ರೋಣ: ರಾಜ್ಯ ಸರ್ಕಾರ ಗುಟ್ಕಾ ನಿಷೇಧಿಸಿರುವ ಹಿನ್ನೆಲೆಯಲ್ಲಿ ರೋಣ ಪಟ್ಟಣ ಸೇರಿದಂತೆ ಗಜೇಂದ್ರಗಡ, ಹೊಳೆ ಆಲೂರ, ನರೆಗಲ್ ಪಟ್ಟಣ ಸೇರಿದಂತೆ ಇತರ ಕಡೆಗಳಲ್ಲಿ ತಹ ಶೀಲ್ದಾರ್ ಎಂ.ಬಿ.ಪಾಟೀಲ ನೇತೃತ್ವದ ತಂಡ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿ ಗುಟ್ಕಾ ವಶಪಡಿ ಸಿಕೊಂಡು ಮಾಲೀಕರಿಗೆ ಎಚ್ಚರಿಕೆ ನೀಡಿದ ಘಟನೆ ಜರುಗಿತು.

ಶನಿವಾರ ಬೆಳಿಗ್ಗೆ ದಾಳಿ ಆರಂಭ ಗೊಂಡು ಸಂಜೆಯವರೆಗೆ ನಡೆಯಿತು.

ಇದರಿಂದ ವಿಚಲಿತರಾದ ಕಿರಾಣಿ ಅಂಗಡಿ ಮಾಲೀಕರು ಸ್ವತಃ ತಾವೇ ಮುಂದಾಗಿ ಗುಟ್ಕಾ ಚೀಲಗಳನ್ನು ನೀಡುತ್ತಿರುವುದು ಸಾಮಾನ್ಯವಾಗಿ ಕಂಡು ಬಂತು.

ಇನ್ನು ಕೆಲವು ಕಿರಾಣಿ ಅಂಗಡಿಗಳಲ್ಲಿ ಸ್ವತಹ ತಹಶೀಲ್ದಾರ್ ಮತ್ತು ಆರೋಗ್ಯ ಇಲಾಖೆಯ ಹಿರಿಯ ವೈಧ್ಯಾಧಿಕಾರಿ ಬಿ.ಎಸ್. ಭಜಂತ್ರಿ ಅವರು ಸೇರಿಕೊಂಡು ಅಂಗಡಿ ಗಳ ಮೇಲೆ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹ ಮಾಡಿದ್ದ ಗುಟ್ಕಾ ಚೀಲ ಗಳನ್ನು ವಶಕ್ಕೆ ಪಡೆದುಕೊಂಡು ಘಟನೆ ಕೂಡಾ ಜರುಗಿತು.

ಮುಚ್ಚಿಟ್ಟ ವ್ಯಾಪರಸ್ಥರು: ಅಂಗಡಿ ಗಳ ಮೇಲೆ ತಹಶೀಲ್ದಾರರು ದಾಳಿ ನಡೆಸಿದ್ದಾರೆ ಎಂಬ ಸುಳಿವನ್ನು ಅರಿತ ವ್ಯಾಪರಸ್ಥರು ಗುಟ್ಕಾ ಚೀಲಗಳನ್ನು ಮುಚ್ಚಿ ಇಡುವಂತಹ ಘಟನೆಯ ಜೊತೆಗೆ ಕೆಲ ಅಂಗಡಿಯ ಮಾಲೀಕರು ಬಾಗಿಲು ಹಾಕಿಕೊಂಡು ಮನೆ ಕಡೆ ತೆರಳುವಂತಹ ದೃಶ್ಯಗಳು ರೋಣ ಪಟ್ಟಣದಲ್ಲಿ ಕಂಡು ಬಂತು. ಇನ್ನು ಚಿಕ್ಕ ಚಿಕ್ಕ ವ್ಯಾಪರಸ್ಥರು ನಾವು ಈಗಾಗಲೆ ಒಂದು ವಾರ ಆಯಿತು ಗುಟ್ಕಾ ಮಾರುತ್ತಿಲ್ಲ ಎಂಬ ಸಂದೇಶವನ್ನು ಕೆಲ ಅಧಿಕಾರಿಗಳಿಗೆ ನೀಡುತ್ತಿದ್ದದು ಸಾಮಾನ್ಯವಾಗಿ ಕಂಡು ಬಂತು.

ರೋಣ ಮತ್ತು ಗಜೇಂದ್ರಗಡ ಪಟ್ಟಣಗಳಲ್ಲಿ ವಶಪಡಿಸಿಕೊಂಡ ಗುಟ್ಕಾ ಚೀಲಗಳನ್ನು ರೋಣ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಹಿಂಬದಿ ಯಲ್ಲಿ ತಹಸೀಲ್ದಾರ ಮತ್ತು ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಸಮ್ಮುಖದಲ್ಲಿ ಸುಡಲಾಯಿತು.

ದಾಳಿಯಲ್ಲಿ, ಅರ್.ಎಸ್.ಗಡಾದ, ಕಂದಾಯ ನಿರೀಕ್ಷಕ ಕೊಪ್ಪದ, ಭೂಮಕರ ಸೇರಿದಂತೆ ಕಂದಾಯ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ತಾಲ್ಲೂಕಿನಾದ್ಯಂತ ಎಲ್ಲಿಯಾದರು ಗುಟ್ಕಾ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಅಂತಹ ಅಂಗಡಿಗಳನ್ನು ಸೀಜ್ ಮಾಡ ಲಾಗುವುದು ಮತ್ತು ಮಾಲೀಕರಿಗೆ ಭಾರಿ ಪ್ರಮಾಣದ ದಂಡ ವಿಧಿಸಲಾಗು ವುದು ಎಂದು ತಹಶೀಲ್ದಾರ್ ಎಂ.ಬಿ. ಪಾಟೀಲ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಬಿ.ಎಸ್.ಭಜಂತ್ರಿ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.