ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2009, 2010 ಮತ್ತು 11ನೇ ಸಾಲಿನ ಕೆಳಕಂಡ ಪ್ರಶಸ್ತಿಗಳಿಗೆ ವರದಿ, ಲೇಖನ ಮತ್ತು ಸುದ್ದಿ ಛಾಯಾಚಿತ್ರಗಳನ್ನು ಆಹ್ವಾನಿಸಿದೆ.

ಜಿ.ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿ), ಪಟೇಲ ಬೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿ), ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿ), ಬಿ.ಎಸ್.ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿ), ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿ), ಖಾದ್ರಿ ಶಾಮಣ್ಣ ಪ್ರಶಸ್ತಿ ( ಅತ್ಯುತ್ತಮ ವಿಮರ್ಶಾತ್ಮಕ ಲೇಖನ), ಮಂಗಳ ಎಂ.ಸಿ.ವರ್ಗೀಸ್ ಪ್ರಶಸ್ತಿ (ವಾರ ಪತ್ರಿಕೆಯಲ್ಲಿ ಪ್ರಕಟವಾದ ಅತ್ಯುತ್ತಮ ಚಿತ್ರ ಲೇಖನ), ಮಂಡಿಬೆಲೆ ರಾಜಣ್ಣ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರ), ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನ), ಆರ್.ಎಲ್.ವಾಸುದೇವರಾವ್ ಪ್ರಶಸ್ತಿ (ವನ್ಯ ಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನ), ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತ ಅತ್ಯುತ್ತಮ ವರದಿ), ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ (ಗ್ರಾಮೀಣ ಜನ-ಜೀವನ ಕುರಿತ ಅತ್ಯುತ್ತಮ ವರದಿ), ಬೆಂಗಳೂರು ನಿರ್ಮಾತೃ ಕೆಂಪೇಗೌಡ ಸ್ಮಾರಕ ಪ್ರಶಸ್ತಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಭಿವೃದ್ಧಿ ಕುರಿತ ಅತ್ಯುತ್ತಮ ವರದಿ), ಯಜಮಾನ್ ಟಿ.ನಾರಾ ಯಣಪ್ಪ ಸ್ಮಾರಕ ಪ್ರಶಸ್ತಿ (ಜಿಲ್ಲಾ ಪತ್ರಿಕೆಗಳಲ್ಲಿ ಪ್ರಕಟ ವಾಗಿರುವ ಅತ್ಯುತ್ತಮ ಕೃಷಿ ವರದಿ), ಹಾಸ್ಯ ಚಕ್ರವರ್ತಿ ನಾಡಿಗೇರ ಕೃಷ್ಣರಾಯರ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ವಿಡಂಬನಾತ್ಮಕ ಲೇಖನ).

ಆಯಾ ವರ್ಷದ ಜ.1 ರಿಂದ ಡಿ.31ರ ಒಳಗೆ ದಿನಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾದ ಲೇಖನ, ವರದಿ, ಸುದ್ದಿ ಛಾಯಾಚಿತ್ರ ಕಳುಹಿಸಬಹುದು. ಅನು ವಾದಿತ ಕೃತಿಗಳಿಗೆ ಅವಕಾಶವಿಲ್ಲ. ಒಂದು ಪ್ರಶಸ್ತಿಗೆ ಒಂದು ವರದಿ ಅಥವಾ ಲೇಖನ ಕಳುಹಿಸಬಹುದು. ಮೂರು ಪ್ರತಿಗಳಲ್ಲಿ ಒಂದು ಮೂಲ ಪ್ರತಿ ಕಳುಹಿಸ ಬೇಕು. ವಿದ್ಯುನ್ಮಾನ ಮಾಧ್ಯಮದ ಪ್ರವೇಶಕ್ಕೆ ವರದಿಯ ತುಣುಕುಗಳನ್ನು ಏ. 30ರೊಳಗೆ ಕಳುಹಿಸಬಹುದು. ವಿಳಾಸ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಶಂಸುದ್ದಿನ್ ಕಟ್ಟಡ, ಹಲಸೂರು ಗೇಟ್ ಪೋಲಿಸ್ ಠಾಣೆ ಸಮೀಪ, 1ನೇ ಮಹಡಿ, ಹಮೀದ್ ಷಾ ಸಂಕೀರ್ಣ, ಕಬ್ಬನ್ಪೇಟೆ ಮುಖ್ಯರಸ್ತೆ, ಬೆಂಗಳೂರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.