ಭಾನುವಾರ, ಜನವರಿ 19, 2020
20 °C

ಕಿರುಚಿತ್ರ, ಗಾಯನ ಸಿ.ಡಿಗಳಿಗೆ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ನಗರದ ಸರ್ವಜ್ಞ ಕ್ರಿಯೇಷನ್ಸ್ ಮತ್ತು ಕಿರು ಚಲನಚಿತ್ರ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಇದೇ ಮೊದಲ ಸಲ ವಿಜಾಪುರದಲ್ಲಿ ಕಿರುಚಿತ್ರೋತ್ಸವ ಮತ್ತು ಸಂಗೀತೋತ್ಸವವನ್ನು ಏರ್ಪಡಿಸಲಾಗಿದೆ.ರಾಜ್ಯ ಮಟ್ಟದ ಈ ಸಮ್ಮೇಳನದಲ್ಲಿ ಚಿತ್ರ ತಾರೆಯರು, ನಿರ್ದೇಶಕರು ಮತ್ತು ಸಂಗೀತ ನಿರ್ದೇಶಕರು ಭಾಗವಹಿಸಲಿದ್ದಾರೆ. ಉತ್ತಮ ಸಂದೇಶ ನೀಡುವ ಕಿರುಚಿತ್ರ, ಸಾಕ್ಷ್ಯಚಿತ್ರ (ಡಿವಿಡಿ) ಮತ್ತು ನಾಡಿನ ಯುವ ಗಾಯಕ-ಗಾಯಕಿಯರು ತಯಾರಿಸಿದ ಆಡಿಯೊ ಸಿ.ಡಿಗಳಿಗೆ ಪ್ರಶಸ್ತಿ ನೀಡಲಾಗುವುದು. ಆಸಕ್ತರು ಫೆ. 10ರೊಳಗೆ ತಮ್ಮ ಡಿವಿಡಿ ಮತ್ತು ಸಿ.ಡಿಗಳನ್ನು ಕಳುಹಿಸಿಕೊಡಬಹುದು.ಹೆಚ್ಚಿನ ವಿವರಕ್ಕೆ ದೂರವಾಣಿ ಸಂಖ್ಯೆ: 08352-223285, 9686025659, 8277039456 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

 

ಪ್ರತಿಕ್ರಿಯಿಸಿ (+)