ಪಾಕಶಾಸ್ತ್ರಜ್ಞ ನರೇನ್ ತಿಮ್ಮಯ್ಯ ಕಳೆದ 25 ವರ್ಷಗಳಿಂದ ಕರಾವಳಿಯ ಪ್ರತೀಕದಂತಿರುವವರು. ಕರಾವಳಿ ಅಡುಗೆ ಮಾಡುವುದರಲ್ಲಿ ಪ್ರಾವೀಣ್ಯತೆ ಸಾಧಿಸಿರುವ ಇವರನ್ನು ‘ರಸ’ಋಷಿ ಎನ್ನಲಡ್ಡಿಯಿಲ್ಲ.

ತಲೆತಲಾಂತರದಿಂದ ಉತ್ಕೃಷ್ಟ ರುಚಿಯ ಕಾಫಿ ಒದಗಿಸುವಲ್ಲಿ ಹೆಸರಾಗಿರುವ ಕೊಡಗು ಮೂಲದವರಾದ ನರೇನ್, ಅಲ್ಲಿನ ಸಾಂಪ್ರದಾಯಿಕ ಕುಟುಂಬದಿಂದ ಬಂದವರು. ಚಿಕ್ಕವರಿದ್ದಾಗಿನಿಂದಲೂ ತಮ್ಮ ಮನೆಯಲ್ಲಿ ಕೊಡಗಿನ ಸಾಂಪ್ರದಾಯಿಕ ಅಡುಗೆಗಳನ್ನು ಮಾಡುವಾಗ ತುಂಬ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಜೊತೆಗೆ ಅವುಗಳನ್ನು ಮಾಡುವಾಗ ಅನುಸರಿಸುವ ಸಣ್ಣಸಣ್ಣ ಸಂಗತಿಗಳ ಬಗ್ಗೆ ಪ್ರಶ್ನಿಸಿ ಅವರಿಂದ ತಿಳಿದುಕೊಂಡಿದ್ದೇ ನರೇನ್ ಒಬ್ಬ ಅದ್ಬುತ ಬಾಣಸಿಗ ಆಗಲು ತಳಪಾಯವಾಯಿತು. ನರೇನ್ ಅವರ ತಾಯಿಗೆ ಅತಿ ಪ್ರಿಯವಾದ ಕೂರ್ಗ್ ಫ್ರೈಡ್ ಚಿಕನ್ ಖಾದ್ಯ ‘ಕರಾವಳಿ’ ಮೆನುವಿನಲ್ಲಿ ಸ್ಥಾನ ಪಡೆದಿರುವುದು ಅವರ ಕೈರುಚಿಗೆ ಸಿಕ್ಕ ಸಮ್ಮಾನ.

ನರೇನ್ ತಮ್ಮ ಪದವಿ ಹಾಗೂ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಬಳಿಕ ತಾಜ್ ಹೋಟೆಲ್ಗಳ ಸಮೂಹವನ್ನು ಸೇರಿದರು. ಕರಾವಳಿಯ ವಿಶೇಷ ಖಾದ್ಯಗಳನ್ನು ತಿಳಿಯುವ ಸಲುವಾಗಿ ಅವರು ತುಂಬ ಶ್ರದ್ಧೆಯಿಂದ ದಣಿವಿಲ್ಲದಂತೆ ದುಡಿದಿದ್ದಾರೆ. ತಮ್ಮದೇ ಮನೆತನ ಹಾಗೂ ಕರಾವಳಿಯಲ್ಲಿನ ಕಲಿಕೆ ನರೇನ್ ಅವರ ಮನಸ್ಸಿನಲ್ಲಿ ಅಚ್ಚೊತ್ತಿದ್ದು, ಅದೇ ಅವರಲ್ಲಿನ ಪಾಕಕಲೆಯ ಹೊಸತನ ಹಾಗೂ ಕ್ರಿಯಾಶೀಲತೆಗೆ ಪ್ರೇರಕವಾಗಿದೆ. ಹೋಟೆಲ್ನ 18 ವರ್ಷಗಳ ಸಾಧನಾಯಾನದಲ್ಲಿ ಕರಾವಳಿಯ ಶೈಲಿಯ ಪಾಕಶಾಸ್ತ್ರಜ್ಞನಾಗಿ ನರೇನ್ ನೀಡಿರುವ ಕೊಡುಗೆ ಗಮನಾರ್ಹವಾದುದು.

ಸಿಂಗಾಪುರದಲ್ಲಿ 2005ರಲ್ಲಿ ನಡೆದ ‘ವರ್ಲ್ಡ್ ಗೌರ್ಮೆಟ್ ಸಮ್ಮಿಟ್’ನಲ್ಲಿ ಭಾಗವಹಿಸಿದ ಹೆಮ್ಮೆಗೂ ನರೇನ್ ತಿಮ್ಮಯ್ಯ ಪಾತ್ರರಾಗಿದ್ದಾರೆ. ಇದರಲ್ಲಿ ಇದುವರೆಗೆ ಭಾರತದಿಂದ ಕೇವಲ ಮೂವರು ಪಾಕಶಾಸ್ತ್ರಜ್ಞರು ಮಾತ್ರ ಈ ಸಮ್ಮಿಟ್ನಲ್ಲಿ ಭಾಗವಹಿಸಿದ್ದಾರೆ. ತಾಜ್ ಗ್ರೂಪ್ ಆಫ್ ಹೋಟೆಲ್ಸ್ನಿಂದ ಈ ಸಮ್ಮಿಟ್ನಲ್ಲಿ ಭಾಗವಹಿಸುವ ಮೂಲಕ ವರ್ಲ್ಡ್ ಗೌರ್ಮೆಟ್ ಸಮ್ಮಿಟ್ನಲ್ಲಿ ಭಾಗವಹಿಸಿದ ಭಾರತದ ನಾಲ್ಕನೇ ಪಾಕಶಾಸ್ತ್ರಜ್ಞ ಎಂಬ ಖ್ಯಾತಿಗೆ ನರೇನ್ ಪಾತ್ರರಾಗಿದ್ದಾರೆ. ವರ್ಲ್ಡ್ ಗೌರ್ಮಟ್ ಸಮ್ಮಿಟ್ ಅಂತಾರಾಷ್ಟ್ರೀಯ ಸ್ಪರ್ಧೆಯಾಗಿದ್ದು, ಇದರಲ್ಲಿ ಪ್ರಪಂಚದೆಲ್ಲೆಡೆಯಿಂದ ಒಟ್ಟು ಹತ್ತು ಪಾಕಶಾಸ್ತ್ರಜ್ಞರಿಗೆ ಮಾತ್ರ ತಮ್ಮ ಪಾಕ ಪ್ರಾವೀಣ್ಯತೆಯನ್ನು ಪ್ರದರ್ಶಿಸಲು ಅವಕಾಶ ಇರುತ್ತದೆ.

ಚೌಹೌಂಡ್ ಎಂಬ ಆಹಾರಪ್ರಿಯರ ಬ್ಲಾಗ್ಸ್ಪಾಟ್ ನಡೆಸಿದ ಸಮೀಕ್ಷೆಯಲ್ಲಿ ನರೇನ್ ತಿಮ್ಮಯ್ಯ ಅವರನ್ನು ಭಾರತದ ಟಾಪ್ ಟೆನ್ ಪಾಕಶಾಸ್ತ್ರಜ್ಞರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ, ಆಹಾರ ಮತ್ತು ಜೀವನಶೈಲಿಯ ಪುರವಣಿಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಇವರು ಅನೇಕ ಹೋಟೆಲ್ ಮ್ಯಾನೇಜ್ಮೆಂಟ್ ಸಂಸ್ಥೆಗಳಲ್ಲಿನ ಪರೀಕ್ಷಾ ಸಮಿತಿಯಲ್ಲೂ ಇದ್ದಾರೆ.

ಕಾರ್ಯನಿರ್ವಾಹಕ ಪಾಕಶಾಸ್ತ್ರಜ್ಞನದ್ದು ಕೆಲಸ ಕೇವಲ ಕ್ಯಾಪ್ ಧರಿಸಿಕೊಂಡು ಅಡುಗೆ ಮಾಡುವುದಷ್ಟೇ ಅಲ್ಲ. ಜೊತೆಗೆ ಆಹಾರ ಸುರಕ್ಷತೆ ಸಂಬಂಧ ಇರುವ ವಿವಿಧ ಪ್ರಮಾಣಪತ್ರಗಳಾದ ಎಚ್ಎಸಿಸಿಪಿ, ಐಎಸ್ಒ 22000 ತಕ್ಕಂತೆ ಗುಣಮಟ್ಟ ಕಾಯ್ದುಕೊಳ್ಳುವುದು ಕೂಡ ಮುಖ್ಯ. ನರೇನ್ ತಿಮ್ಮಯ್ಯ 2009ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರ ನವದೆಹಲಿಯ ಅಶೋಕ ಕನ್ವೆನ್ಷನ್ ಹಾಲ್ನಲ್ಲಿ ನಡೆದ ನ್ಯಾಷನಲ್ ಟೂರಿಸಂ ಅವಾರ್ಡ್ಸ್ ಸಮಾರಂಭದಲ್ಲಿ ಬೆಸ್ಟ್ ಶೆಫ್ ಆಫ್ ಇಂಡಿಯಾ ಪ್ರಶಸ್ತಿಗೂ ಪಾತ್ರರಾಗಿದ್ದರು. ಅಂದಹಾಗೆ, ಸಾಗರಖಾದ್ಯಗಳಲ್ಲೇ ಅತಿಹೆಚ್ಚು ಬೇಡಿಕೆ ಹೊಂದಿರುವ ಮತ್ತು ಕರಾವಳಿ ತಿನಿಸುಪ್ರಿಯರ ರುಚಿಮೊಗ್ಗುಳನ್ನು ತಣಿಸುವ ಕಾಣೆ ಮಸಾಲ ಫ್ರೈ ಮತ್ತು ಸಿಗಡಿ ರೋಸ್ಟ್ ಹಾಗೂ ಆಲೆಪ್ಪಿ ಮೀನ್ ಕರಿ ಖಾದ್ಯಗಳ ತಯಾರಿಕೆ ಬಗ್ಗೆ ನರೇನ್ ಇಲ್ಲಿ ವಿವರಿಸಿದ್ದಾರೆ.

ಕಾಣೆ ಮಸಾಲ ಫ್ರೈ: ಕಾಣೆ ಮೀನಿಗೆ ಚೆನ್ನಾಗಿ ರುಬ್ಬಿದ ಮಂಗಳೂರು ಶೈಲಿಯ ಮಸಾಲೆಯನ್ನು ಬೆರೆಸಿ, ಬಾಣಲೆಯಲ್ಲಿ ಬೇಯಿಸಬೇಕು.

ಸಾಮಗ್ರಿ: ಕಾಣೆ ಮೀನು (600 ಗ್ರಾಂ), ಹೆಚ್ಚಿದ ಈರುಳ್ಳಿ (100 ಗ್ರಾಂ), ಕರಿಬೇವು (1ಎಸಳು), ಒಂದು ಹೆಚ್ಚಿದ ಟೊಮೊಟೊ, ಹೆಚ್ಚಿದ ಶುಂಠಿ ಸ್ವಲ್ಪ, ಹೆಚ್ಚಿದ ಬೆಳ್ಳುಳ್ಳಿ (ನಾಲ್ಕು ಎಸಳು), ಹಸಿ ಮೆಣಸಿನಕಾಯಿ (10 ಗ್ರಾಂ), ಸ್ವಲ್ಪ ಜೀರಿಗೆ, ಸ್ವಲ್ಪ ಕಾಳುಮೆಣಸು, ಬ್ಯಾಡಗಿ ಮೆಣಸು (50 ಗ್ರಾಂ), ಕೊತ್ತಂಬರಿ ಸೊಪ್ಪು (25 ಗ್ರಾಂ), ಹುಣಸೇಹಣ್ಣಿನ ರಸ (3 ಟೇಬಲ್ ಸ್ಪೂನ್), ಅರಿಶಿಣ ಪುಡಿ (1 ಟೇಬಲ್ ಸ್ಪೂನ್), ತೆಂಗಿನೆಣ್ಣೆ (25 ಎಂ.ಎಲ್), ರುಚಿಗೆ ತಕ್ಕಷ್ಟು ಉಪ್ಪು.

ವಿಧಾನ: ಮೀನನ್ನು ಸ್ವಚ್ಛಗೊಳಿಸಿ ಅದರ ಹೊರ ಚರ್ಮವನ್ನು ತೆಗೆಯಬೇಕು. ಮೀನಿನ ಮೇಲೆ ಅರ್ಧ ಚಮಚ ಅರಿಶಿಣ ಹುಡಿ, ಉಪ್ಪು ಹಾಕಿ ಸ್ವಲ್ಪ ಹೊತ್ತು ಇಡಿ. ಮೆಣಸು, ಜೀರಿಗೆ, ಕಾಳುಮೆಣಸು ರುಬ್ಬಿ ಪೇಸ್ಟ್ ಮಾಡಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ತೆಂಗಿನೆಣ್ಣೆಯನ್ನು ಹಾಕಿ ಬಿಸಿ ಮಾಡಿ, ಅದಕ್ಕೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು, ಕರಿಬೇವಿನ ಎಲೆ, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು.

ಬಳಿಕ ಅರ್ಧ ಚಮಚ ಅರಿಶಿಣ ಪೌಡರ್, ಟೊಮೊಟೊ, ಉಪ್ಪು ಹಾಕಬೇಕು. ಟೊಮೊಟೊ ಕಿವುಚಿ ಹೋಗುವವರೆಗೆ ಬೇಯಿಸಬೇಕು. ನಂತರ ಬಾಣಲೆಗೆ ರುಬ್ಬಿಟ್ಟ ಪೇಸ್ಟ್ ಹಾಕಿ ಮಸಾಲೆಯ ಮೇಲೆ ಎಣ್ಣೆ ತೇಲುವವರೆಗೆ ಬೇಯಿಸಬೇಕು. ಬಳಿಕ ಹುಣಸೇಹಣ್ಣಿನ ರಸವನ್ನು ಹಾಕಿ ಮೂರರಿಂದ ಐದು ನಿಮಿಷ ಬೇಯಿಸಬೇಕು. ಈಗ ಕಾಣೆ ಮೀನನ್ನು ಹಾಕಿ ಅದನ್ನು ಮಸಾಲೆಯಲ್ಲಿ ಬೇಯಿಸಬೇಕು. ಬಳಿಕ ಕೊತ್ತಂಬರಿ ಸೊಪ್ಪನ್ನು ಅದರ ಮೇಲೆ ಉದುರಿಸಬೇಕು. ಅಲ್ಲಿಗೆ ಕಾಣೆ ಮಸಾಲ ಫ್ರೈ ರೆಡಿ. ಈ ಖಾದ್ಯಕ್ಕೆ ನೀರ್ದೋಸೆ ಅದ್ಬುತ ಕಾಂಬಿನೇಷನ್.

ಟೈಗರ್ ಪ್ರಾನ್ಸ್ ರೋಸ್ಟ್: ಕರಾವಳಿಪ್ರಿಯರ ಆಯ್ಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಖಾದ್ಯವಿದು. ಕೇರಳ ಸಾಂಪ್ರದಾಯಿಕ ಸಾಂಬಾರ ಪದಾರ್ಥಗಳ ಹದದಲ್ಲಿ ಬೇಯುವ ಈ ತಿನಿಸು ನಿಂಬೆ, ಟೊಮೊಟೊ, ಶುಂಠಿ ಮತ್ತು ಹಸಿರು ಮೆಣಸಿನ ಕಾಯಿ ಪರಿಮಳವನ್ನು ಹೊರಸೂಸುತ್ತದೆ.

ಸಾಮಗ್ರಿ: ಟೈಗರ್ ಪ್ರಾನ್ಸ್ (ಆರು), ಈರುಳ್ಳಿ ಸ್ಲೈಸ್ (100 ಗ್ರಾಂ), ಸ್ಲೈಸ್ ಮಾಡಿದ ಸಣ್ಣೀರುಳ್ಳಿ (100 ಗ್ರಾಂ), ಸ್ಲೈಸ್ ಮಾಡಿದ ಟೊಮೊಟೊ (100 ಗ್ರಾಂ), ಸ್ವಲ್ಪ ಶುಂಠಿ ಚೂರು, ಒಂದು ಹಸಿಮೆಣಸು, ಕಾರ ಪುಡಿ (30 ಗ್ರಾಂ), ಸ್ವಲ್ಪ ಅರಿಶಿಣ ಪುಡಿ, ಸ್ವಲ್ಪ ಗರಂ ಮಸಾಲಾ ಪುಡಿ, ಸೋಂಪ್ ಪುಡಿ (15 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ( 75 ಎಂಎಲ್), ಸ್ವಲ್ಪ ನಿಂಬೆರಸ, ಕರಿಬೇವಿನ ಎಲೆ (ಒಂದು ಎಸಳು).

ವಿಧಾನ: ನಿಂಬೆರಸ, ಉಪ್ಪು, ಕಾರದಪುಡಿ, ಅರಿಶಿಣಪುಡಿ ಮಿಶ್ರಣದಲ್ಲಿ ಸಿಗಡಿಯನ್ನು ಐದು ನಿಮಿಷ ನೆನಸಬೇಕು. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಅದಕ್ಕೆ ಈರುಳ್ಳಿ, ಸಣ್ಣೀರುಳ್ಳಿ, ಶುಂಠಿ ಚೂರು, ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಐದು ನಿಮಿಷ ತಿರುಗಿಸಬೇಕು. ಮಸಾಲಾ ಪುಡಿ ಹಾಕಿ ಚೆನ್ನಾಗಿ ಕಲಕಿ, ಟೊಮೊಟೊ, ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಬೇಕು. ಮಸಾಲೆಯಲ್ಲಿ ಅದ್ದಿದ ಸಿಗಡಿಯನ್ನು ಬಾಣಲೆಗೆ ಹಾಕಿ ಅದು ಕಂದು ಬಣ್ಣಕ್ಕೆ ತಿರುಗುವವರೆಗೂ ಬೇಯಿಸಿ. ಕೊನೆಯಲ್ಲಿ ನಿಂಬೆರಸ ಹನಿಸಿ, ಬಡಿಸಿ.

ಆಲೆಪ್ಪಿ ಮೀನ್ ಕರಿ: ಕೇರಳದ ಆಲೆಪ್ಪಿಯ ಜನಪ್ರಿಯ ಕರಿ ಇದು. ಸೀರ್ ಫಿಶ್ ಕರಿ ಎಂದೂ ಸಹ ಇದನ್ನು ಕರೆಯುತ್ತಾರೆ. ಅತಿಹೆಚ್ಚು ಖಾರವಿರದ ಈ ಗ್ರೇವಿ ತೆಂಗಿನಕಾಯಿ, ಶುಂಠಿ ಮತ್ತು ಮಾವಿನಕಾಯಿ ಬಳಸಿ ತಯಾರಿಸಲಾಗುತ್ತದೆ. ಅನ್ನದ ಜೊತೆಗೆ ಒಳ್ಳೆ ಕಾಂಬಿನೇಷನ್.

ಸಾಮಗ್ರಿ: ಒಂದು ತೆಂಗಿನಕಾಯಿ, ಬ್ಯಾಡಗಿ ಮೆಣಸಿನಕಾಯಿ (25 ಗ್ರಾಂ), ಎರಡು ಮಾವಿನ ಕಾಯಿ, ಹಸಿರು ಮೆಣಸಿನಕಾಯಿ (50 ಗ್ರಾಂ), ಕರಿಬೇವು ಸ್ವಲ್ಪ, ಸಣ್ಣೀರುಳ್ಳಿ (75 ಗ್ರಾಂ), ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನಹಾಲು (50 ಎಂಎಲ್) ಮತ್ತು ಸೀರ್ ಫಿಶ್ (300 ಗ್ರಾಂ).

ವಿಧಾನ: ಮೊದಲಿಗೆ ಮೀನನ್ನು ಚೆನ್ನಾಗಿ ತೊಳೆದು ಕತ್ತರಿಸಿದ ನಂತರ ಅದನ್ನು ಉಪ್ಪು ಮತ್ತು ಅರಿಶಿಣ ಪುಡಿ ಹಾಕಿ ನೆನಸಬೇಕು. ಆಮೇಲೆ ತುರಿದ ತೆಂಗಿನ ಕಾಯಿ ಮತ್ತು ಕೆಂಪು ಮೆಣಸಿನಕಾಯಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು. ಇದಾದ ಮೇಲೆ ತುರಿದಿಟ್ಟುಕೊಂಡ ತೆಂಗಿನ ಕಾಯಿಗೆ ಸ್ವಲ್ಪ ನೀರು ಸೇರಿಸಿ ಅದನ್ನು 10ರಿಂದ 15 ನಿಮಿಷ ಕುದಿಸಬೇಕು. ಹೀಗೆ ಮಾಡಿದ ಮೇಲೆ ಅದಕ್ಕೆ ಮಾವಿನ ಕಾಯಿ ತುಂಡುಗಳು, ಕರಿಬೇವು, ಸೀಳಿದ ಹಸಿರು ಮೆಣಸಿನಕಾಯಿ ಹಾಕಿ ಅದನ್ನು ಎಂಟರಿಂದ ಹತ್ತು ನಿಮಿಷ ಬೇಯಿಸಬೇಕು.

ಆಮೇಲೆ ತೆಂಗಿನೆಣ್ಣೆಯನ್ನು ಹಾಕಿ, ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿಯನ್ನು ಹಾಕಿ ಅದು ಕಂದುಬಣ್ಣಕ್ಕೆ ತಿರುಗುವವರೆಗೂ ಬೇಯಿಸಬೇಕು. ಇದೇ ವೇಳೆ ಉಳಿದ ಕರಿಬೇವನ್ನು ಅದಕ್ಕೆ ಸೇರಿಸಿದ ನಂತರ ಗ್ರೇವಿಯನ್ನು ಚೆನ್ನಾಗಿ ಕುದಿಸಬೇಕು. ಕೊನೆಯಲ್ಲಿ ಕತ್ತರಿಸಿಟ್ಟುಕೊಂಡ ಮೀನಿನ ತುಂಡುಗಳನ್ನು ಗ್ರೇವಿಯೊಳಕ್ಕೆ ಹಾಕಿ ಅದನ್ನು ಐದು ನಿಮಿಷ ಬೇಯಿಸಬೇಕು. ಮೀನಿನ ಮಾಂಸಕ್ಕೆ ಮಸಾಲೆ ಚೆನ್ನಾಗಿ ಹತ್ತಿದೆಯೇ ಎಂಬುದನ್ನು ಪರೀಕ್ಷಿಸಿಕೊಂಡು ಬಿಸಿಬಿಸಿಯಾದ ಗ್ರೇವಿಯನ್ನು ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.