ಭಾನುವಾರ, ಮಾರ್ಚ್ 7, 2021
27 °C

ಕಾರವಾರ ತೀರದಲ್ಲಿ ಬಣ್ಣದ ಓಕುಳಿ

ಹ.ಸ.ಬ್ಯಾಕೋಡ Updated:

ಅಕ್ಷರ ಗಾತ್ರ : | |

ಕಾರವಾರ ತೀರದಲ್ಲಿ ಬಣ್ಣದ ಓಕುಳಿ

ಪಡುವಣ ಕಡಲ ತೀರದ ಕಾರವಾರ ಪ್ರವಾಸಿಗರ ಕಣ್ಮಣಿ. ಹೆದ್ದಾರಿಯುದ್ದಕ್ಕೂ ಹರಡಿಕೊಂಡ ಅರಬ್ಬಿ ಸಮುದ್ರ ನೋಡುವುದೇ ಒಂದು ಸೊಗಸು.  ಕಾರವಾರ - ಗೋವಾ, ಬೆಳಗಾವಿ ರಸ್ತೆಯಲ್ಲಿ ಸಾಗುವಾಗ ಪಕ್ಕದಲ್ಲೇ ಕಡಲಿನ ನೊರೆ, ಅಲೆಗಳ ಮೊರೆತ ಸೆಳೆಯುತ್ತದೆ. ಇದೇ ರವೀಂದ್ರನಾಥ ಟ್ಯಾಗೋರ್ ಬೀಚ್.ಇಲ್ಲಿನ ಸೂರ್ಯಾಸ್ತ ವರ್ಣನಾತೀತ. ಸಂಜೆಯಾಗುತ್ತಲೇ ಕಡಲ ತೀರದ ಪಶ್ಚಿಮ ಭಾಗದಲ್ಲಿ ನೀರಿನಲ್ಲಿ ಮುಳುಗಿ ಮಾಯವಾಗುವ ಸೂರ್ಯನ ಕರಾಮತ್ತೇ ವಿಭಿನ್ನ. ಹಾಲು ಬಣ್ಣದ ನೊರೆಯ ಅಲೆಗಳು ಬಣ್ಣ ಬದಲಾಯಿಸುತ್ತವೆ. ತಿಳಿ ಕೆಂಬಣ್ಣದಿಂದ ಕಣ್ಮನಕ್ಕೆ ಲಗ್ಗೆ ಇಡುತ್ತವೆ. ಆಗಸದಲ್ಲಿ ಕ್ಷಣ ಕ್ಷಣಕ್ಕೂ ಹತ್ತಾರು ಬಣ್ಣಗಳ ಓಕುಳಿ.ಈ ಮನಮೋಹಕ ಸುಂದರ ಸೂರ್ಯಾಸ್ತದ ದೃಶ್ಯ ಕಾವ್ಯವನ್ನು ಪ್ರತಿ ವರ್ಷ ಜನವರಿಯಿಂದ ಮೇ ತಿಂಗಳ ಕೊನೆಯವರೆಗೂ ಸವಿಯಬಹುದು. ಆ ನಂತರ ಮಳೆಗಾಲದ ಭೋರ್ಗರೆತ, ಕಪ್ಪು ಮೋಡಗಳ ಕಣ್ಣಾಮುಚ್ಚಾಲೆಯಿಂದ ಇಂಥ ದೃಶ್ಯವೇ ಅಪರೂಪವಾಗುತ್ತದೆ. ಅಂದಹಾಗೆ ನೆನಪಿರಲಿ! ಕಾರವಾರಕ್ಕೆ ಬರುವಾಗ ಬರಿಗೈಯಲ್ಲಿ ಬರಬೇಡಿ, ಕೈಯಲ್ಲೊಂದು ಕ್ಯಾಮೆರಾ ತರಲು ಮರೆಯಬೇಡಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.