ಶುಕ್ರವಾರ, ಫೆಬ್ರವರಿ 26, 2021
30 °C

ಕಾಂಗ್ರೆಸ್ ಪ್ರಣಾಳಿಕೆ: ಆರೋಗ್ಯದ ಹಕ್ಕು, ವಸತಿ ಸವಲತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್ ಪ್ರಣಾಳಿಕೆ: ಆರೋಗ್ಯದ ಹಕ್ಕು, ವಸತಿ ಸವಲತ್ತು

ನವದೆಹಲಿ (ಐಎಎನ್ಎಸ್): 2014ರ ಲೋಕಸಭಾ ಚುನಾವಣೆಗಾಗಿ ಬುಧವಾರ ಬಿಡುಗಡೆ ಮಾಡಲಾದ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಆರೋಗ್ಯದ ಹಕ್ಕು ಮತ್ತು ವಸತಿ ಸವಲತ್ತನ್ನು ಪ್ರಮುಖ ಭರವಸೆಯಾಗಿ ನೀಡಿದೆ.ಸಮಾರಂಭವೊಂದರಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಷ್ಟ್ರದ ವಿವಿಧ ಭಾಗಗಳ ಜನರ ಜೊತೆಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಪ್ರಣಾಳಿಕೆಯನ್ನು ಸಿದ್ಧ ಪಡಿಸಲಾಗಿದೆ ಎಂದು ಹೇಳಿದರು.ರಾಹುಲ್ ಗಾಂಧಿ ಅವರು ಭಾರತದ ವಿವಿಧ ಭಾಗಗಳ ಜನರ ಜೊತೆಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳು ಮತ್ತು ಆಶಯಗಳನ್ನು ಒಟ್ಟು ಸೇರಿಸಿದ್ದಾರೆ. ಎಲ್ಲ ಸಲಹೆಗಳನ್ನೂ ಈ ಪ್ರಣಾಳಿಕೆಯಲ್ಲಿ ಸೇರಿಸಲು ಸಾಧ್ಯವಿಲ್ಲದ ಕಾರಣ ಉಳಿದ ಸಲಹೆಗಳನ್ನು ಮುಂದಿನ ಕೆಲವು ದಿನಗಳಲ್ಲಿ ನಾವು ಬಿಡುಗಡೆ ಮಾಡಲಿದ್ದೇವೆ ಎಂದು ಪಕ್ಷದ ಮುಖ್ಯಸ್ಥೆ ನುಡಿದರು.ರೈತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಅಗತ್ಯಗಳನ್ನು ಪೂರೈಸುವ ಯತ್ನವನ್ನು ಪ್ರಣಾಳಿಕೆ ಮಾಡಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು.'ಇದು ಪ್ರಗತಿ ಸಾಧನೆಯ ಮುನ್ನೋಟದ ದಾಖಲೆ. ಇದು ರಾಷ್ಟ್ರದ ಜನರ ಅಗತ್ಯಗಳ ಬಗೆಗಿನ ಸ್ಪಂದನೆ' ಎಂದು ಅವರು ಬಣ್ಣಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.