ಮುಂಬೈ (ಪಿಟಿಐ): ಸಾಲದ ಸುಳಿಯಲ್ಲಿ ಪರಿತಪಿಸುತ್ತಿರುವ `ಕಿಂಗ್ಫಿಷರ್ ಏರ್ಲೈನ್ಸ್~ನ 2012-13ನೇ ಹಣಕಾಸು ವರ್ಷದ ಜುಲೈ-ಸೆಪ್ಟೆಂಬರ್ ಅವಧಿಯ ನಿವ್ವಳ ನಷ್ಟ ರೂ.754 ಕೋಟಿಗೆ(ಶೇ 61ರಷ್ಟು) ಹೆಚ್ಚಿದೆ. ಹಿಂದಿನ ವರ್ಷ 2ನೇ ತ್ರೈಮಾಸಿಕದಲ್ಲಿ ಕಂಪೆನಿ ರೂ.469 ಕೋಟಿ ನಿವ್ವಳ ನಷ್ಟದಲ್ಲಿದ್ದಿತು. ವಿಜಯ ಮಲ್ಯ ಒಡೆತನದ, `ಕಿಂಗ್ಫಿಷರ್ ಏರ್ಲೈನ್ಸ್~ ಸಾಲದ ಹೊರೆ ರೂ.8000 ಕೋಟಿಯಷ್ಟಿದೆ.

`ಮೀಂಚುಳ್ಳಿ~ಯನ್ನು ಲಾಂಛನವಾಗಿಸಿಕೊಂಡು, ಕಡುಗೆಂಪು ಬಣ್ಣದ ವಿಮಾನಗಳ ಮೂಲಕ ಸೇವೆ ಒದಗಿಸುತ್ತಿದ್ದ ಈ ಸಂಸ್ಥೆಯ ಒಟ್ಟಾರೆ ನಷ್ಟದ ಮೊತ್ತ ಸೆಪ್ಟೆಂಬರ್ 30ರ ವೇಳೆಗೆ ರೂ.9000 ಕೋಟಿ ಮುಟ್ಟಿದೆ. ವೇತನ ಪಾವತಿಸದೇ ಇದ್ದುದರಿಂದ ಪೈಲಟ್ಗಳು, ತಂತ್ರಜ್ಞರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ವಿಮಾನ ಹಾರಾಟ ಕಡೆಕ್ಷಣ ರದ್ದಾಗುತ್ತಿದ್ದುದು, ಸಾಲಕ್ಕೆ ಬಡ್ಡಿ ಕಟ್ಟಬೇಕಾಗಿದ್ದು ಮೊದಲಾದ ಋಣಾತ್ಮಕ ಕಾರಣಗಳಿಂದಾಗಿ ಕಂಪೆನಿಯ ನಷ್ಟದ ಬಾಬ್ತು ದಿನಕಳೆದಂತೆ ಹೆಚ್ಚುತ್ತಲೇ ಇದೆ.

6 ವರ್ಷದ ಹಿಂದೆ ಲಾಭ: 2006ರ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ ಅವಧಿಯಲ್ಲಿ ರೂ.9.6 ಕೋಟಿ ನಿವ್ವಳ ಲಾಭ ಗಳಿಸಿದ್ದೇ ಕೊನೆ, ಆನಂತರದಲ್ಲಿ ಕಿಂಗ್ಫಿಷರ್ ಸತತವಾಗಿ ನಷ್ಟ ಅನುಭವಿಸುತ್ತಲೇ ಇದೆ. 2012ರ ಏಪ್ರಿಲ್-ಜೂನ್ ಅವಧಿಯಲ್ಲಿ ನಷ್ಟದ ಮೊತ್ತ ರೂ.651 ಕೋಟಿ ಇದ್ದಿತು. ಅತಿ ಹೆಚ್ಚು ನಷ್ಟ (ರೂ.1152 ಕೋಟಿ) ಅನುಭವಿಸಿದ್ದೆಂದರೆ ಕಳೆದ ಹಣಕಾಸು ವರ್ಷದ 4ನೇ ತ್ರೈಮಾಸಿಕದಲ್ಲಿ. ಎರಡನೇ ಅತ್ಯಧಿಕ ನಷ್ಟದ ತ್ರೈಮಾಸಿಕ ಎಂದರೆ ಪ್ರಸಕ್ತ ಅವಧಿಯೇ ಆಗಿದೆ.

2011-12ರ 2ನೇ ತ್ರೈಮಾಸಿಕದಲ್ಲಿ ವಿಮಾನ ಹಾರಾಟ ಸಹಜವಾಗಿಯೇ ಇದ್ದುದರಿಂದ ಕಂಪೆನಿಗೆ ರೂ.1553 ಕೋಟಿ ವರಮಾನ ಬಂದಿತ್ತು. ಆದರೆ, ಈ ವರ್ಷ ಜುಲೈ-ಸೆಪ್ಟೆಂಬರ್ ವರಮಾನ ಕೇವಲ ರೂ.200 ಕೋಟಿ ಇದೆ. ಅಂದರೆ, ಒಂದೇ ವರ್ಷದ ಅಂತರದಲ್ಲಿ ವರಮಾನ ಶೇ 87ರಷ್ಟು ಇಲ್ಲವಾಗಿದೆ.

ಯೋಜನೆ ಸಿದ್ಧತೆ: ಈ ಮಧ್ಯೆ ಕಿಂಗ್ಫಿಷರ್, ಮುಂಬೈ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ತ್ರೈಮಾಸಿಕ ಲೆಕ್ಕಪತ್ರದಲ್ಲಿ, `ವಿಮಾನಗಳ ಹಾರಾಟ ಮರು ಆರಂಭಿಸುವ ಸಲುವಾಗಿ ಸಮಗ್ರ ಪರಿಹಾರದ ಯೋಜನೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ. ಈ ಯೋಜನೆಯ ರೂಪುರೇಷೆಗಳನ್ನು ನಾಗರಿಕ ವಿಮಾನಯಾನ ಮಹಾ ನಿರ್ದೇಶಕರು ಮತ್ತು ಬ್ಯಾಂಕ್ಗಳ ಜತೆ ಹಂಚಿಕೊಳ್ಳಲಾಗುವುದು~ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.