ಕಾಟನ್ ಫ್ಯಾಬ್ 2016

ಹನ್ನೆರಡು ರಾಜ್ಯಗಳ 60 ಮಂದಿ ಅಪರೂಪದ ಕಲಾಕಾರರು, ಕೈಮಗ್ಗ ನಿಪುಣರು ತಯಾರಿಸಿದ ವಸ್ತ್ರಗಳನ್ನು ‘ಕಾಟನ್ ಫ್ಯಾಬ್-2016’ ಪ್ರದರ್ಶಿಸಲಾಗುತ್ತಿದೆ. ವಿಶೇಷ ವಿನ್ಯಾಸ ಮತ್ತು ಗುಣಮಟ್ಟದ ವಸ್ತ್ರಗಳು ವೀಕ್ಷಣೆ-ಖರೀದಿಗೆ ಲಭ್ಯವಿರುತ್ತವೆ.
ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಗಳಂತೆ ಇರುವ ಪ್ರತಿಭಾವಂತ ಕುಶಲಕರ್ಮಿಗಳು ಹತ್ತಿ ಮತ್ತು ರೇಷ್ಮೆ ದಾರಗಳನ್ನು ಬಳಸಿ ವರ್ಷಗಳ ಕಾಲ ಶ್ರದ್ಧೆಯಿಂದ ಶ್ರಮಿಸಿ ಸ್ವತಃ ಕೈಗಳಿಂದ ಹೆಣಿಗೆ ಮಾಡಿದ, ಕೈಮಗ್ಗದಿಂದಲೇ ನೇಯ್ಗೆ ಮಾಡಿದ ಸೀರೆ ಮತ್ತಿತರ ಅಪರೂಪದ ವಸ್ತ್ರಗಳು ಇಲ್ಲಿ ಇನ್ನು ಒಂದು ವಾರ ಕಾಲ ಪ್ರದರ್ಶಿತವಾಗಲಿವೆ.
ಚಿಕನ್ ವರ್ಕ್ ಒಳಗೊಂಡ ‘ಲಖನವಿ’ ಡ್ರೆಸ್ ಮೆಟೀರಿಯಲ್, ಸೀರೆ, ಕುರ್ತಾ ಪೈಜಾಮ, ಉತ್ತರ ಪ್ರದೇಶದ ವಿಶೇಷ ವಿನ್ಯಾಸದ ಮೇಲಂಗಿಗಳು(ಟಾಪ್), ಗುಜರಾತ್ ಎಥ್ನಿಕ್ ಪ್ರಿಂಟ್ ಕುರ್ತಿ, ಡ್ರೆಸ್ ಮೆಟೀರಿಯಲ್, ರಾಜಸ್ತಾನದ ಕಪ್ಪು ಬಣ್ಣದ ಮುದ್ರಣವಿರುವ ಕೋಟಾ ದೋರಿಯಾ ಡ್ರೆಸ್ ಮೆಟೀರಿಯಲ್ಸ್, ಲೇಡೀಸ್ ಕುರ್ತಾ, ಲೆಹೆಂಗಾ ಚೌಲಿ, ಮಾಲ್ಮಾಲ್, ಬಂಧೇಜಿ ಸ್ಯೂಟ್ಸ್, ಸ್ಕರ್ಟ್-ಟಾಪ್, ಸಲ್ವಾರ್ ಮತ್ತು ದುಪಟ್ಟಾಗಳು, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ, ಭಾಗ್ಪ್ರಿಂಟ್, ಬಾಟಿಕ್ ಪ್ರಿಂಟ್ ಡ್ರೆಸ್ ಮೆಟೀರಿಯಲ್ಸ್, ಜಮ್ಮು-ಕಾಶ್ಮೀರದ ಎಂಬ್ರಾಯ್ಡರಿ ಸೀರೆಗಳು, ಡ್ರೆಸ್ ಮೆಟೀರಿಯಲ್ಸ್ ಮತ್ತು ಪ್ರಸಿದ್ಧ ಶಾಲುಗಳು, ಪಶ್ಚಿಮ ಬಂಗಾಳದ ಶಾಂತಿನಿಕೇತನ್ ತಾಂತ್, ಕಾಂಥ್, ಧಾಕೈ ಜಾಮ್ದಾನಿ ಸೀರೆಗಳು, ಟಸ್ಸಾರ್-ಶಿಫಾನ್-ಕ್ರೇಪ್ ಸಿಲ್ಕ್ನ ಡ್ರೆಸ್ ಮೆಟೀರಿಯಲ್ಸ್,
ಒರಿಸ್ಸಾದ ಸಂಭಾಲ್ಪುರಿ, ಇಕ್ಕತ್ ಸೀರೆಗಳು, ಡ್ರೆಸ್ ಮೆಟೀರಿಯಲ್ಸ್, ತಮಿಳುನಾಡಿನ ಹೆಸರಾಂತ ರೇಷ್ಮೆ ಸೀರೆಗಳು, ಬೆಡ್ಶೀಟ್ಸ್, ಹುಬ್ಬಳ್ಳಿ ಸೀರೆಗಳು, ಡ್ರೆಸ್ ಮೆಟೀರಿಯಲ್ಸ್, ಹಿಮಾಚಲ ಪ್ರದೇಶದ ಕಾಟನ್ ಕುರ್ತೀಸ್, ಉತ್ತರ ಪ್ರದೇಶದ ಹೆಸರಾಂತ ಬನಾರಸ್ ರೇಷ್ಮೆ ಮತ್ತು ಹತ್ತಿ ಸೀರೆಗಳು, ಸ್ಯೂಟ್ ಮೆಟೀರಿಯಲ್ಸ್, ಜಾರ್ಖಂಡ್ನ ಟಸ್ಸಾರ್ ರೇಷ್ಮೆ ಸೀರೆ ಮತ್ತು ಡ್ರೆಸ್, ದೆಲ್ಲಿಯ ಚಿಕನ್ ಎಂಬ್ರಾಯಿಡರಿ ಡ್ರೆಸ್ ಮೆಟೀರಿಯಲ್ಸ್ ಮತ್ತು ಸೀರೆಗಳು, ಸೀತಾಪುರಿಯ ರಫ್ತು ದರ್ಜೆಯ ‘ದರಿ’(ಸತ್ರಂಜಿ), ಮ್ಯಾಟ್ಸ್, ರನ್ನರ್ ಅಂಡ್ ರಗ್ಸ್, ರಾಜಸ್ತಾನದ ವೈವಿಧ್ಯಮಯ ಹರಳು ಮತ್ತು ಲೋಹದ ಆಭರಣಗಳು, ದೆಹಲಿಯ ಕೃತಕ ಆಭರಣಗಳು ಸೇರಿದಂತೆ ದೇಶದ ವಿವಿಧೆಡೆಯ ವಸ್ತ್ರ ಮತ್ತು ಆಭರಣಗಳ ರಾಶಿಯೇ ಇಲ್ಲಿದೆ. ಪ್ರದರ್ಶನ ಮೇಳಕ್ಕೆ ನಗರದ ಜನರು ಭಾರಿ ಪ್ರಮಾಣದಲ್ಲಿ ಹರಿದುಬರುತ್ತಿದ್ದು, ತಮ್ಮ ಮೆಚ್ಚಿನ ವಸ್ತ್ರಗಳನ್ನು ಖರೀದಿ ಮಾಡುತ್ತಿದ್ದಾರೆ.
ಸ್ಥಳ: ಬಿಬಿಎಂಪಿ ಮೈದಾನ, ವಿವೇಕಾನಂದ ಸ್ಕೂಲ್, ಗಣೇಶ ದೇವಸ್ಥಾನ, ಸಹಕಾರ ನಗರ. ಜನವರಿ 25ರವರೆಗೆ ನಡೆಯಲಿದ್ದು, ಸಮಯ ಬೆಳಿಗ್ಗೆ 10.30ರಿಂದ ರಾತ್ರಿ 8.30.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.