ಹಾಸನ: `ಕಾನೂನಿನ ತಿಳಿವಳಿಕೆ ಇದ್ದರೆ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಬರುತ್ತದೆ. ಜತೆಗೆ ನಮ್ಮಿಂದ ಆಗುವ ಅನೇಕ ತಪ್ಪುಗಳನ್ನು ತಡೆಯಲು ಸಾಧ್ಯವಾಗುತ್ತದೆ~ ಎಂದು ಅಧಿಕ ಜಿಲ್ಲಾ ಮತ್ತು ಸೇಷನ್ ನ್ಯಾಯಧಿಶೆ ಹೆಚ್.ಜಿ. ವಿಜಯಕುಮಾರಿ ನುಡಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘದ ಹಾಸನ ಜಿಲ್ಲಾ ಘಟಕ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

`ಸಮಾಜದಲ್ಲಿ ಶಾಂತಿಯುತವಾಗಿ ಜೀವಿಸಲು ಪ್ರತಿಯೊಬ್ಬನಿಗೂ ಕಾನೂನಿನ ತಿಳಿವಳಿಕೆ ಇರುವುದು ಮುಖ್ಯ. ವಿದ್ಯಾರ್ಥಿಗಳು ಕಾನೂನಿನ ತಿಳಿವಳಿಕೆ ಪಡೆಯುವುದರ ಜತೆಗೆ ನೆರೆಕರೆಯವರಿಗೂ ಆ ಬಗ್ಗೆ ಮಾಹಿತಿ ನೀಡಬೇಕು~ ಎಂದರು.

ಮಕ್ಕಳ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ಜಯಂತ ಕುಮಾರ್, `ಶೇಕಡಾ ನೂರು ಫಲಿತಾಂಶದ ಗುರಿ ಇಟ್ಟುಕೊಂಡು ಮುನ್ನಡೆದರೆ ಮಾತ್ರ ಜಿವನದಲ್ಲಿ ಯಶಸ್ವಿಯಾಗಲು ಸಾಧ್ಯ. ಅದಕ್ಕಿಂತ ಕಡಿಮೆ ಗುರಿ ಇಟ್ಟರೆ ಯಶಸ್ಸು ಸಿಗುವುದಿಲ್ಲ. ಶಾಲೆಗಳಲ್ಲಿ ಪುಸ್ತಕದ ಜ್ಞಾನ ಕಲಿಸಲಾಗುತ್ತದೆ.

ವಿದ್ಯಾರ್ಥಿಗಳು ಅನುಭವದ ಜ್ಞಾನ ಪಡೆಯಬೇಕು. ಶೈಕ್ಷಣಿಕವಾಗಿ ಎಷ್ಟೇ ಪದವಿ, ಪುರಸ್ಕಾರ ಪಡೆದರೂ ಸಾಮಾನ್ಯ ಜ್ಞಾನ ಇಲ್ಲದಿದ್ದರೆ ಪಡೆದ ಜ್ಞಾನವೂ ಉಪಯೋಗಕ್ಕೆ ಬರುವು ದಿಲ್ಲ~ ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದರು.

ಬದುಕುವ ಹಕ್ಕು, ಅಭಿವೃದ್ಧಿಪಡೆಯುವ ಹಕ್ಕು, ಶೋಷಣೆಯಿಂದ ರಕ್ಷಿಸಿ ಕೊಳ್ಳುವ ಹಕ್ಕು ಹಾಗೂ ಶಿಕ್ಷಣದ ಹಕ್ಕು ಇವು ಮಕ್ಕಳಿಗೆ ಸಂವಿಧಾನಬದ್ಧವಾಗಿ ನೀಡಿರುವ ವಿಶೇಷ ಹಕ್ಕುಗಳು. ಇವುಗಳ ಬಗ್ಗೆ ತಿಳಿವಳಿಕೆ ಪಡೆದುಕೊಂಡು ಉತ್ತಮ ನಾಗರಿಕರಾಗಿ ಹೊರಹೊಮ್ಮಬೇಕು ಎಂದು ಜಯಂತ ಕುಮಾರ್ ಸಲಹೆ ನೀಡಿದರು.

ಕಾನೂನು ಅರಿವಿನ ಬಗ್ಗೆ ಮಕ್ಕಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಎನ್. ನರಸಿಂಹ ಮೂರ್ತಿ, ಕಾರ್ಯದರ್ಶಿ ಬಿ.ಟಿ. ರವಿಶಂಕರ್, ಪ್ರಧಾನ ಹಿರಿಯ ಸಿವಿಲ್ ಜಡ್ಜ್. ಸರಸ್ವತಿ ವಿ.ಕೊಸಂದರ್, ಕ್ಷೇತ್ರ ಶಿಕ್ಷಣಧಿಕಾರಿ ಡಿಟಿ. ಪುಟ್ಟರಾಜು ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.