ಗುರುವಾರ , ಮೇ 26, 2022
23 °C

ಕಾಲ್ತುಳಿತ: ಒಂದು ಸಾವು, 25 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್ (ಪಿಟಿಐ): ಅಸ್ತಮ ರೋಗಿಗಳಿಗಾಗಿ ವಿತರಿಸಲಾಗುತ್ತಿದ್ದ ಮೀನು ಔಷಧವನ್ನು ಪಡೆಯಲು ಶುಕ್ರವಾರ ಇಲ್ಲಿನ ಕ್ರೀಡಾಂಗಣಕ್ಕೆ ಸಾವಿರಾರು ಜನರು ಆಗಮಿಸಿದ್ದ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಇದರಿಂದ ಒಬ್ಬ ವ್ಯಕ್ತಿ ಮೃತಪಟ್ಟು ಸುಮಾರು 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೀನು ಔಷಧವನ್ನು ಪಡೆಯಲು ಬೆಳಿಗ್ಗೆಯೇ ಕ್ರೀಡಾಂಗಣಕ್ಕೆ ಆಗಮಿಸಿದ್ದ ಸಾವಿರಾರು ಜನರು ಒಂದೇ ಬಾರಿಗೆ ಕ್ರೀಡಾಂಗಣದ ಬಾಗಿಲ ಕಡೆಗೆ ನುಗ್ಗಿದರು. ಇದರಿಂದಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.ಈ ದುರ್ಘಟನೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಗೊರಖ್ ಪಾಟೀಲ್ (60) ಎಂದು ಗುರುತಿಸಲಾಗಿದ್ದು, ಇವರು ಅಸ್ತಮ ರೋಗಕ್ಕೆ ಒಳಗಾಗಿದ್ದರು ಎಂದು ನಂಬಲಾಗಿದೆ. ಕಾಲ್ತುಳಿತ ಉಂಟಾದ ಸಂದರ್ಭದಲ್ಲಿ ಇವರು ಕೆಳಕ್ಕೆ ಬಿದ್ದರು. ತಕ್ಷಣ ಇವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಮಾರ್ಗ ಮಧ್ಯದಲ್ಲಿಯೇ ಅವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದರು.ಮಹಿಳೆ ಸೇರಿದಂತೆ ಸುಮಾರು 25ಕ್ಕೂ ಅಧಿಕ ಜನರು ಈ ಘಟನೆಯಿಂದ ಗಾಯಗೊಂಡಿದ್ದಾರೆ ಎನ್ನಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.