ಸೋಮವಾರ, ಏಪ್ರಿಲ್ 12, 2021
24 °C

ಕಾಂಗ್ರೆಸ್:ಟಿಕೆಟ್ ಆಕಾಂಕ್ಷಿತರ ಅಭಿಪ್ರಾಯ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪೇಟೆ : ಕಾಂಗ್ರೆಸ್ ಪಕ್ಷದ ವತಿಯಿಂದ ಕೃಷ್ಣರಾಜಪೇಟೆ ಕ್ಷೇತ್ರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಯಸುವ ಆಕಾಂಕ್ಷಿತರ ಬಗ್ಗೆ ಮಾಹಿತಿ ಸಂಗ್ರಹಿಸಲು ಕೆಪಿಸಿಸಿ ವೀಕ್ಷಕರ ತಂಡ ಸೋಮವಾರ ಪಟ್ಟಣಕ್ಕೆ ಭೇಟಿ ನೀಡಿ ಮುಖಂಡರ ಮತ್ತು ಕಾರ್ಯಕರ್ತರ ಅಭಿಪ್ರಾಯವನ್ನು ಆಲಿಸಿದರು.ಕೆಪಿಸಿಸಿ ಕಾರ್ಯದರ್ಶಿ ನಫೀಜಾ ಬೇಗಂ, ಶಾಸಕ ಎ.ಮಂಜು, ವಿಧಾನಪರಿಷತ್ ಮಾಜಿ ಸದಸ್ಯರಾದ ಹಸನಬ್ಬ, ಆರ್.ವಿ.ದೇವರಾಜ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮತ್ತಿತರರು ತಂಡದಲ್ಲಿದ್ದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಕ್ಷದ ಕಾರ್ಯಕರ್ತರಿಂದ ಮಾಹಿತಿ ಪಡೆದರು. ಒಂದು ಹಂತದಲ್ಲಿ ಶಾಸಕ ಕೆ.ಬಿ.ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್, ಜಿಲ್ಲಾ ಪಂಚಾಯಿತಿ  ಮಾಜಿ ಸದಸ್ಯ ಬಿ.ನಾಗೇಂದ್ರಕುಮಾರ್ ಪರವಾಗಿ ಅವರ ಬೆಂಬಲಿಗರು ಘೋಷಣೆ ಮೊಳಗಿಸಿ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ವೀಕ್ಷಕರ ಗಮನ ಸೆಳೆಯಲು ಪ್ರಯತ್ನಿಸಿದರು.ಆಗ ಮಧ್ಯೆ ಪ್ರವೇಶಿಸಿದ ವೀಕ್ಷಕರು ಕಾರ್ಯಕರ್ತರು ಗದ್ದಲ ಮಾಡಿದರೆ ಏನೂ ಅರ್ಥವಾಗುವುದಿಲ್ಲ. ಎಲ್ಲರೂ ಸಾವಧಾನದಿಂದ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು ಎಂದು ಮನವಿ ಮಾಡಿ ಗದ್ದಲವನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಪಕ್ಷದ ಬ್ಲಾಕ್ ಅಧ್ಯಕ್ಷರಾದ ಎಂ.ಡಿ.ಕೃಷ್ಣಮೂರ್ತಿ, ಜಿ.ಕೆ.ರುಕ್ಮಾಂಗದ, ಜಿಲ್ಲಾ ಎಸ್.ಟಿ. ಘಟಕದ ಅಧ್ಯಕ್ಷ ಆರ್.ಜಗದೀಶ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶೀಲಾ ಪಾಂಡುರಂಗೇಗೌಡ, ಆದಿಹಳ್ಳಿ ಮೀನಾಕ್ಷಿ, ಪಕ್ಷದ ಮುಖಂಡರಾದ ಕೆ.ಯೂನುಸ್‌ಖಾನ್, ಎ.ಬಿ.ಜವರಪ್ಪ, ಪಾಪೇಗೌಡ, ಕೆ.ಬಿ.ಈಶ್ವರಪ್ರಸಾದ್, ರವೀಂದ್ರಬಾಬು, ಕೋಡಿಮಾರನಹಳ್ಳಿ ದೇವರಾಜ್ ಸಭೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.