ಭಾನುವಾರ, ಜೂನ್ 13, 2021
21 °C

ಕಾಂಗ್ರೆಸ್ ಜತೆ ವಿಲೀನ ಇಲ್ಲ: ಟಿಆರ್‌ಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಕಾಂಗ್ರೆಸ್‌ ಜೊತೆಗೆ ವಿಲೀನ ಆಗದಿರಲು ಪ್ರತ್ಯೇಕ ತೆಲಂಗಾಣ ರಾಜ್ಯ ಹೋರಾಟದ ಮುಂಚೂಣಿಯಲ್ಲಿದ್ದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌)  ಸೋಮವಾರ ತೀರ್ಮಾನಿಸಿದೆ.ಕಾಂಗ್ರೆಸ್‌ ಪಕ್ಷವೂ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಅವಕಾಶವನ್ನು ಟಿಆರ್‌ಎಸ್‌ ಮುಕ್ತವಾಗಿರಿಸಿದೆ.

ಪ್ರತ್ಯೇಕ ರಾಜ್ಯ ಹೋರಾಟ ಯಶಸ್ವಿಯಾದ ನಂತರವೂ ಟಿಆರ್‌ಎಸ್‌ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವಿರೋಧವಾಗಿ ನಿರ್ಧರಿಸಲಾಗಿದೆ ಎಂದು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ ತೆಲಂಗಾಣ ಭವನದಲ್ಲಿ ನಡೆದ ಸಭೆಯ ನಂತರ ಹೇಳಿದರು.ಪತ್ರಗಳು, ಸಂದೇಶಗಳು ಮತ್ತು ಸಾಮಾಜಿಕ ಮಾಧ್ಯಮದ ಮೂಲಕ ಪಕ್ಷದ ಸದಸ್ಯರು ಮತ್ತು ಪ್ರಾಂತ್ಯದ ಜನರು ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡದಂತೆ ಕೋರಿದ್ದಾರೆ ಎಂದು ಅವರು ತಿಳಿಸಿದ್ದಾರೆ.ಇತರ ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ನಡೆಸುವುದಕ್ಕೆ ರಾಜ್ಯ ಸಭಾ ಸದಸ್ಯ ಕೆ. ಕೇಶವ ರಾವ್‌ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಮುಂದಿನ ಚುನಾವಣೆ ನಂತರ ಕಾಂಗ್ರೆಸ್‌ ಕೇಂದ್ರದಲ್ಲಿ ಸರ್ಕಾರ ರಚಿಸುವುದಾದರೆ ಅವರಿಗೆ ಬೆಂಬಲ ನೀಡುವ ಬಗ್ಗೆಯೂ ಚಿಂತಿಸಬಹುದು ಎಂದು ಚಂದ್ರಶೇಖರ್‌ ಅವರು ಹೇಳಿದ್ದಾರೆ.ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಬಗ್ಗೆ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಿರ್ಧಾರ ಕೈಗೊಂಡಲ್ಲಿಂದ ಮಸೂದೆ ಅಂಗೀಕಾರವಾಗುವವರೆಗೆ ಟಿಆರ್‌ಎಸ್‌ನೊಂದಿಗೆ ಕಾಂಗ್ರೆಸ್ ಪಕ್ಷ ಸಮಾಲೋಚನೆ ನಡೆಸಿಯೇ ಇಲ್ಲ. ಟಿಆರ್‌ಎಸ್‌ ಪ್ರಸ್ತಾವಿಸಿದ ಹಲವು ಸಲಹೆಗಳನ್ನು ಕಾಂಗ್ರೆಸ್‌ ಹೈಕಮಾಂಡ್‌ ತಿರಸ್ಕರಿಸಿದ ರೀತಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಚಂದ್ರಶೇಖರ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.