ಸೋಮವಾರ, ಸೆಪ್ಟೆಂಬರ್ 16, 2019
22 °C

ಕಾಲಿನ ಸ್ನಾಯುಸೆಳೆತ: ಕುಸಿದು ಬಿದ್ದ ರಫಾ

Published:
Updated:

ನ್ಯೂಯಾರ್ಕ್ (ಐಎಎನ್‌ಎಸ್): ಹಾಲಿ ಚಾಂಪಿಯನ್ ಸ್ಪೇನ್‌ನ ರಫೆಲ್ ನಡಾಲ್ ಇಲ್ಲಿ ನಡೆಯುತ್ತಿರುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಪತ್ರಿಕಾಗೋಷ್ಠಿ ವೇಳೆ ಕುಸಿದು ಬಿದ್ದ ಘಟನೆ ನಡೆದಿದೆ.ಬಲಕಾಲಿನ ಸ್ನಾಯುಸೆಳೆತದ ಕಾರಣ ಅವರು ಕುಳಿತ ಕುರ್ಚಿಯಿಂದಲೇ ಕೆಳಗೆ ಬಿದ್ದರು. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಅವರನ್ನು ಉಪಚರಿಸಿದರು. ಅದಕ್ಕೂ ಮೊದಲು ರಫೆಲ್ ಮೂರನೇ ಸುತ್ತಿನ ಪಂದ್ಯದಲ್ಲಿ 7-6, 6-1, 7-5ರಲ್ಲಿ ಅರ್ಜೆಂಟೀನಾದ ಡೇವಿಡ್ ನೆಲ್ಬಂಡಿಯನ್ ಎದುರು ಗೆಲುವು ಸಾಧಿಸಿದ್ದರು.`ನನ್ನ ಕಾಲಿನಲ್ಲಿ ತುಂಬಾ ನೋವಿದೆ. ಸ್ನಾಯುಸೆಳೆತಕ್ಕೆ ಒಳಗಾಗಿದ್ದೇನೆ~ ಎಂದು ಎರಡನೇ ಶ್ರೇಯಾಂಕ ಹೊಂದಿರುವ `ರಫಾ~ ನುಡಿದರು. ಚೇತರಿಸಿಕೊಂಡ ಬಳಿಕ ಅವರು ಸುದ್ದಿಗೋಷ್ಠಿ ಮುಂದುವರಿಸಿದರು.

 

Post Comments (+)