ಶುಕ್ರವಾರ, ಏಪ್ರಿಲ್ 23, 2021
31 °C

ಕಾಫಿ ರಫ್ತು ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಫಿ ರಫ್ತು ಕುಸಿತ

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ 10 ತಿಂಗಳಲ್ಲಿ ದೇಶದಿಂದ 2.81 ಲಕ್ಷ ಟನ್‌ಗಳಷ್ಟು ಕಾಫಿ  ರಫ್ತಾಗಿದ್ದು, ರೂ 4,255 ಕೋಟಿ ವಹಿವಾಟು ನಡೆದಿದೆ.

ಆದರೆ,  2011ನೇ ಸಾಲಿನ ಜನವರಿ-ಅಕ್ಟೋಬರ್ ಅವಧಿಗೆ ಹೋಲಿಸಿದರೆ ರಫ್ತು     ಶೇ 7ರಷ್ಟು ಕುಸಿತ ಕಂಡಿದೆ ಎಂದು ಕಾಫಿ ಮಂಡಳಿ ಹೇಳಿದೆ.ಅರೇಬಿಕಾ ತಳಿ ರಫ್ತು ಶೇ 8ರಷ್ಟು ಹೆಚ್ಚಿದ್ದು, 54,048 ಟನ್‌ಗಳಷ್ಟಾಗಿದೆ. ರೊಬಸ್ಟಾ ತಳಿ  1,48, 869 ಟನ್‌ಗಳಿಗೆ ಇಳಿಕೆ ಕಂಡಿದೆ.  ಪ್ರಸಕ್ತ ಕಾಫಿ ಇಳುವರಿ ವರ್ಷದ (ಅಕ್ಟೋಬರ್-ಸೆಪ್ಟೆಂಬರ್) ಮೊದಲ 3 ತಿಂಗಳಲ್ಲಿ 18,990 ಟನ್‌ಗಳಷ್ಟು ಕಾಫಿ ರಫ್ತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.