ಶುಕ್ರವಾರ, ಅಕ್ಟೋಬರ್ 2, 2020
24 °C

ಕಾವೇರಿ ವಿವಾದವನ್ನು ಮತ್ತೊಮ್ಮೆ ಕೆದಕಿದ ಜಯಲಲಿತಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ವಿವಾದವನ್ನು ಮತ್ತೊಮ್ಮೆ ಕೆದಕಿದ ಜಯಲಲಿತಾ

ಚೆನ್ನೈ (ಪಿಟಿಐ): ಕೇಂದ್ರ ಯುಪಿಎ ಸರ್ಕಾರವೇ ಪಾರ್ಶ್ವವಾಯು ಪೀಡಿತವಾಗಿದೆ, ಅದು ತನ್ನ ಆಂತರಿಕ ಕಲಹಗಳಲ್ಲೆ ಮುಳುಗಿ ಹೋಗಿದ್ದು, ಜನಸಾಮಾನ್ಯರ ಜೀವನಾವಶ್ಯಕ ವಿಷಯಗಳತ್ತ ಲಕ್ಷ್ಯ ವಹಿಸಿಲ್ಲ ಎಂದು ಕಿಡಿಕಾರಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇದಕ್ಕೆ ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಗೆಜೆಟ್‌ನಲ್ಲಿ ಪ್ರಕಟಿಸದೇ ಇರುವುದೆ ಸಾಕ್ಷಿ ಎಂದು ಮಂಗಳವಾರ ಹೇಳಿದ್ದಾರೆ.ತಾವು ಮೇ 19 ರಂದೇ ಕಾವೇರಿ ಪ್ರಾಧಿಕಾರದ ಸಭೆ ಕರೆಯಬೇಕೆಂದು ಪ್ರಧಾನಿ ಅವರಿಗೆ ಪತ್ರ ಬರೆದಿದ್ದರೂ ಈವರೆಗೂ ಸಭೆ ಕರೆದಿಲ್ಲ. ತಕ್ಷಣ ಸಭೆ ಕರೆಯಬೇಕೆಂದು ಆಗ್ರಹಿಸಿದ್ದಾರೆ.ಮೇ 14 ರಂದು ಜಯಲಲಿತಾ ಅವರು ಕರ್ನಾಟಕವು ಕಾವೇರಿ ನೀರನ್ನು ಅನ್ಯಾಯವಾಗಿ ಬೇಸಿಗೆ ನೀರಾವರಿಗೆ ಬಳಸುತ್ತಿದೆ ಎಂದು ಆರೋಪಿಸಿ ಇದಕ್ಕಾಗಿ ಕಾವೇರಿ ಪ್ರಾಧಿಕಾರದ ಸಭೆ ಕರೆಯುವಂತೆ ಆಗ್ರಹಿಸಿ ಪ್ರಧಾನಿ ಅವರಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.