ಶುಕ್ರವಾರ, ಮಾರ್ಚ್ 5, 2021
23 °C

ಕಿತ್ತೂರು: ಭಾರಿ ಆಲಿಕಲ್ಲು ಮಳೆ, ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿತ್ತೂರು: ಭಾರಿ ಆಲಿಕಲ್ಲು ಮಳೆ, ಹಾನಿ

ಚನ್ನಮ್ಮನ ಕಿತ್ತೂರು: ಪಟ್ಟಣದಲ್ಲಿ ಮಂಗಳವಾರ ಸಂಜೆ ಸುಮಾರು ಒಂದು ಗಂಟೆ ಕಾಲ ಆಲಿಕಲ್ಲು ಸಮೇತ ಭಾರಿ ಮಳೆ ಸುರಿಯಿತು. ಬಿಸಿಲಿನ ಬೇಗೆಯಿಂದ ನಲುಗಿ ಹೋಗಿದ್ದ ಸಾರ್ವಜನಿಕರಿಗೆ ಇದರಿಂದ ತಂಪಿನ ಅನುಭವವಾಯಿತು. ಬಿದ್ದ ಮಳೆ ಮತ್ತು ಆಲಿಕಲ್ಲು  ಕಣ್ಣು ತುಂಬಿಸಿಕೊಂಡು ಖುಷಿ ಪಟ್ಟರು.ಭಾರಿ ಮಳೆಯಿಂದಾಗಿ ಚರಂಡಿಗಳು ತುಂಬಿ ಹರಿದವು. ಕೆಲವು ಮನೆಗಳಿಗೆ ನೀರು ನುಗ್ಗಿತು. ಸಿಮೆಂಟ್ ಕಟ್ಟಡದ ಮೇಲ್ಛಾವಣಿ ಮೇಲೆ ಮೊಳಕಾಲು ವರೆಗೆ ನೀರು ನಿಂತಿತು. ನೀರಿನ ರಭಸಕ್ಕೆ ಇಕ್ಕೆಲಗಳಲ್ಲಿದ್ದ ತೆಂಗಿನಕಾಯಿ ಗಾತ್ರದ ಕಲ್ಲುಗಳು ರಸ್ತೆಗೆ ಹರಿದು ಬಂದವು. ಇದರಿಂದ ದ್ವಿಚಕ್ರ ವಾಹನ, ಅಟೋ ರಿಕ್ಷಾ ಓಡಾಟಕ್ಕೆ ತೊಂದರೆಯಾಯಿತು.ಗಾಳಿಯೂ ಜೋರಾಗಿ ಬೀಸಿದ್ದರಿಂದ ಕೆಲವೆಡೆ ಮರಗಳು ಉರುಳಿ ಬಿದ್ದ ವರದಿಗಳು ಬಂದಿವೆ. ಸಮೀಪದ ಮಲ್ಲಾಪುರ ಗ್ರಾಮದ ಕಡೇಮನಿ ಅವರ ಮನೆ ಮೇಲೆ ಬಿದ್ದ ಗಿಡ, ಮೇಲ್ಛಾವಣಿ ಬೆಲಗು ಜಖಂಗೊಳಿಸಿದೆ. ವಿದ್ಯುತ್ ಕಂಬ ತಡೆದಿದ್ದರಿಂದ ಆಗಬಹುದಾದ ಹೆಚ್ಚಿನ ಅನಾಹುತ ತಪ್ಪಿದೆ.ಯುವಕರು ಮತ್ತು ಚಿಕ್ಕಮಕ್ಕಳು ರಸ್ತೆ ಮೇಲೆ ಮುತ್ತಿನಂತೆ ಬಿದ್ದ, ಕೆಲವೆಡೆ ರಾಶಿಯಾಗಿದ್ದ ಆಲಿಕಲ್ಲುಗಳನ್ನು ತೆಗೆದು ೊಂಡು ಪರಸ್ಪರ ಎರಚಾಡಿದರು.ರಸ್ತೆ ಸ್ವಚ್ಛ: ಒಂದು ಗಂಟೆ ಮಳೆ ಸುರಿದಿದ್ದರಿಂದ ರಸ್ತೆಗಳು ಥಳ, ಥಳ ಹೊಳೆದವು. ಕಾಲೇಜು ರಸ್ತೆಗೆ ನುಗ್ಗಿ ಬಂದ ಹಿಡಿ ಗಾತ್ರದ ಕಲ್ಲುಗಳನ್ನು ಗ್ರಾಮ ಪಂಚಾಯ್ತಿ ಶುಚಿಗಾರರು ಸ್ವಚ್ಛಗೊಳಿಸಿ ವಾಹನ ಸವಾರರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.  ರಾಮದುರ್ಗ ವದರಿ: ಸುಮಾರು 45 ನಿಮಿಷಗಳ ತನಕ ಮಂಗಳವಾರ ಸಂಜೆ ಸುರಿದ ಭಾರೀ ಗುಡುಗು ಸಹಿತ ಮಳೆ ಬೇಸಿಗೆಯ ಬೇಗೆಯಿಂದ ತತ್ತರಿಸಿದ ಧರೆಯು ತಂಪೇರಿತು.ಸಂಜೆ 6-30ರ ಸುಮಾರಿಗೆ ಆರಂಭಗೊಂಡ ಮಳೆ ಭಾರಿ ಗಾಳಿ ಮತ್ತು ಗುಡುಗು ಸಹಿತ ಮಳೆ ಸುರಿಯಿತು. ಕಾಯ್ದ ಭೂಮಿ ತಂಪು ಗಾಳಿ ಸೂಸಿತು. ಪ್ರಥಮ ಮಳೆಯ ಸಿಂಚನದಲ್ಲಿ ಹಲವರು ಕುಣಿದಾಡಿದರು.ಭಾರಿ ಬಿರುಗಾಳಿ ಮತ್ತು ಮಳೆಯಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಅಧಿಕಾರಿ ವಲಯ ತಿಳಿಸಿವೆ.ನಗರದಲ್ಲಿ ತಂಪೆರೆದ ಮಳೆಬೆಳಗಾವಿ: ನಗರದಲ್ಲಿ ಮಂಗಳವಾರ ಸಂಜೆ ಬಿರುಸಿನ ಗಾಳಿಯೊಂದಿಗೆ ಆಗಮಿಸಿದ ತುಂತುರು ಮಳೆ ವಾತಾವರಣವನ್ನು ತಂಪಾಗಿಸಿತು.ಮಂಗಳವಾರ ಸಂಜೆ ಐದು ಗಂಟೆಯ ಸಮೀಪ ದಟ್ಟವಾದ ಮೋಡ ಕವಿಯಿತು. ಬಳಿಕ ಏಕಾ ಏಕಿ ಬಿರುಸಿನಿಂದ ಗಾಳಿ ಬೀಸಲು ಆರಂಭಿಸಿತು. ಇದರಿಂದಾಗಿ ದೂಳಿನಿಂದ ಕೂಡಿದ ಗಾಳಿ ಸುತ್ತ ಮುತ್ತಲೆಲ್ಲ ಆವರಿಸಿತ್ತು. ಕೆಲ ಕಾಲ ಗುಡುಗು- ಮಿಂಚು ಅಬ್ಬರಿಸಿತು. ಬಳಿಕ ಸುಮಾರು ಐದು ಗಂಟೆಯ ಹೊತ್ತಿಗೆ ನಗರದಲ್ಲಿ ಕೆಲ ಕಾಲ ತುಂತುರು ಮಳೆ ಸುರಿಯಿತು. ಬಿಸಿಲಿನಿಂದ ಕಾವೇರಿದ್ದ ವಾತಾವರಣವನ್ನು ಮಳೆ ಸ್ಪಲ್ಪ ಮಟ್ಟಿಗೆ ತಂಪಾಗಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.