ ಆಶ್ರಯನಗರ ನಿವಾಸಿ ಮುನಿ­­ಸ್ವಾಮಿ, ಖಾಸಗಿ ಕಂಪೆನಿ­ಯೊಂದ­ರಲ್ಲಿ ಕೆಲಸ ಮಾಡು­ತ್ತಿದ್ದ. ವರ್ಷದ ಹಿಂದೆ ಕೆಲಸ ಬಿಟ್ಟಿದ್ದ ಆತ ಬೈಕ್‌ ಕಳವು ಮಾಡು­ವುದನ್ನೇ ವೃತ್ತಿಯಾಗಿ­ಸಿ­ಕೊಂ­ಡಿದ್ದ. ಆರೋಪಿಯು ಮನೆಗಳ ಎದುರು ಹಾಗೂ ವಾಹನ ನಿಲುಗಡೆ ಸ್ಥಳದಲ್ಲಿ ನಿಲ್ಲಿ­­ಸಿದ್ದ ಬೈಕ್‌ ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ ಎಂದು ಪೊಲೀ­ಸರು ತಿಳಿಸಿದ್ದಾರೆ. ಮಾ.15ರ ರಾತ್ರಿ ಆತ ಆರ್‌ಎಂಸಿ ಯಾರ್ಡ್‌ ಬಳಿ ನಿಲ್ಲಿ­ಸಿದ್ದ ಬೈಕ್‌ ಕಳವು ಮಾಡಲು ಯತ್ನಿಸಿದ್ದ. ಈ ವೇಳೆ ಗಸ್ತಿ­ನಲ್ಲಿದ್ದ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದು­ಕೊಂಡಿ­ದ್ದಾರೆ. ಆತನ ವಿಚಾ­ರಣೆ­ಯಿಂದ ಬಸ­ವೇ­ಶ್ವರ­­ನಗರ, ನಂದಿನಿ ಲೇ­ಔಟ್‌ ಠಾಣೆಗಳ ವ್ಯಾಪ್ತಿಯ ಬೈಕ್‌ ಕಳವು ಪ್ರಕರಣ ಬೆಳಕಿಗೆ ಬಂದಿವೆ ಎಂದು ಪೊಲೀಸರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.