ಶುಕ್ರವಾರ, ಮೇ 27, 2022
31 °C

ಕಾಳಾಗದ ಹೈಬ್ರಿಡ್ ಜೋಳ : ರೈತರ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ತಾಲ್ಲೂಕಿನ ಶಿರಗಂಬಿ ಗ್ರಾಮದಲ್ಲಿ ಬೇಸಿಗೆ ಕಾಲಕ್ಕೆ ಬಿತ್ತನೆ ಮಾಡಲಾಗಿರುವ ಸುಮಾರು 20 ಎಕರೆ ಹೈಬ್ರಿಡ್ ಜೋಳವು ಕಳಪೆ ಬೀಜದ ಕಾರಣದಿಂದ ತೆನೆಯಲ್ಲಿ ಕಾಳು ಆಗದೇ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿ.ಕೆಂಚಳ್ಳೇರ ದೂರಿದ್ದಾರೆ.ಮಂಗಳವಾರ ಹತ್ತಾರು ರೈತರೊಂದಿಗೆ ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಆಗಮಿಸಿ ಈ ಬಗ್ಗೆ ದೂರು ನೀಡಿದ ಅವರು, ‘ಮಹಿಕೊ-51’ ತಳಿಯ ಹೈಬ್ರಿಡ್ ಬೀಜವನ್ನು ಶಿರಗಂಬಿ ಗ್ರಾಮದಲ್ಲಿ 18 ಜನ ರೈತರು ರಟ್ಟೀಹಳ್ಳಿಯ ಆಗ್ರೋ ಕೇಂದ್ರದಿಂದ ಖರೀದಿಸಿ ಸುಮಾರು 20 ಎಕರೆಯಲ್ಲಿ ಬಿತ್ತನೆ ಮಾಡಿದ್ದಾರೆ. ಬೀಜ ಕಳಪೆಯಾಗಿರುವುದರಿಂದ ಶೇ.75ರಷ್ಟು ತೆನೆಯಲ್ಲಿ ಕಾಳು ಕಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.‘ವಿಜ್ಞಾನಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ಮಾಡಿಸಲಾಗುವುದು’ ಎಂಬ ಸಹಾಯಕ ಕೃಷಿ ನಿರ್ದೇಶಕರ ಹೇಳಿಕೆಯನ್ನು ವಿರೋಧಿಸಿದ ಅವರು, ವಿಜ್ಞಾನಿಗಳು ಕಂಪನಿಗಳ ಪರವಾಗಿ ತಮ್ಮ ವರದಿ ನೀಡುತ್ತಾರೆ. ಇಲ್ಲಿಯವರೆಗೆ ಯಾವುದೇ ವಿಜ್ಞಾನಿಗಳು ರೈತರ ಪರ ವರದಿ ನೀಡಿಲ್ಲ, ಕಾರಣ ಸಂಬಂಧಪಟ್ಟ ಕಂಪನಿ ಹಿರಿಯ ಅಧಿಕಾರಿಗಳನ್ನು ಕರೆಸಿ, ಬೆಳೆಯಿಂದ ಬರಬೇಕಾಗಿದ್ದ ಇಳುವರಿಯಷ್ಟು ಹಾನಿ ತುಂಬಿಕೊಡಬೇಕು ಎಂದು ಆಗ್ರಹಿಸಿದರು.ಹಾನಿಗೊಳಗಾದ ರೈತರಾದ ಶಿವಪ್ಪ ಹನುಮಂತಪ್ಪ ಗುಬ್ಬಿ, ನಾಗನಗೌಡ ಮಾಳಗಿ, ಬಸಪ್ಪ ಗುಬ್ಬಿ, ಸುಧಾಮ ಮುದ್ದಣ್ಣನವರ, ಹನುಮಂತಪ್ಪ ಬಸರೀಹಳ್ಳಿ, ಹನುಮಂತಪ್ಪ ಗೊಂದೇರ ಮೊದಲಾದವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.