ಶಿರಸಿ: ‘ವೃದ್ಧ ಅಪ್ಪ-ಅಮ್ಮಂದಿರು ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳು ದೊಡ್ಡವರಾದ ಮೇಲೆ ಪಾಲಕರನ್ನು ಕಡೆಗಣಿಸುತ್ತಿರುವ ಘಟನೆಗಳು ಸಮಾಜದಲ್ಲಿನ ಜೀವಂತ ಕಥೆಯಾಗಿವೆ. ನೈಜ ಕಥಾವಸ್ತುವಿಗೆ ಸಿನಿಮಾ ರೂಪ ಕೊಡುವ ಸಿದ್ಧತೆ ನಡೆಸಿದ್ದೇವೆ’ ಎಂದವರು ಚಲನಚಿತ್ರ ನಟ, ನಿರ್ದೇಶಕ ರಮೇಶ ಅರವಿಂದ.

ಸೋಮವಾರ ಬೆಂಗಳೂರಿನ ನಮ್ಮೂರ ಹೋಟೆಲ್ನ ಹೋಟೆಲ್ ಉದ್ಯಮಿ ಕೃಷ್ಣ ಹೆಗಡೆ ಸಾಮ್ರಾಟ್ ಆವರಣದಲ್ಲಿ ಪ್ರಾರಂಭಿಸಿದ ಐಸ್ಕ್ರೀಮ್ ಪಾರ್ಲರ್ ಉದ್ಘಾಟನೆಗೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ವಿನಾಯಕ ಸಭಾಭವನದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು.

‘ವಿಭಕ್ತ ಕುಟುಂಬದ ಮಕ್ಕಳು ಅಜ್ಜ-ಅಜ್ಜಿಯರ ಜೊತೆಗಿನ ಅನುಭವ ಮಿಸ್ ಮಾಡಿಕೊಳ್ಳುತ್ತಿರುವ ವಿಷಯ ತುಂಬ ಕಾಡುತ್ತಿದ್ದನ್ನೂ ಇದಕ್ಕೂ ಸಿನಿಮಾ ರೂಪ ಕೊಡುವ ಆಲೋಚನೆ ಇದೆ. ‘ಇಂಗಿಷ್ ಎಷ್ಟು ಮುಖ್ಯ ಅಥವಾ ನಮಗೆ ಕನ್ನಡ ಸಾಕಾ’ ಇದು ಸಹ ಇನ್ನೊಂದು ಕಥಾವಸ್ತು. ಶತಕ ಕಾಣುವ ಮೊದಲಿನ ಐದು ಚಲನಚಿತ್ರಗಳನ್ನು ವಿಶೇಷ ಗಮನವಿಟ್ಟು ನೈಜ ಕಥಾವಸ್ತು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದರು.

‘ಕಿರುತೆರೆಯಿಂದ ಸಿನಿಮಾ ರಂಗದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದ್ದು ನಿಜ, ಹೊಸ ತಂತ್ರಜ್ಞಾನ ಬಂದಾಗ ಇಂತಹ ಬದಲಾವಣೆಗಳು ಸಹಜವಾಗುತ್ತವೆ. ದೊಡ್ಡ ಪರದೆಯನ್ನು ಪಾತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ಕಿರುತೆರೆ ನನ್ನ ವೈಯಕ್ತಿಕ ಆಸಕ್ತಿ, ಭಾವಾಭಿವ್ಯಕ್ತಿಯ ಮಾಧ್ಯಮವಾಗಿದೆ’ ಎಂದರು.

‘ಉತ್ತರ ಕನ್ನಡ ಜಿಲ್ಲೆ ವಿಶೇಷವಾಗಿ ಶಿರಸಿ ನನ್ನ ನೆಚ್ಚಿನ ಸ್ಥಳವಾಗಿದೆ. ಇದೇ ನೆಲದಲ್ಲಿ ಚಿತ್ರೀಕರಣಗೊಂಡ ‘ನಮ್ಮೂರ ಮಂದಾರ ಹೂವೆ’ ಚಲನಚಿತ್ರ ನನ್ನ ವೃತ್ತಿ ಬದುಕಿಗೆ ಅಂತಸ್ತು ತಂದುಕೊಟ್ಟಿದೆ. ಇಲ್ಲಿನ ಸಂಸ್ಕೃತಿಯಲ್ಲಿ ಪರಿಶುದ್ಧತೆ ಇದೆ, ಕಲಬೆರಕೆ ಇಲ್ಲ. ಮನುಷ್ಯ ತನ್ನ ಬೇರು ನೆಲದಲ್ಲಿ ಅಲ್ಲಿನ ಮಣ್ಣಿನ ರಸ ಹೀರಿ ಸೇವೆ ಮಾಡಬೇಕು. ರೆಕ್ಕೆ ಪುಕ್ಕ ಕಟ್ಟಿಕೊಂಡು ವಿದೇಶಕ್ಕೆ ಹಾರಿದರೆ ಅದು ದೊಡ್ಡ ಸಾಧನೆ ಆಗಲಾರದು’ ಎಂದು ಅವರು ಮಾರ್ಮಿಕವಾಗಿ ಹೇಳಿದರು. ತೋಟಗಾರ್ಸ್ ಸೇಲ್ ಸೊಸೈಟಿ ಅಧ್ಯಕ್ಷ ಶಾಂತಾರಾಮ ಹೆಗಡೆ, ಸಾಮಾಜಿಕ ಕಾರ್ಯಕರ್ತ ಎನ್.ಎಸ್.ಹೆಗಡೆ ಕುಂದರ್ಗಿ, ಪೋಲಿಸ್ ವೃತ್ತ ನಿರೀಕ್ಷಕ ಸೈಫುಲ್ಲಾ, ಹೋಟೆಲ್ ಉದ್ಯಮಿ ಕೃಷ್ಣ ಹೆಗಡೆ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.