ಬೆಂಗಳೂರು: ಕಾಟನ್ಪೇಟೆಯಲ್ಲಿ ನಡೆದಿದ್ದ ಬಬಿತಾದೇವಿ ದಂಪತಿ ಕೊಲೆ ಪ್ರಕರಣವನ್ನು ಭೇದಿಸಿರುವ ನಗರ ಪೊಲೀಸರು ಹಿಜಡಾ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.`ಹಿಜಡಾ ಪಿ.ಕೆ. ತಮ್ಮಯ್ಯ ಅಲಿಯಾಸ್ ಕಿರಣ್ (24) ಮತ್ತು ರಮೇಶ್ ಅಲಿಯಾಸ್ ರವಿ (26) ಬಂಧಿತರು.

ಪ್ರಕರಣದ ಪ್ರಮುಖ ಆರೋಪಿ ಸೈಯದ್ ಆಲಿ ಅಲಿಯಾಸ್ ಕಾರ್ತಿಕ್ ತಲೆ ಮರೆಸಿಕೊಂಡಿದ್ದಾನೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
`ಪವನ್ಕುಮಾರ್ ಶರ್ಮಾ ಮತ್ತು ಬಬಿತಾದೇವಿ ದಂಪತಿ ಕಾಟನ್ಪೇಟೆ ಮುಖ್ಯರಸ್ತೆಯಲ್ಲಿ ಮೂರು ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದರು.

ಹೋಟೆಲ್ಗೆ ಹೊಂದಿಕೊಂಡಂತೆಯೇ ಒಳ ಭಾಗದಲ್ಲಿರುವ ಕೊಠಡಿಯಲ್ಲಿ ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡುತ್ತಿದ್ದ ಸೈಯದ್, ಪ್ರತಿನಿತ್ಯ ಬಬಿತಾದೇವಿ ಅವರ ಹೋಟೆಲ್ಗೆ ಊಟಕ್ಕೆ ಹೋಗುತ್ತಿದ್ದ. ಅವರ ಬಳಿ ಹಣ ಇರುವುದನ್ನು ಗಮನಿಸಿದ ಸೈಯದ್, ಅದನ್ನು ದೋಚಲು ಸಂಚು ರೂಪಿಸಿದ್ದ. ಈ ಕೃತ್ಯ ಎಸಗಲು ಸಹಚರರನ್ನು ಹುಡುಕುತ್ತಿದ್ದ ವೇಳೆ ಆತನಿಗೆ ನಗರ ರೈಲು ನಿಲ್ದಾಣದಲ್ಲಿ ತಮ್ಮಯ್ಯ ಮತ್ತು ರಮೇಶ್ ಪರಿಚಿತರಾಗಿದ್ದರು~ ಎಂದು ಅವರು ಹೇಳಿದರು.

ಹೋಟೆಲ್ನಲ್ಲಿ ಕೆಲಸ ಖಾಲಿ ಇದೆ ಎಂಬ ಬಗ್ಗೆ ತಿಳಿದ ಸೈಯದ್, ತಾನು ಕಾರ್ತಿಕ್ ಎಂದು ದಂಪತಿಗೆ ಪರಿಚಯಿಸಿಕೊಂಡು ತಾನೇ ಕೆಲಸಕ್ಕೆ ಸೇರಿಕೊಳ್ಳುವುದಾಗಿ ಅವರ ಮನವೊಲಿಸಿದ್ದ. ಅದರಂತೆ ಜು. 29ರಂದು ಆ ಹೋಟೆಲ್ನಲ್ಲಿ ಕೆಲಸಕ್ಕೆ ಸೇರಿದ್ದ ಆತ, ಬಬಿತಾ ದಂಪತಿಯ ಜತೆ ಹೋಟೆಲ್ನಲ್ಲೇ ವಾಸವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ (ಆ. 1) ಪವನ್ಕುಮಾರ್ ಅವರು ಪತ್ನಿ ಮತ್ತು ಮಗುವಿನೊಂದಿಗೆ ಕೊಠಡಿಯಲ್ಲಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಸೈಯದ್, ತನ್ನ ಸಹಚರರಾದ ಇತರೆ ಆರೋಪಿಗಳಿಗೆ ಸುಳಿವು ನೀಡಿದ್ದಾನೆ. ಅರ್ಧ ಷೆಟರ್ ತೆಗೆದು ಆರೋಪಿಗಳನ್ನು ಹೋಟೆಲ್ ಒಳಕ್ಕೆ ಕರೆದುಕೊಳ್ಳುವ ಸಮಯದಲ್ಲಿ ಹೋಟೆಲ್ ಬಳಿ ಚೀತಾ ವಾಹನ ಬಂದ ಕಾರಣ ತಮ್ಮಯ್ಯ ಮತ್ತು ರಮೇಶ್ ಅಲ್ಲಿಂದ ಕಬ್ಬನ್ಪಾರ್ಕ್ಗೆ ಓಡಿ ಹೋಗಿದ್ದರು.

ಆರೋಪಿಗಳು ಮತ್ತೆ ಎರಡು ಗಂಟೆ ಸುಮಾರಿಗೆ ಬಂದು ಕೃತ್ಯ ಎಸಗಿದ್ದಾರೆ. ಕೊಲೆಗೂ ಮುನ್ನ ಆರೋಪಿ ಸೈಯದ್, ಬಬಿತಾ ಅವರ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಅವರ ಪತಿ ಪವನ್ಕುಮಾರ್ ಎಚ್ಚರಗೊಂಡಿದ್ದಾರೆ. ಆರೋಪಿ ತಮ್ಮಯ್ಯ ಹಾಗೂ ಸೈಯದ್ ಕಬ್ಬಿಣದ ಸಲಾಕೆಯಿಂದ ಹೊಡೆದು ದಂಪತಿಯನ್ನು ಕೊಲೆ ಮಾಡಿದ್ದಾರೆ.

ಘಟನೆ ವೇಳೆ ಆರೋಪಿ ರಮೇಶ್ ಹೋಟೆಲ್ನ ಹೊರಗೆ ನಿಂತು ಕಾಯುತ್ತಿದ್ದ. ಚೀರಾಟದಿಂದ ಎಚ್ಚರಗೊಂಡ ದಂಪತಿಯ ಐದು ವರ್ಷದ ಮಗು ಪ್ರಿಯಾಳ ತಲೆಗೂ ಆರೋಪಿಗಳು ಸಲಾಕೆಯಿಂದ ಹೊಡೆದು, 48 ಸಾವಿರ ರೂಪಾಯಿ ಹಣ ದೋಚಿ ಪರಾರಿಯಾಗಿದ್ದರು. ಈ ಸಂಬಂಧ ಕಾಟನ್ಪೇಟೆ ಠಾಣೆಯಲ್ಲಿ ಕೊಲೆ ಮತ್ತು ಕೊಲೆಯತ್ನ ಪ್ರಕರಣ ದಾಖಲಾಗಿದ್ದವು. ಚೇತರಿಸಿಕೊಂಡಿರುವ ಮಗು ಸಂಬಂಧಿಕರ ಆಶ್ರಯ ಪಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಳಿವು ಸಿಕ್ಕಿದ್ದು ಹೇಗೆ?
`ಘಟನೆ ನಡೆದ ದಿನ ಕೊಲೆಯಾದ ಸ್ಥಳದಲ್ಲಿ ಚೀಟಿಯೊಂದು ಸಿಕ್ಕಿತು. ಅದರಲ್ಲಿ ಮೂರ್ನಾಲ್ಕು ಫೋನ್ ನಂಬರ್ಗಳಿದ್ದವು. ಅಲ್ಲದೇ, ಹೋಟೆಲ್ ಪಕ್ಕದಲ್ಲೇ ಇದ್ದ ಎಸ್ಟಿಡಿ ಬೂತ್ನ ಕರೆಯ ವಿವರಗಳನ್ನು ಪರಿಶೀಲಿಸಿದಾಗ ಚೀಟಿಯಲ್ಲಿದ್ದ ಮೊಬೈಲ್ ಸಂಖ್ಯೆಗೆ ಕೊಲೆ ನಡೆದ ಸಮಯದಲ್ಲಿ ಕರೆ ಹೋಗಿರುವುದು ಗೊತ್ತಾಯಿತು.

ಆ ಸಂಖ್ಯೆಗೆ ಬಂದು ಹೋಗಿರುವ ಕರೆ ವಿವರಗಳನ್ನು ಪರಿಶೀಲಿಸಿದಾಗ ಆರೋಪಿ ತಮ್ಮಯ್ಯ ಸಿಕ್ಕಿ ಬಿದ್ದ. ಆತನ ಮಾಹಿತಿಯಿಂದ ರಮೇಶನನ್ನು ಬಂಧಿಸಲಾಯಿತು~ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

`ಸೈಯದ್ ಬಳಿ ಮೊಬೈಲ್ ಇಲ್ಲದ ಕಾರಣ, ಆತ ತಮ್ಮಯ್ಯನ ಮೊಬೈಲ್ ಸಂಖ್ಯೆಯನ್ನು ಚೀಟಿಯಲ್ಲಿ ಬರೆದಿಟ್ಟುಕೊಂಡಿದ್ದ. ಕೃತ್ಯದ ವೇಳೆ ಹೊರಗೆ ಕಾಯುತ್ತಾ ನಿಂತಿದ್ದ ರಮೇಶ್, ಸಹಚರರು ಹೋಟೆಲ್ನಿಂದ ಹೊರಬಾರದ ಕಾರಣ ಎಸ್ಟಿಡಿ ಬೂತ್ನಿಂದ ತಮ್ಮಯ್ಯನ ಮೊಬೈಲ್ಗೆ ಕರೆ ಮಾಡಿದ್ದ~ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ನವ ವಿವಾಹಿತರಂತಿದ್ದರು!
`ಆರೋಪಿ ರಮೇಶ್ ಮತ್ತು ಹಿಜಡಾ ತಮ್ಮಯ್ಯ ನವ ವಿವಾಹಿತರಂತೆ ಇದ್ದರು. ಕಬ್ಬನ್ಪಾರ್ಕ್, ಎಂ.ಜಿ. ರಸ್ತೆಯಲ್ಲಿ ಜತೆ ಜತೆಗೆ ತಿರುಗಾಡುತ್ತಿದ್ದರು. ತಮ್ಮಯ್ಯ ಭಿಕ್ಷೆ ಬೇಡುತ್ತಿದ್ದ. ಆದರೆ, ರಮೇಶ ಹಣದ ಅಗತ್ಯವಿದ್ದಾಗ ಮಾತ್ರ ಕೂಲಿ ಕೆಲಸಕ್ಕೆ ಹೋಗುತ್ತಿದ್ದ~ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.