ಗುರುವಾರ , ಮಾರ್ಚ್ 4, 2021
29 °C

ಕಾಫಿ ರಫ್ತಿನಲ್ಲಿ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ರಫ್ತಿನಲ್ಲಿ ದಾಖಲೆ

ನವದೆಹಲಿ (ಪಿಟಿಐ): 2011-12ನೇ ಸಾಲಿನ ಹಣಕಾಸು ವರ್ಷದಲ್ಲಿ ದೇಶದಿಂದ  ಒಟ್ಟು 3,48,029 ಟನ್‌ಗಳಷ್ಟು ಕಾಫಿ ರಫ್ತಾಗಿದೆ. ಜಾಗತಿಕ ಮಾರುಕಟ್ಟೆಗಳಿಂದ ಹೆಚ್ಚಿದ ಬೇಡಿಕೆ ಮತ್ತು ದೇಶೀಯ ಉತ್ಪಾದನೆ ಏರಿಕೆ ಕಂಡಿರುವುದರಿಂದ ಕಾಫಿ ರಫ್ತು ವಹಿವಾಟಿನಲ್ಲಿ ಹೊಸ ದಾಖಲೆ ನಿರ್ಮಿಸಲು ಸಾಧ್ಯವಾಗಿದೆ ಎಂದು ಕಾಫಿ ಮಂಡಳಿ ಹೇಳಿದೆ.  



2010-11ನೇ ಸಾಲಿನಲ್ಲಿ     ದೇಶದಿಂದ 3,16,034 ಟನ್‌ಗಳಷ್ಟು ಕಾಫಿ ರಫ್ತಾಗಿತ್ತು. ಪ್ರಸಕ್ತ ಅವಧಿಯಲ್ಲಿ ಪ್ರತಿ ಟನ್ ಕಾಫಿಗೆ ಸರಾಸರಿ ರೂ1,40,456 ಬೆಲೆ ಲಭಿಸಿದೆ. ಕಾಫಿ ಮಂಡಳಿ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಪ್ರಸಕ್ತ ಅವಧಿಯಲ್ಲಿ ಒಟ್ಟು ರಫ್ತು ವಹಿವಾಟು ಶೇ 33ರಷ್ಟು ಪ್ರಗತಿ ಕಂಡಿದ್ದು, ರೂ4,888 ಕೋಟಿಗಳಿಗೆ ಏರಿಕೆಯಾಗಿದೆ.

 

ಕಳೆದ ವರ್ಷ  ಪ್ರತಿ ಟನ್‌ಗೆ ರೂ1,80,400 ದರ ಇದ್ದ ಅರೇಬಿಕಾ ತಳಿ  ಸದ್ಯ ರೂ3,21,200ಕ್ಕೆ  ಏರಿಕೆ ಕಂಡಿದೆ. ರೋಬಸ್ಟಾ ತಳಿಯ ಬೆಲೆಯೂ ಹೆಚ್ಚಳವಾಗಿದ್ದು,   ಪ್ರತಿ ಟನ್‌ಗೆ ರೂ1,29,100 ರಷ್ಟಾಗಿದೆ. 



ಕಾಫಿ ಉತ್ಪಾದನೆಯಲ್ಲಿ ಭಾರತ ಏಷ್ಯಾದಲ್ಲಿ ಮೂರನೆಯ   ಸ್ಥಾನದಲ್ಲಿದೆ. ದೇಶದಿಂದ ಶೇ 60ರಷ್ಟು ಕಾಫಿ  ಯೂರೋಪ್ ಮಾರುಕಟ್ಟೆಗಳಿಗೆ ರಫ್ತಾಗುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.