ಮುಂಬೈ (ಪಿಟಿಐ): ಕಿಂಗ್ಫಿಷರ್ ವಿಮಾನಯಾನ ಕಂಪೆನಿಯ ಪೈಲಟ್ಗಳ ಒಂದು ಗುಂಪು ಮುಷ್ಕರ ಆರಂಭಿಸಿದ್ದರಿಂದ ಸೋಮವಾರ ನಾಲ್ಕು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ಮುಷ್ಕರದಿಂದಾಗಿ ಬೆಳಿಗ್ಗೆಯಿಂದಲೇ ವಿಮಾನ ಸಂಚಾರ ಸ್ಥಗಿತಗೊಳಿಸಲಾಯಿತು ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಮುಂಬೈ-ಚೆನ್ನೈ, ಮುಂಬೈ-ಮಂಗಳೂರು ಮತ್ತು ಮುಂಬೈ ಖಜುರಾಹೊ ಮಾರ್ಗಗಳ ನಡುವಿನ ವಿಮಾನ ಸಂಚಾರ ರದ್ದುಪಡಿಸಲಾಗಿದೆ.

ನಷ್ಟದಲ್ಲಿರುವ ಕಂಪೆನಿಯು ಕಳೆದ ಐದು ತಿಂಗಳಿಂದ ವೇತನ ಪಾವತಿಸಿಲ್ಲ ಎಂದು ಅಸಮಾಧಾನಗೊಂಡಿರುವ ಪೈಲಟ್ಗಳು ಮುಷ್ಕರ ಆರಂಭಿಸಿದ್ದು, ವಿಮಾನದ ಕ್ಯಾಪ್ಟನ್ ಸೇರಿದಂತೆ 200 ಪೈಲಟ್ಗಳು ಭಾನುವಾರದಿಂದ ಮುಷ್ಕರ ಆರಂಭಿಸಿದ್ದಾರೆ.

`ಕಂಪೆನಿ ಸಿಬ್ಬಂದಿ ವರ್ಗದವರಿಗೆ ಮತ್ತೆ ಸಂಬಳ ನೀಡಲು ವಿಫಲವಾಗಿದೆ. ಈ ಬಗ್ಗೆ ಕಂಪೆನಿ ಅಧ್ಯಕ್ಷ ವಿಜಯ ಮಲ್ಯ ಅವರೊಂದಿಗೆ ಸಿಬ್ಬಂದಿ ವರ್ಗದವರು ಮಾತುಕತೆ ನಡೆಸಿದರಾದರೂ ಅದು ಫಲಪ್ರದವಾಗಲಿಲ್ಲ. ವೇತನ ಪಾವತಿಸುವ ಬಗ್ಗೆ ಅವರು ಬದ್ಧತೆ ತೋರಲಿಲ್ಲ. ಆದ್ದರಿಂದ ಪೈಲಟ್ಗಳು ಮುಷ್ಕರ ನಡೆಸಲು ನಿರ್ಧರಿಸಿದರು~ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.