ಭಾನುವಾರ, ಏಪ್ರಿಲ್ 18, 2021
31 °C

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಆಯ್ಕೆಯಾದ ಮಹಿಳಾ ಅಭಿವೃದ್ಧಿ ಸಂಸ್ಥೆಗಳು, ವ್ಯಕ್ತಿ ಮತ್ತು ಸ್ತ್ರೀಶಕ್ತಿ ಗುಂಪುಗಳ ಹೆಸರನ್ನು ಘೋಷಿಸಲಾಗಿದೆ.ಅಲ್ಲದೆ 2010-11ನೇ ಸಾಲಿನಲ್ಲಿ ‘ಯಶೋಧರಮ್ಮ ದಾಸಪ್ಪ’ ಅವರ ಹೆಸರಿನಲ್ಲಿ ಹೊಸದಾಗಿ ಆರಂಭಿಲಾಗಿರುವ ಪ್ರಶಸ್ತಿಗೆ ಆಯ್ಕೆಯಾದ ಸ್ತ್ರೀಶಕ್ತಿ ಗುಂಪುಗಳ ಹೆಸರನ್ನೂ ಪ್ರಕಟಿಸಲಾಗಿದೆ.ವಿಧಾನ ಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ. ಪಾಟೀಲ್ ಪ್ರಶಸ್ತಿ ವಿಜೇತರ ಮಾಹಿತಿ ನೀಡಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಸಮಾರಂಭ ಇದೇ 8ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.2010-11ನೇ ಸಾಲಿನ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟ ಪ್ರಶಸ್ತಿ: ಈ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕು ಒಕ್ಕೂಟ ಮೊದಲ ಸ್ಥಾನ ಗಳಿಸಿದೆ. ಮೊದಲ ಸ್ಥಾನ ಗಳಿಸಿದ ಈ ತಂಡಕ್ಕೆ ರೂ 80 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಸಚಿವರು ತಿಳಿಸಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಸ್ತ್ರೀಶಕ್ತಿ ಒಕ್ಕೂಟಕ್ಕೆ ಎರಡನೆಯ ಸ್ಥಾನ (ರೂ 70 ಸಾವಿರ ನಗದು ಬಹುಮಾನ) ಮತ್ತು ಗದಗ ತಾಲ್ಲೂಕು ಒಕ್ಕೂಟಕ್ಕೆ ಮೂರನೆಯ ಸ್ಥಾನ (ರೂ 60 ಸಾವಿರ ನಗದು ಬಹುಮಾನ) ಲಭಿಸಿದೆ.2010-11ನೇ ಸಾಲಿನ ಅತ್ಯುತ್ತಮ ಸ್ತ್ರೀಶಕ್ತಿ ಗುಂಪು: ಮೊದಲ ಬಹುಮಾನ ತಿಪಟೂರು ತಾಲ್ಲೂಕಿನ ವಾಸುದೇವರಹಳ್ಳಿಯ ಬಸವೇಶ್ವರ ಸ್ತ್ರೀಶಕ್ತಿ ಗುಂಪು (ರೂ 50 ಸಾವಿರ ನಗದು ಮತ್ತು ರೋಲಿಂಗ್ ಶೀಲ್ಡ್), 2ನೇ ಬಹುಮಾನ ಹುಣಸೂರು ತಾಲ್ಲೂಕಿನ ನಂದಿನಿ ಸ್ತ್ರೀಶಕ್ತಿ ಗುಂಪು (ರೂ 30 ಸಾವಿರ ನಗದು) ಮತ್ತು 3ನೇ ಬಹುಮಾನ ಭಟ್ಕಳ ತಾಲ್ಲೂಕಿನ ವೀರ ಜಟ್ಟಕೇಶ್ವರ ಸ್ತ್ರೀಶಕ್ತಿ ಗುಂಪಿಗೆ (ರೂ 20 ಸಾವಿರ ನಗದು) ಲಭಿಸಿದೆ.ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ: ರಾಜರಾಜೇಶ್ವರಿ ಮಹಿಳಾ ಚಿಂತನ ವೇದಿಕೆ, ಲಕ್ಷ್ಮೇಶ್ವರ; ಮಲ್ಲೇಶ್ವರ ಮಹಿಳಾ ಸಂಘ, ಬೆಂಗಳೂರು; ಪರಿಹಾರ್- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ತರಬೇತಿ ಸಂಸ್ಥೆ, ಬೆಂಗಳೂರು; ಸೌಹಾರ್ದ ಕೌಟುಂಬಿಕ ಸಲಹಾ ಕೇಂದ್ರ, ಬೆಂಗಳೂರು; ನಿಸಾರ ಎಜುಕೇಷನ್ ಸೊಸೈಟಿ, ದೇರಳಕಟ್ಟೆ, ಮಂಗಳೂರು; ಕರುಣಾ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಗಂಗಾವತಿ. ಪ್ರಶಸ್ತಿ ಪುರಸ್ಕೃತ ಸಂಸ್ಥೆಗಳಿಗೆ ತಲಾ ರೂ 25 ಸಾವಿರ ನಗದು ಬಹುಮಾನ ನೀಡಲಾಗುವುದು ಎಂದು ಸಚಿವರು ಹೇಳಿದರು.ಮಹಿಳೆಯರ ಅಭಿವೃದ್ಧಿಗಾಗಿ ಶ್ರಮಿಸಿದ ವ್ಯಕ್ತಿಗಳು: ಕೆ.ಎ. ಅನಿತಾ ವೆಂಕಟೇಶ್, ಮೈಸೂರು; ವಾಣಿಶ್ರೀ ವಿಶ್ವನಾಥ್, ಸಿಂಗನಾಯಕನ ಹಳ್ಳಿ, ಬೆಂಗಳೂರು ಉತ್ತರ; ಅಜಲಫರೀದಾ ಜಿ. ರೋಣದ, ಗುಲಗಂಜಿಕೊಪ್ಪ, ಧಾರವಾಡ; ಬುದ್ದವ್ವ ಚಂದ್ರಶೇಖರ ಗೊಳಸಂಗಿ, ಜಮಖಂಡಿ; ರಮಾ ನಾಗರಾಜ್, ಚಿತ್ರದುರ್ಗ; ಹೇಮಲತಾ ಜೆ., ಮೇಲಿನ ಹನಸವಾಡಿ, ಶಿವಮೊಗ್ಗ; ಮಂಜುಳಾ ರಮೇಶ್, ಮಂಚೇಗೌಡನ ಕೊಪ್ಪಲು, ಮೈಸೂರು. ಪ್ರಶಸ್ತಿ ಪುರಸ್ಕೃತ ವ್ಯಕ್ತಿಗಳಿಗೆ ತಲಾ ರೂ 10 ಸಾವಿರ.ಕಲೆ: ಶ್ರೀಧನ್ಯಾ ರಾಮನ್, ಮಡಿಕೇರಿ; ಸೌಭಾಗ್ಯ ಅಯ್ಯಂಗಾರ್, ಅಶೋಕ ನಗರ, ಬೆಂಗಳೂರು; ವಿದ್ಯಾ ರವಿಶಂಕರ್, ಗಿರಿನಗರ, ಬೆಂಗಳೂರು; ಎ.ಎಸ್. ಮಹೇಶ್ವರಿ, ಆರ್.ಟಿ. ನಗರ, ಬೆಂಗಳೂರು; ಶಾಂತಾ ಎಸ್. ಶೆಟ್ಟಿ, ಶಿವಮೊಗ್ಗ. ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ 10 ಸಾವಿರ.ಸಾಹಿತ್ಯ: ಇಂದುಮತಿ ಶಂಕರ ಲಮಾಣಿ, ವಿಜಾಪುರ; ಬೈತಡ್ಕ ಜಾನಕಿ ಬೆಳ್ಯಪ್ಪ, ಮಡಿಕೇರಿ. ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ 10 ಸಾವಿರ. ಶಿಕ್ಷಣ: ತೆಕ್ಕಡೆ ಗುಲಾಬಿ ಜನಾರ್ದನ, ಮಡಿಕೇರಿ. ಪ್ರಶಸ್ತಿ ಮೊತ್ತ ರೂ 10 ಸಾವಿರ. ಕ್ರೀಡೆ: ಎಂ.ಎಸ್. ದಿವ್ಯ, ಹೊಸಕೆರೆಹಳ್ಳಿ, ಬೆಂಗಳೂರು; ಪ್ರಿಯಾಂಕ ಟಿ.ಸಿ., ತುಮಕೂರು. ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ 10 ಸಾವಿರ.ಯಶೋಧರಮ್ಮ ದಾಸಪ್ಪ ಪ್ರಶಸ್ತಿ: ಗುರುಕೃಪ ಸ್ತ್ರೀಶಕ್ತಿ ಗುಂಪು, ಗುಂತಪ್ಪನಹಳ್ಳಿ, ಚಿಕ್ಕಬಳ್ಳಾಪುರ; ಯರಿಯೂರು ಗ್ರಾಮದ ಭ್ರಮರಾಂಬ ಸ್ತ್ರೀಶಕ್ತಿ ಗುಂಪು, ಯಳಂದೂರು, ಚಾಮರಾಜನಗರ; ಹೆಮ್ಮಿಗೆ ಗ್ರಾಮದ ಉಮಾಮಹೇಶ್ವರಿ ಸ್ತ್ರೀಶಕ್ತಿ ಗುಂಪು, ಮುಂಡರಗಿ, ಗದಗ; ಶೆಟ್ಟಿಕೇರ ಗ್ರಾಮದ ಬಂಗಾರಮ್ಮ ಸ್ತ್ರೀಶಕ್ತಿ ಗುಂಪು, ಯಾದಗಿರಿ. ಪ್ರಶಸ್ತಿ ಪುರಸ್ಕೃತ ಗುಂಪುಗಳಿಗೆ ತಲಾ 25 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.