ಭಾನುವಾರ, ಜೂನ್ 13, 2021
26 °C
ಜಾಫರ್ ಷರೀಫ್‌ಗೆ ತಪ್ಪಿದ ಟಿಕೆಟ್

ಕಾಂಗ್ರೆಸ್‌ಗೆ ವ್ಯಕ್ತಿಗಿಂತ ಪಕ್ಷದ ಸಿದ್ಧಾಂತ ಮುಖ್ಯ: ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಪಕ್ಷದ ಹಿರಿಯ ಮುಖಂಡರು, ಕೇಂದ್ರ ಮಾಜಿ ಸಚಿವ ಜಾಫರ್ ಷರೀಫ್ ಅವರಿಗೆ ಪಕ್ಷ ಟಿಕೆಟ್ ಈ ಬಾರಿ ಕೊಟ್ಟಿಲ್ಲ. ಹಾಗಂತ ಅದರಿಂದ ಪಕ್ಷದ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ವ್ಯಕ್ತಿಗಿಂತ ಪಕ್ಷದ

ಸಿದ್ಧಾಂತ ಮುಖ್ಯವಾಗಿದೆ.ಮುಖ್ಯಮಂತ್ರಿಗಳು ಶರೀಫ್ ಅವರ ಜೊತೆಗೆ ಮಾತುಕತೆ ನಡೆಸಿ  ಅಸಮಾಧಾನ ಹೋಗಲಾ­ಡಿ­ಸುವ ಪ್ರಯತ್ನ ಮಾಡಿದ್ದಾರೆ ಎಂದು ರಾಜ್ಯ ಅಬಕಾರಿ ಖಾತೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಬುಧವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ  ಮುಖಂಡರು, ಮುಖಂಡರು, ಪದಾ­ಧಿಕಾರಿ­ಗಳೊಂದಿಗೆ ಸಭೆ ನಡೆಸಲು ಅವರು ಸುದ್ದಿಗಾರ­ರೊಂದಿಗೆ ಮಾತನಾಡಿದರು.ಷರೀಫ್‌ ಅವರಿಗೆ ಟಿಕೆಟ್ ದೊರ­ಕಿಲ್ಲ ಎಂಬ ಕಾರಣಕ್ಕೆ ಅಲ್ಪ­ಸಂಖ್ಯಾತರ ಮತಗಳು ಕಾಂಗ್ರೆಸ್ ಪಕ್ಷದಿಂದ ವಿಭಜನೆ ಆಗುತ್ತದೆ ಎಂಬುದರಲ್ಲಿ ಅರ್ಥವಿಲ್ಲ ಎಂದು ಹೇಳಿದರು.ರಾಜ್ಯದಲ್ಲಿ ಮೋದಿ ಅವರ ಅಲೆ ಎಲ್ಲೂ ಇಲ್ಲ. ಕಾಂಗ್ರೆಸ್ ಪಕ್ಷವು ತನ್ನ ಶಕ್ತಿಯೊಂದಿಗೆ ರಾಜ್ಯದ ಎಲ್ಲ ಸ್ಥಾನ ಗೆಲ್ಲುವ ಆಶಯ ಹೊಂದಿದೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.