ಶನಿವಾರ, ಏಪ್ರಿಲ್ 10, 2021
30 °C

ಕಾಡಾನೆ: ಯಶಸ್ವಿ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡಾನೆ: ಯಶಸ್ವಿ ಕಾರ್ಯಾಚರಣೆ

ಕುಶಾಲನಗರ: ಉತ್ತರ ಕೊಡಗಿನ ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ಕಂಬಿಬಾಣೆ, ಅತ್ತೂರು-ನಲ್ಲೂರು, ಚೆಟ್ಟಳ್ಳಿ, ಭೂತನಕಾಡು ವ್ಯಾಪ್ತಿಯಲ್ಲಿಯ ಕಾಫಿ ತೋಟಗಳಿಗೆ ದಾಳಿಯಿಟ್ಟು ಬೆಳೆ ನಾಶಪಡಿಸುತ್ತಿದ್ದ ಕಾಡಾನೆಗಳ ಹಿಂಡನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಮಂಗಳವಾರ ಯಶಸ್ವಿಯಾದರು.ವಲಯ ಅರಣ್ಯಾಧಿಕಾರಿ ಎಂ.ಎಂ.ಅಚ್ಚಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದುಬಾರೆ ಸಾಕಾನೆ ಶಿಬಿರದ ಗೋಪಿ, ಹರ್ಷ, ಮಯೂರ, ಪ್ರಶಾಂತ, ವಿಕ್ರಮ್, ತೀರ್ಥರಾಮ ಎಂಬ ಆನೆಗಳನ್ನು ಬಳಲಸಾಗಿತ್ತು.  ಮೀನುಕೊಲ್ಲಿ ಮೀಸಲು ಅರಣ್ಯದಿಂದ ಕಾಫಿ ತೋಟಕ್ಕೆ ದಾಳಿಯಿಟ್ಟಿದ್ದ ಮರಿಯಾನೆ ಸೇರಿದಂತೆ 5 ಕಾಡಾನೆಗಳನ್ನು 60 ಸಿಬ್ಬಂದಿ, 6 ಸಾಕಾನೆಗಳ ಸಹಾಯದಿಂದ ಮರಳಿ ಕಾಡಿಗೆ ಅಟ್ಟಲಾಯಿತು ಎಂದು ಕುಶಾಲನಗರ ವಲಯದ ಆರ್‌ಎಫ್‌ಓ ಎಂ.ಎಂ.ಅಚ್ಚಪ್ಪ  ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.