ಗುರುವಾರ , ಜನವರಿ 23, 2020
19 °C

ಕಾಮಿಕ್ಸ್‌ನಲ್ಲಿ ಕನ್ನಡದ ಕತೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾಹಿತಿಗಳಾದ ಚನ್ನವೀರ ಕಣವಿ, ಪ್ರೊ. ಹಂಪ ನಾಗರಾಜಯ್ಯ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮತ್ತಿತರರು ಕನ್ನಡದ ಉತ್ತಮ ಕತೆಗಳನ್ನು ಕಾಮಿಕ್ಸ್ ರೂಪದಲ್ಲಿ ಹೊರತರಲು ಚಿಂತಿಸಿದ್ದಾರೆ.ಈ ಯೋಜನೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರೂ ಸಾಥ್ ನೀಡಿದ್ದಾರೆ.ಈ ಯೋಜನೆಯ ಕುರಿತು ಮಾತುಕತೆ ನಡೆಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಗೃಹ ಕಚೇರಿ `ಕೃಷ್ಣಾ~ದಲ್ಲಿ ಮಂಗಳವಾರ ಭೇಟಿ ಮಾಡಿದ ಡಾ. ಕಂಬಾರ, ಕಣವಿ, ಸಿದ್ಧರಾಮಯ್ಯ ಅವರು, ಯೋಜನೆಗೆ ಬೆಂಬಲ ನೀಡುವಂತೆ ಕೋರಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರೂ ನಿಯೋಗದಲ್ಲಿದ್ದರು.`ಈ ಯೋಜನೆಯಲ್ಲಿ ಕನ್ನಡದ ಉತ್ತಮ ಕತೆಗಳನ್ನು ತಲಾ 30 ಪುಟಗಳ ಕಾಮಿಕ್ಸ್ ರೂಪದಲ್ಲಿ ತರಲಾಗುವುದು. ಚಿತ್ರ, ಕತೆಗಳ ಮೂಲಕ ಮಕ್ಕಳಿಗೆ ನಾಡಿನ ಸಂಸ್ಕೃತಿಯನ್ನು ತಿಳಿಸುವ ಪ್ರಯತ್ನ ಇದು~ ಎಂದು ಡಾ. ಕಂಬಾರ ಅವರು `ಪ್ರಜಾವಾಣಿ~ಗೆ ತಿಳಿಸಿದರು.ಯೋಜನೆಯ ಕುರಿತು ಆಸಕ್ತಿ ತೋರಿರುವ ಸದಾನಂದ ಗೌಡರು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಕಾಮಿಕ್ಸ್ ಪುಸ್ತಕಗಳನ್ನು ಸರ್ಕಾರವೇ ಖರೀದಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)