ಭಾನುವಾರ, ಜನವರಿ 26, 2020
28 °C

ಕಸ ತೆರವುಗೊಳಿಸಿ

–ಜೆ. ಆರ್‌. ಆದಿನಾರಾಯಣಮುನಿ Updated:

ಅಕ್ಷರ ಗಾತ್ರ : | |

ನಗರದ ಖೋಡೆ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದವರೆಗಿನ ಮೇಲ್ಸೇತುವೆಯ ಎಡಬಲದ ರಕ್ಷಕ ಗೋಡೆಯ ಕೆಳಬದಿ ಗುಡಿಸಿ ಗುಡ್ಡೆ ಹಾಕಿದ ಕಸ ಮತ್ತು ಮಣ್ಣಿನ ರಾಶಿಯಿದ್ದು, ವಾಹನಗಳಲ್ಲಿ ಬರುವಾಗ ರಭಸಕ್ಕೆ ಕಸ ಹಾಗೂ ದೂಳು ಮೈಮೇಲೆ ಬೀಳುವುದಲ್ಲದೆ ಕಣ್ಣುಗಳಿಗೂ ರಾಚುವುದರಿಂದ ಅಪಘಾತಗಳಾಗುವ ಸಂಭವವಿರುತ್ತದೆ.ಆದ್ದರಿಂದ ಈ ರೀತಿ ಗುಡಿಸಿ ಗುಡ್ಡೆಹಾಕಿದ ಮಣ್ಣು ಹಾಗೂ ಕಸವನ್ನು ತಕ್ಷಣ ತೆರವುಗೊಳಿಸಿ, ನಗರದ ನಾಗರೀಕರು ನಿರುಮ್ಮಳವಾಗಿ ಸಂಚರಿಸುವಂತೆ ಅನುವು ಮಾಡಿಕೊಡ ಬೇಕೆಂದು ಅಧಿಕಾರಿಗಳಲ್ಲಿ ಮನವಿ.

ಪ್ರತಿಕ್ರಿಯಿಸಿ (+)