ಚಿತ್ರದುರ್ಗ: ಮಹಿಳೆಯರು ಕಾನೂನಿನ ಅರಿವು ಪಡೆದುಕೊಳ್ಳುವ ಮೂಲಕ ಜಾಗೃತರಾಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಕೌಟುಂಬಿಕ ಸಲಹೆಗಾರರಾದ ಆರತಿ ಕರೆ ನೀಡಿದರು.

ನಗರದ ಎಸ್ಜೆಎಂ ಮಹಿಳಾ ಮಹಾವಿದ್ಯಾಲಯದಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಹಿಳಾ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
1995ರಲ್ಲಿ ಸ್ಥಾಪನೆಯಾದ ರಾಜ್ಯ ಮಹಿಳಾ ಆಯೋಗ ಅನೇಕ ಕಾರ್ಯಗಳನ್ನು ಕೈಗೊಂಡಿದೆ. ಮಹಿಳಾ ಕಾನೂನುಗಳ ಬಗ್ಗೆ ಜಾಗೃತಿ ಶಿಬಿರ, ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ರಕ್ಷಣೆ, ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ನ್ಯಾಯಾಲಯದಿಂದ ಸೂಕ್ತ ಪರಿಹಾರ ಕೊಡಿಸುವ ಜವಾಬ್ದಾರಿ ಹೊಂದಿದೆ ಎಂದು ತಿಳಿಸಿದರು.

ಆಯೋಗದ ಮತ್ತೋರ್ವ ಕೌಟುಂಬಿಕ ಸಲಹೆಗಾರರಾದ ಎಂ.ಜಯಮಾಲಾ ಮಾತನಾಡಿ, ಆಯೋಗದಲ್ಲಿ ವಾರದಲ್ಲಿ ಮೂರು ದಿನ ನೊಂದ ಮಹಿಳೆಯರಿಗೆ ಕೌನ್ಸಿಲಿಂಗ್ ಮಾಡುವ ವ್ಯವಸ್ಥೆ ಇದೆ ಎಂದು ತಿಳಿಸಿದರು.

ವಕೀಲರಾದ ವಿಜಯಾ ಅವರು ‘ಮಹಿಳೆ ಮತ್ತು ಕಾನೂನು’ ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಮಹಿಳಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ರಂಗಸ್ವಾಮಿ ವಹಿಸಿದ್ದರು. ವಿದ್ಯಾರ್ಥಿ ನಾಗಮಣಿ ಪ್ರಾರ್ಥಿಸಿದರು. ನೌಶಬ ಸ್ವಾಗತಿಸಿದರು. ನಂದಿನಿ ವಂದಿಸಿದರು. ಉಪನ್ಯಾಸಕಿ ಪ್ರೊಬಿ.ಆರ್. ವೀರಮ್ಮ ನಿರೂಪಿಸಿದರು.

ಅಭಿನಂದನೆ
ಚಿತ್ರದುರ್ಗ: ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ನಲ್ಲಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಜಿ.ಎಲ್. ಕೃಷ್ಣಮೂರ್ತಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಸಿಬ್ಬಂದಿ ವರ್ಗ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.