ಭಾನುವಾರ, ಏಪ್ರಿಲ್ 18, 2021
33 °C

ಕಾರು ರ್‍ಯಾಲಿ ವೇಳೆ ಅಪಘಾತ: ಮೃತಪಟ್ಟ ನೇವಿಗೇಟರ್ ಆಶಿಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಮುಘಲ್ ಕಾರು ರ‌್ಯಾಲಿಯ ಕೊನೆಯ ಹಂತದ ರೇಸ್ ವೇಳೆ ಆಳವಾದ ಪ್ರಪಾತಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ನೇವಿಗೇಟರ್ ಆಶಿಶ್ ಮಹಾಜನ್ ಮಂಗಳವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.ಅನಂತನಾಗ್ ಇಲ್ಲೆಯ ಸಿಮ್ತಾನ್ ಬಳಿ ಭಾನುವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಬೆಂಗಳೂರು ಮೂಲದ ಚಾಲಕ ಜಿತೇಂದ್ರ ಶುಕ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರಿದ್ದ ಜಿಪ್ಸಿ10 ಸಾವಿರ ಆಳದ ಪ್ರಪಾತಕ್ಕೆ ಬ್ದ್ದಿದಿತ್ತು. ಜಿತೇಂದ್ರ ಅವರಿಗೆ ಆಶಿಶ್ ನೇವಿಗೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.ಗಾಯಗೊಂಡಿದ್ದ ಮಹಾಜನ್ ಅವರನ್ನು ಸಿಆರ್‌ಪಿಎಫ್ ಸಿಬ್ಬಂದಿ ವೈದ್ಯಕೀಯ ವಿಜ್ಞಾನ ಕಾಲೇಜಿಗೆ ದಾಖಲಿಸಲಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.