ಗುರುವಾರ , ಮೇ 6, 2021
23 °C

ಕಾಲುವೆ ಹೂಳು ತೆಗೆಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಲುವೆ ಹೂಳು ತೆಗೆಸಲು ಒತ್ತಾಯ

ಕೃಷ್ಣರಾಜಪುರ: `ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಂಪರ್ಕಿಸುವ ದೇವಸಂದ್ರ ಪ್ರಮುಖ ರಸ್ತೆ ಬಳಿಯ ಮಳೆನೀರು ಕಾಲುವೆ ಕಲುಷಿತಗೊಂಡು, ನೀರು ಸರಾಗವಾಗಿ ಹರಿಯದೆ ಕೊಚ್ಚೆಗುಂಡಿಯಾಗಿದೆ. ಕಾಲುವೆಯ ಹೂಳು ತೆಗೆಸಬೇಕು' ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.`ಪ್ರಮುಖ ರಸ್ತೆಯ ಇಕ್ಕಡೆಗಳಲ್ಲಿ ಸುಮಾರು 120ಕ್ಕೂ ಅಧಿಕ ಅಂಗಡಿಗಳಿವೆ. ಮಳೆನೀರು ಕಾಲುವೆಯ ಆಸುಪಾಸಿನಲ್ಲಿ ತಳ್ಳು ಬಂಡಿ ವ್ಯಾಪಾರಿಗಳು,ಬಟ್ಟೆ ವ್ಯಾಪಾರಿಗಳು ಇದ್ದಾರೆ. ಕೊಳಚೆ ನೀರಿನಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ' ಎಂದು ಅಂಗಡಿ ಮಾಲೀಕ ಪುರುಷೋತ್ತಮ್ ದೂರಿದರು.`ಕಾಲುವೆಗೆ ಸೇರಿದ ನೀರು ಸರಾಗವಾಗಿ ಹರಿಯಲು ಕೆ.ಆರ್.ಪುರದ ಕೃಷ್ಣ ಚಿತ್ರಮಂದಿರದ ಬಳಿ ಟ್ರಾನ್ಸ್‌ಫಾರ್ಮರ್ ಅಡ್ಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.ಆದರೆ, ಈಗಾಗಲೇ ಬೆಸ್ಕಾಂ ಟ್ರಾನ್ಸ್‌ಫಾರ್ಮರ್ ಅನ್ನು ಸ್ಥಳಾಂತರಗೊಳಿಸಿದೆ. ಕಾಲುವೆ ಒಳಗೆ ನೀರು ಸರಾಗವಾಗಿ ಹರಿಯದೆ ಜೊಂಡು ಬೆಳೆದಿದೆ. ನೈರ್ಮಲ್ಯ ಹಾಳಾಗುತ್ತಿದೆ' ಎಂದು ಟೀ ವ್ಯಾಪಾರಿ ಆನಂದ ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.