ಮಂಗಳವಾರ, ಮಾರ್ಚ್ 2, 2021
26 °C

ಕಾಡುವ ಸಂಬಂಧಗಳ ನಡುವೆ ಕಬೀರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಡುವ ಸಂಬಂಧಗಳ ನಡುವೆ ಕಬೀರ್

ವೈಯಕ್ತಿಕ ಸಂಬಂಧಗಳನ್ನು ಉಳಿಸಿಕೊಳ್ಳುವುದಕ್ಕಾಗಿಯಾದರೂ 1980ದಶಕದಲ್ಲೇ ನಾನು ಭಾರತಕ್ಕೆ ಮರಳಿ ಬಂದುಬಿಡಬೇಕಾಗಿತ್ತು’ ಹೀಗೆ ಹೇಳಿಕೊಂಡಿದ್ದು ಯುರೋಪ್ ಇಟಲಿಯನ್ ಟಿವಿ ಪರದೆಯಲ್ಲಿ ಮಿಂಚಿದ ಭಾರತೀಯ ಕಬೀರ್ ಬೇಡಿ. ಇಟಲಿಯ ಪ್ರಖ್ಯಾತ ಧಾರಾವಾಹಿ ‘ಸಾಂದೂಕನ್’ನಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಕಬೀರ್, ಯುರೋಪಿನಾದ್ಯಂತ ಜನ ಮೆಚ್ಚುಗೆ ಗಳಿಸಿದರು. ಅಮೇರಿಕದ ಪ್ರಸಿದ್ಧ ಧಾರಾವಾಹಿ ‘ಬೋಲ್ಡ್ ಅಂಡ್ ಬ್ಯೂಟಿಫುಲ್’, ‘ಜೇಮ್ಸ್ ಬಾಂಡ್’ ಚಿತ್ರಗಳಲ್ಲೂ ಖ್ಯಾತಿ ಪಡೆದ ಕಬೀರ್ ವಿದೇಶದಲ್ಲೇ ನೆಲೆಗೊಂಡರು. ಕಬೀರ್ ಅಭಿನಯಿಸಿದ ‘ಖೂನ್ ಭರೀ ಮಾಂಗ್'  ಸಿನಿಮಾ ಹಲವು ಅಂತರರಾಷ್ಟ್ರೀಯ  ಭಾಷೆಗಳಿಗೆ ಡಬ್‌ ಆಯಿತು. ಮತ್ತೆ ಅವರು ವಿದೇಶಕ್ಕೆ ತೆರಳಿದ್ದರು.ಕಬೀರ್‌ಗೆ ಭಾರಿ ಯಶಸ್ಸನ್ನು ತಂದುಕೊಟ್ಟ ‘ಸಾಂದೂಕನ್’ ಧಾರಾವಾಹಿ ಸ್ಪ್ಯಾನಿಷ್, ಡಚ್, ಫ್ರೆಂಚ್, ಪಶ್ಚಿಮ ಯುರೋಪ್ ಭಾಷೆಗಳಿಗೆ ಡಬ್‌ ಆಗಿದ್ದು ಇದೀಗ ಹಿಂದಿ ಭಾಷೆಗೂ  ಡಬ್‌ ಮಾಡಲು ಕಬೀರ್‌ ಬೇಡಿ ಮತ್ತೆ  ಭಾರತಕ್ಕೆ ಆಗಮಿಸಿದ್ದಾರೆ. ವಿಶ್ವದ ಹಲವು ಪ್ರಮುಖ ಭಾಷೆಯ ಟಿವಿ ಲೋಕದಲ್ಲಿ ಮಿಂಚಿದ್ದ ಕಬೀರ್‌ ಅವರಿಗೆ ತಮ್ಮ ಹಳೆಯ ಸಂಬಂಧಗಳು ಕಾಡಿವೆಯಂತೆ.‘ಇಂದಿನ ಯುವ ಜನಾಂಗ ನನ್ನನ್ನು ನೋಡಿ ಕಲಿಯಬೇಕು, ಮಹತ್ವಾಂಕ್ಷೆಯಿಂದ ಸಂಬಂಧಗಳನ್ನು ತೊರೆದ ಯುವಕ ಕೊನೆಗೆ ಏಕಾಂಗಿಯಾಗುತ್ತಾನೆ’ ಎಂದಿದ್ದಾರೆ. ಕಬೀರ್‌ ಬೇಡಿ ವಿದೇಶದಲ್ಲಿ ನೆಲೆಗೊಂಡಾಗ ಪತ್ನಿ ಪ್ರೋತಿಮಾ ಬೇಡಿ ಅವರನ್ನು ಅಗಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.