ಭಾನುವಾರ, ಜೂನ್ 20, 2021
25 °C

ಕಾನೂನು ಕ್ರಮಕ್ಕೆ ಮುಂದಾದ ನೂಪುರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾನೂನು ಕ್ರಮಕ್ಕೆ ಮುಂದಾದ ನೂಪುರ್

ನವದೆಹಲಿ (ಪಿಟಿಐ): `ಮ್ಯಾಚ್ ಫಿಕ್ಸಿಂಗ್‌ನಲ್ಲಿ ನಾನು ಪಾಲ್ಗೊಂಡಿದ್ದೇನೆ ಎಂದು ಆರೋಪ ಮಾಡಿರುವ ಲಂಡನ್ ಮೂಲದ ದಿ ಸಂಡೇ ಟೈಮ್ಸ ಪತ್ರಿಕೆ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಲಿದ್ದೇನೆ~ ಎಂದು ನಟಿ ನೂಪುರ್ ಮೆಹ್ತಾ ತಿಳಿಸಿದ್ದಾರೆ.`ಈ ಪತ್ರಿಕೆಗೆ ಮೊದಲು ನಾವು ನೋಟಿಸ್ ಕಳುಹಿಸಲಿದ್ದೇವೆ. ಪ್ರತಿಕ್ರಿಯೆ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಮಾನನಷ್ಟ ಮೊಕದ್ದಮೆ ಹೂಡಲು ಯೋಚಿಸುತ್ತೇವೆ~ ಎಂದು ನೂಪುರ್ ಅವರ ವಕೀಲರಾದ ಗೌರಾಂಗ್ ಕಾಂತ್ ಹೇಳಿದ್ದಾರೆ.ಬಾಲಿವುಡ್ ನಟಿಯೊಬ್ಬರನ್ನು ಬಳಸಿಕೊಂಡು ಫಿಕ್ಸಿಂಗ್‌ನಲ್ಲಿ ಪಾಲ್ಗೊಳ್ಳಲು ಆಟಗಾರರಿಗೆ ಆಮಿಷಯೊಡ್ಡಲಾಗುತ್ತಿದೆ ಎಂದು ದೆಹಲಿ ಮೂಲದ ಬುಕ್ಕಿ ಬಹಿರಂಗಪಡಿಸಿರುವುದನ್ನು `ದಿ ಸಂಡೇ ಟೈಮ್ಸ~ ಪತ್ರಿಕೆ ಗೋಪ್ಯ ಕಾರ್ಯಾಚರಣೆಯ ವರದಿಯಲ್ಲಿ ಬಹಿರಂಗ ಪಡಿಸಿತ್ತು. ಅಷ್ಟು ಮಾತ್ರವಲ್ಲದೇ, ಈ ಪತ್ರಿಕೆ ಆ ನಟಿಯ ಚಿತ್ರವನ್ನೂ ಪ್ರಕಟಿಸಿತ್ತು.ಆದರೆ ಶ್ರೀಲಂಕಾದ ಆಟಗಾರ ತಿಲಕರತ್ನೆ ದಿಲ್ಶಾನ್ ಅವರೊಂದಿಗೆ 2009ರ ಟ್ವೆಂಟಿ-20 ವಿಶ್ವಕಪ್ ವೇಳೆ ಲಂಡನ್‌ನಲ್ಲಿ ತಿರುಗಾಡಿದ್ದ ನಿಜ ಎಂದು ನೂಪುರ್ ಮತ್ತೊಮ್ಮೆ ಹೇಳಿದ್ದಾರೆ. `ದಿಲ್ಶಾನ್‌ಗೆ ಸಂಬಂಧಪಟ್ಟ ವಿಷಯದಲ್ಲಿ  ನಾನು ಯಾವತ್ತೂ ಸುಳ್ಳು ಹೇಳಿಲ್ಲ. ಆದರೆ ಭಾರತದ ಯಾವುದೇ ಆಟಗಾರನೊಂದಿಗೆ ಸಂಪರ್ಕ ಹೊಂದಿಲ್ಲ~ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.