ಶುಕ್ರವಾರ, ಮೇ 7, 2021
26 °C

ಕಾರ್ಯಾಗಾರ - ತರಬೇತಿ - ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಕುಶಲ ದಿನಾಚರಣೆ

ಶ್ರೀನಿಧಿ ಆರ್ಟ್ಸ್ ಅಂಡ್ ಫೌಂಡೇಷನ್ ಕಮಲಾದೇವಿ ಚಟ್ಟೋಪಾಧ್ಯಾಯ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಕರಕುಶಲ ದಿನಾಚರಣೆ ಹಮ್ಮಿಕೊಂಡಿದೆ.ಮಂಗಳೂರಿನಲ್ಲಿ ಜನಿಸಿದ ಕಮಲಾದೇವಿ ಕೈಮಗ್ಗ, ಕರಕುಶಲ, ರಂಗಭೂಮಿ ಈಗೇ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಅಪಾರ ಕೀರ್ತಿ ಗಳಿಸಿದ್ದವರು.ಇದೇ ಸಂದರ್ಭದಲ್ಲಿ  ಕರಕುಶಲ, ರಂಗಭೂಮಿ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಶಿಲ್ಪಿ ಲಕ್ಷ್ಮೀನಾರಾಯಣಾಚಾರ್, ರಾಷ್ಟ್ರ ಪ್ರಶಸ್ತಿ ವಿಜೇತೆ ಹೇಮಾ ಶೇಖರ್ ಹಾಗೂ ಅರುಣ್ ಸಾಗರ್, ಕಲಾ ನಿರ್ದೇಶಕ ಡಾ.ಎಚ್.ಎಲ್.ಎನ್.ರಾವ್ ಅವರನ್ನು ಸನ್ಮಾನಿಸಲಾಗುವುದು. ನಂತರ ಅಬ್ಬೂರು ಮುರಳೀಧರ್ ಮತ್ತು ತಂಡದಿಂದ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ.ಎಂ. ವಿ. ನಾರಾಯಣರಾವ್ ಉದ್ಘಾಟನೆ ಮಾಡಲಿದ್ದು. ಪಿ.ಮಲ್ಲಿಕಾರ್ಜುನಯ್ಯ, ಎಸ್.ಸಿ. ದೇವರ ಮಣಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. 6.30.ರಂಗ ತರಬೇತಿ

ಭಾರತೀಯ ವಿದ್ಯಾಭವನ ರಂಗಾಸಕ್ತರಿಗಾಗಿ ಏ.9ರಿಂದ ಒಂದು ವಾರದ ಅವಧಿಯ ರಂಗ ತರಬೇತಿ ಶಿಬಿರ ಆಯೋಜಿಸಿದೆ.ಹತ್ತು ವರ್ಷ ವಯಸ್ಸಿಗೆ ಮೇಲ್ಪಟ್ಟ ರಂಗಾಸಕ್ತರು ಶಿಬಿರದಲ್ಲಿ ತರಬೇತಿ ಪಡೆಯಬಹುದು. ಶರಣ್ಯ ರಾಮ ಪ್ರಕಾಶ್ ಮತ್ತು ಶ್ವೇತಾಂಶು ಬೊರಾ ಶಿಬಿರದಲ್ಲಿ ಧ್ವನಿ, ಜಾಗ ಮತ್ತು ದೇಹವನ್ನು ರಂಗ ಸಂವಹನಕ್ಕೆ ಬಳಸುವ ಕಲೆಯ ಅನುಭವ ಕುರಿತು ತರಬೇತಿ ನೀಡುತ್ತಾರೆ. ಸ್ಥಳ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ಮಾಹಿತಿಗೆ: 9980055864.ತಬಲಾ ತರಗತಿ

ಶ್ರೀ ಮ್ಯೂಸಿಕ್ ಸ್ಕೂಲ್ ಏಪ್ರಿಲ್ ಮೊದಲ ವಾರದಿಂದ ಹಿಂದೂಸ್ತಾನಿ ತಬಲಾ ತರಗತಿಗಳನ್ನು ಆಯೋಜಿಸಿದೆ.ಮಲ್ಲೇಶ್ವರ ಮತ್ತು ಇಸ್ರೊ ಲೇಔಟ್‌ಗಳಲ್ಲಿ ತರಗತಿಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಗೋಪಿನಾಥ್ ಅವರನ್ನು ಸಂಪಕಿಸಲು 98454 89179

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.