ಸೋಮವಾರ, ಮೇ 17, 2021
27 °C

ಕಿಂಗ್ಸ್ ಇಲೆವೆನ್‌ಗೆ ಮೊದಲ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೊಹಾಲಿ (ಪಿಟಿಐ): ಡಿಮಿಟ್ರಿ ಮಸ್ಕರೇನಸ್ (25ಕ್ಕೆ5) ಪ್ರಭಾವಿ ಬೌಲಿಂಗ್ ಮತ್ತು ಶಾನ್ ಮಾರ್ಷ್ (ಅಜೇಯ 64, 54 ಎ, 7 ಬೌಂ, 1 ಸಿ) ಉತ್ತಮ ಬ್ಯಾಟಿಂಗ್ ನೆರವಿನಿಂದ  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್‌ನ ಐದನೇ ಅವತರಣಿಕೆಯ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯಿತು.



ಪಿಸಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆ್ಯಡಮ್ ಗಿಲ್‌ಕ್ರಿಸ್ಟ್ ಬಳಗ 7 ವಿಕೆಟ್‌ಗಳಿಂದ ಪುಣೆ ವಾರಿಯರ್ಸ್ ತಂಡವನ್ನು ಮಣಿಸಿತು.ಮೊದಲು ಬ್ಯಾಟ್ ಮಾಡಿದ ಸೌರವ್ ಗಂಗೂಲಿ ಬಳಗ ಮಸ್ಕರೇನಸ್ ದಾಳಿಗೆ ನಲುಗಿ 19 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟಾಯಿತು. ಸುಲಭ ಗುರಿ ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಇನ್ನೂ 14 ಎಸೆತಗಳು ಬಾಕಿಯುಳಿದಿರುವಂತೆಯೇ 3 ವಿಕೆಟ್‌ಗೆ 116 ರನ್ ಗಳಿಸಿ ಜಯ ಸಾಧಿಸಿತು.




 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.