ಸೋಮವಾರ, ಜನವರಿ 20, 2020
27 °C

ಕುಂಭಾಭಿಷೇಕ ಮಹೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಜಾಲಾ ಹೋಬಳಿ ಮರಳು­ಕುಂಟೆ ಗ್ರಾಮದಲ್ಲಿ ನಡೆದ ಪದ್ಮಾವತಿ ಅಮ್ಮನವರ ಸಮೇತ ಲಕ್ಷ್ಮೀ­ವೆಂಕಟರಮಣಸ್ವಾಮಿ ದೇವಾಲಯದ ಜೀರ್ಣೋ­ದ್ಧಾರ ಮತ್ತು ಕುಂಭಾಭಿ­ಷೇಕ ಮಹೋ­ತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣಬೈರೇಗೌಡ, ಹೆಚ್ಚಿನ ಸಂಖ್ಯೆಯಲ್ಲಿ ರೈತ ಕುಟುಂಬಗಳೇ ವಾಸವಾಗಿರುವ ಈ ಗ್ರಾಮದಲ್ಲಿ ಎಲ್ಲರೂ ಸೇರಿ ಸುಮಾರು 5 ವರ್ಷ­ಗಳ ಸತತ ಪ್ರಯತ್ನದಿಂದ ಪುರಾತನ ಶೈಲಿ­ಯಲ್ಲಿ ಸುಂದರವಾದ ದೇವಾಲಯ­­ವನ್ನು ನಿರ್ಮಿಸಿರುವುದು ವಿಶೇಷವಾ­ಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಮಾಜಿ ಲೋಕಸಭಾ ಸದಸ್ಯ ಸಿ.ನಾರಾಯಣ­ಸ್ವಾಮಿ, ಮಾಜಿ ಸಚಿವ ಎಚ್‌.ಎಂ. ರೇವಣ್ಣ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)