ಕಾರವಾರ: ಉತ್ತರ ಕನ್ನಡ ಜಿಲ್ಲೆ ಕಾರವಾರದ ಬೈತಖೋಲ, ಭಟ್ಕಳ ತಾಲ್ಲೂಕಿನ ಮಾವಿನಕುರ್ವೆ ಹಾಗೂ ಹೊನ್ನಾವರ ತಾಲ್ಲೂಕಿನ ಕಾಸರಗೋಡು ಬಂದರಿನಲ್ಲಿ ಸಮುದ್ರದ ಭರತ (ಹೈಟೈಡ್) ಅಂದರೆ ನೀರು ಒಂದೇ ಸಮನೆ ಏರಿಕೆ ಆದ ಘಟನೆ ಮಂಗಳವಾರ ನಡೆದಿದೆ. ಕಡಲಿನಲ್ಲಾದ ಈ ದಿಡೀರ್ ಬದಲಾವಣೆ ನೋಡಿದ ಮೀನುಗಾರರು ಕೆಲಕಾಲ ಭಯಭೀತರಾಗಿದ್ದರು.

ರಭಸದಲ್ಲಿ ಭರತದ ನೀರು ಹೊಳೆಯನ್ನು ಪ್ರವೇಶ ಮಾಡಿದ್ದರಿಂದ ಭಟ್ಕಳ ಬಂದರಿನ ಮೀನುಗಾರಿಕಾ ಬಂದರಿನಲ್ಲಿ ಲಂಗರು ಹಾಕಿದ್ದ ಬೋಟ್ಗಳು ಒಂದಕ್ಕೊಂದು ಡಿಕ್ಕಿಯಾಗಿ ಬೋಟ್ಗಳಿಗೆ ಅಪಾರ ಹಾನಿ ಆಗಿದೆ. ಈ ಘಟನೆಯಿಂದಾಗಿ ಮೀನುಗಾರರು ಕಡಲಿಗಿಳಿಯುವ ಧೈರ್ಯ ಮಾಡಲಿಲ್ಲ.

2004ರಲ್ಲಿ ಡಿಸೆಂಬರ್ 26ರಂದು ತಮಿಳುನಾಡಿನಲ್ಲಿ ಸುನಾಮಿ ಅಪ್ಪಳಿಸಿದಾಗ ಭಟ್ಕಳ, ಕಾರವಾರ ಸೇರಿದಂತೆ ಜಿಲ್ಲೆಯ ಅನೇಕ ಕಡೆಗಳಲ್ಲಿ ಇದೇ ರೀತಿಯಾಗಿ ಸಮುದ್ರ ನೀರು ಏರಿಕೆ ಆಗಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುನಾಮಿ ಬರುವ ರೀತಿಯಲ್ಲೇ ಸಮುದ್ರ ನೀರು ಏರಿದ್ದರಿಂದ ಇದು ಸುನಾಮಿಯೇ ಇರಬೇಕು ಎಂದು ಜನರು ಭಯಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.