ನವದೆಹಲಿ (ಪಿಟಿಐ): ಗರಿಷ್ಠ ಬಡ್ಡಿ ದರ ಮತ್ತು ಪೆಟ್ರೋಲ್ ಬೆಲೆ ಏರಿಕೆ ಭೀತಿಯಿಂದ ಕಾರು ಮಾರಾಟ ಮೇ ತಿಂಗಳಲ್ಲಿ ಶೇ 2.78ರಷ್ಟು ಮಂದಗತಿ ಪ್ರಗತಿ ಕಂಡಿದೆ.

ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್ಐಎಂ) ಸೋಮವಾರ ಈ ಅಂಕಿಅಂಶ ಬಿಡುಗಡೆ ಮಾಡಿದ್ದು, ಮೇನಲ್ಲಿನ ಮಾರಾಟ ಪ್ರಗತಿ ಕಳೆದ ಏಳು ತಿಂಗಳಲ್ಲೇ ಕನಿಷ್ಠ ಮಟ್ಟದ್ದಾಗಿದೆ ಎಂದಿದೆ.

ಮೇನಲ್ಲಿ 1,63,229 ಕಾರು ಮಾರಾಟವಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,58,809 ಕಾರು ಮಾರಾಟವಾಗಿದ್ದವು. ಕಳೆದ ಅಕ್ಟೋಬರ್ನಲ್ಲಿ ಕಾರು ಮಾರಾಟ ಶೇ 23.77ರಷ್ಟು ಕುಸಿದಿತ್ತು. ಮೇ ಮಾರಾಟವೂ ಆ ಮಟ್ಟಕ್ಕೇ ಇಳಿದಿದೆ ಎಂದು `ಎಸ್ಐಎಎಂ~ ಮಹಾ ನಿರ್ದೇಶಕ ವಿಷ್ಣು ಮಾಥೂರ್ ಸುದ್ದಿಗಾರರಿಗೆ ಸೋಮವಾರ ತಿಳಿಸಿದರು.

ಬಡ್ಡಿ ದರ ಏರಿಕೆ ಜತೆಗೇ ಕಾರುಗಳ ಬೆಲೆಯಲ್ಲಿಯೂ ಏರಿಕೆಯಾಗಿರುವುದು ಮಾರಾಟದ ಮೇಲೆ ಪರಿಣಾಮ ಬೀರಿದೆ. ಬಜೆಟ್ನಲ್ಲಿ ಅಬಕಾರಿ ತೆರಿಗೆ ಹೆಚ್ಚಿಸಿರುವುದನ್ನು ಕಂಪೆನಿಗಳು ಗ್ರಾಹಕರ ಮೇಲೆ ವರ್ಗಾಯಿಸಿವೆ. ಇದರಿಂದ ಡೀಸೆಲ್ ಕಾರುಗಳ ಬೇಡಿಕೆಯೂ ತಗ್ಗಿದೆ. ಈಗ ಮತ್ತೊಮ್ಮೆ ಸರ್ಕಾರ ಡೀಸೆಲ್ ಕಾರುಗಳ ತೆರಿಗೆ ಹೆಚ್ಚಿಸಿದರೆ ಒಟ್ಟಾರೆ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಮಾರುತಿ ಸುಜುಕಿ ಮೇನಲ್ಲಿ ಒಟ್ಟು 72,309 ಕಾರು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಗತಿ ಶೇ 5.94ರಷ್ಟು ಕುಸಿದಿದೆ. ಹುಂಡೈ ಮೋಟಾರ್ ಇಂಡಿಯ ಮಾರಾಟ ಶೇ 3.03ರಷ್ಟು ಪ್ರಗತಿ ಕಂಡಿದೆ. ಒಟ್ಟು 31,939 ಕಾರುಗಳನ್ನು ಹುಂಡೈ ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್ ಮಾರಾಟ ಶೇ 6.70ರಷ್ಟು ಹೆಚ್ಚಿದ್ದು, ಒಟ್ಟು 17,371 ಕಾರು ಮಾರಾಟವಾಗಿವೆ

ದ್ವಿಚಕ್ರವಾಹನ ಚೇತರಿಕೆ: ದ್ವಿಚಕ್ರ ವಾಹನ ಮಾರಾಟ ಮೇನಲ್ಲಿ ಶೇ 11.40ರಷ್ಟು ಚೇತರಿಕೆ ಕಂಡಿದೆ. ಒಟ್ಟು 11,92,688 ವಾಹನಗಳು ಈ ಅವಧಿಯಲ್ಲಿ ಮಾರಾಟವಾಗಿವೆ. ಹೀರೊ ಮೋಟೊ ಕಾರ್ಪ್ ಶೇ 10.68ರಷ್ಟು ಪ್ರಗತಿ ದಾಖಲಿಸಿದೆ. ಬಜಾಜ್ ಆಟೊ ಮಾರಾಟ ಶೇ 5.30ರಷ್ಟು ಕುಸಿದಿದೆ. ಹೋಂಡ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯ(ಎಚ್ಎಂಎಸ್ಐ) 88,334 ವಾಹನಗಳನ್ನು ಮಾರಾಟ ಮಾಡಿದ್ದು, ಶೇ 45.45ರಷ್ಟು ಏರಿಕೆ ಕಂಡಿದೆ. ಟಿವಿಎಸ್ ಮೋಟಾರ್ ಮಾರಾಟ ಶೇ 14.47ರಷ್ಟು ಹೆಚ್ಚಿದೆ.

ಮೇನಲ್ಲಿ ಒಟ್ಟು 37,184 ತ್ರಿಚಕ್ರ ವಾಹನಗಳ ಮಾರಾಟವಾಗಿದ್ದು, ಶೇ 3.32ರಷ್ಟು ಪ್ರಗತಿ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.