ಗುರುವಾರ , ಜೂನ್ 24, 2021
29 °C

ಕಾಯಿಲೆಗಳಿಗೆ ಸ್ವಯಂ ಚಿಕಿತ್ಸೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಗಿರಿ: ಆರೋಗ್ಯ ಸುಧಾರಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ  ಸ್ವಯಂ ಔಷಧಿ ಸೇವನೆ ಸರಿಯಲ್ಲ  ಎಂಬ ವಿಚಾರದ ಕುರಿತು ಆರೋಗ್ಯ ಕಾರ್ಯಕರ್ತರು ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ತಾಲ್ಲೂಕು ಪಂಚಾಯಿತಿ ಸದಸ್ಯ ಹೊನ್ನುರುಸಾಬ ತಿಳಿಸಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ  `ಸಮುದಾಯ ಆರೋಗ್ಯ ದಿನಾಚರಣೆ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  ಇಂದಿನ ವೈಜ್ಞಾನಿಕ ಯುಗದಲ್ಲಿ ಸ್ವಯಂ ಚಿಕಿತ್ಸೆಗೆ ಜನ ಒತ್ತು ನೀಡಬಾರದು, ಯಾವುದೇ ಖಾಯಿಲೆ ಬಂದರೂ ಸಂಬಂಧಿಸಿದ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕೆಂದು ತಿಳಿಸಿದರು. ಆರೋಗ್ಯ ಇಲಾಖೆಯ ಆಡಳಿತಾಧಿಕಾರಿ ಡಾ. ಸುಧಾ ಎಂ.ಜಿ. ಮಾತನಾಡಿ ಸರ್ಕಾರ ಜಾರಿಗೆ ತಂದ ಆರೋಗ್ಯ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವ ಕೆಲಸವನ್ನು ಅಂಗನವಾಡಿ, ಆಶಾ ಕಾರ್ಯಕರ್ತರು ಮಾಡಬೇಕೆಂದು ತಿಳಿಸಿದರು. ತಾಯಿ ಮತ್ತು ಶಿಶು ಮರಣ ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ ಎಂದು ಡಾ. ಎ. ಎಸ್. ಶಿರೋಳ ತಿಳಿಸಿದರು. ಹಿರಿಯ ಆರೋಗ್ಯ ಸಹಾಯಕ ವಾಸಣ್ಣ ಬಿಳಿಗುಡ್ಡ ಮಾತನಾಡಿದರು.ಹೆರಿಗೆ, ಲಸಿಕೆ, ಎಚ್‌ಐವಿ, ಮಲೇರಿಯಾ, ಮತ್ತು ಕ್ಷಯ, ವಾಜಪೇಯಿ ಆರೋಗ್ಯ ಶ್ರೀ, ಕುಷ್ಠರೋಗ ಕುರಿತು ಮಂಜುಳಾ ಆಡಿನ್, ಗುರುರಾಜ, ಸಿದ್ರಾಮಪ್ಪ, ಪಾಲಾಕ್ಷ ರೆಡ್ಡಿ, ಆರೋಗ್ಯ ಮಿತ್ರ ನಾಗರಾಜ, ಹರ್ಷವರ್ಧನ ಮಾಹಿತಿ ನೀಡಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಲ್ಲಮ್ಮ ಬಸರಿಗಿಡದ ಹಾಜರಿದ್ದರು. ಮಲ್ಲೇಶಪ್ಪ ಇಲಕಲ್ ಸ್ವಾಗತಿಸಿದರು. ಗುರುರಾಜ ಎಚ್.ಎಂ. ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.