ಮಾಲೂರು: ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಒತ್ತಾಯ ಹಾಗೂ ಮೂಲಸೌಲಭ್ಯಗಳಿಗೆ ಆಗ್ರಹಿಸಿ ಪಟ್ಟ ಣದ 23ನೇ ವಾರ್ಡ್ನ ಜನರು ಗುರು ವಾರ ಪುರಸಭಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಪಟ್ಟಣದ 23ನೇ ವಾರ್ಡಿನ ಇಂದಿರಾ ನಗರ ಬಡಾವಣೆಗೆ ಐದು ತಿಂಗಳಿನಿಂದ ಸಮರ್ಪಕ ಕುಡಿಯುವ ನೀರಿಲ್ಲ. ಈ ಭಾಗದ ಜನತೆಗೆ ಭಾರಿ ತೊಂದರೆಯಾಗಿದೆ ಎಂದು ಸಾರ್ವ ಜನಿಕರು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ತಮಟೆ ವಾದ್ಯ ದೊಂದಿಗೆ ಪಟ್ಟಣದ ಪ್ರಮುಖ ಬೀದಿ ಗಳಲ್ಲಿ ಮೆರವಣಿಗೆ ನಡೆಸಿ ನಂತರ ಪುರ ಸಭಾ ಕಚೇರಿಗೆ ತೆರಳಿ ಧರಣಿ ನಡೆಸಿದರು.

23ನೇ ವಾರ್ಡ್ ಸದಸ್ಯ ಬಿ.ಎನ್. ರಾಜಾರಾಂ ಮಾತಮಾಡಿ, ಸ್ಥಳೀಯ ನಾಗರಿಕರು ಕುಡಿಯುವ ನೀರಿಲ್ಲದೆ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾ ಣವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಾಗೂ ಪುರಸಭಾ ಅಧ್ಯಕ್ಷರಿಗೆ ತಿಳಿಸಿ ದರೂ ಸಹ ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ ಎಂದು ದೂರಿದರು.

ಮೂಲಸೌಕರ್ಯಗಳಿಂದ ವಂಚಿತ ವಾಗಿರುವ ವಾರ್ಡಿಗೆ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಯಾವುದೇ ಸೌಲಭ್ಯ ಕಲ್ಪಿಸದರೆ ತಾರ ತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ವಾರ್ಡಿನಲ್ಲಿ ನೆಲೆಸಿರುವ ಬುಹುತೇಕ ಮಂದಿ ಕೂಲಿ ಕಾರ್ಮಿಕ ರಾಗಿದ್ದು, ಕೂಲಿಗಾಗಿ ಬೇರೆ ಕಡೆಗೆ ಹೋಗುವುದರಿಂದ ಪುರಸಭೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಸಮರ್ಪಕ ವಿತರಣೆಯಾಗುತ್ತಿಲ್ಲ. ಕುಡಿಯುವ ನೀರು ಪೂರೈಸಲು ಕೊಳವೆ ಬಾವಿ ಕೊರೆ ಸಿದ್ದರು ಕೂಡಾ ಸಮಸ್ಯೆ ನೀಗಿಲ್ಲ. ಇದ ರಿಂದ ಸಮಸ್ಯೆಯು ದ್ವಿಗುಣಗೊಂಡಿದೆ. 6 ತಿಂಗಳ ಹಿಂದೆ ಪಂಪ್ ಹಾಳಾಗಿದೆ. ಅದನ್ನು ದುರಸ್ತಿ ಮಾಡಲು ಅಧಿ ಕಾರಿ ಗಳಿಗೆ ಸಮಯವಿಲ್ಲ ಎಂದು ದೂರಿದರು.

ಪುರಸಭಾ ಅಧ್ಯಕ್ಷರಾದ ಗುಲಾಬ್ ಜಾನ್, ಉಪಾಧ್ಯಕ್ಷ ಎ.ರಾಜಪ್ಪ, ಯೋಜನಾ ಪ್ರಾಧಿಕಾರದ ಆಂಜಿನಪ್ಪ, ಸಿ.ಒ. ರುದ್ರಮುನಿ ಮಾತನಾಡಿ, ಸಮಸ್ಯೆಯನ್ನು 3 ದಿನಗಳಲ್ಲಿ ಬಗೆ ಹರಿಸುವುದಾಗಿ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆ ಯಲಾಯಿತು. ವಾರ್ಡಿನ ವೆಂಕಟೇಶ್, ಕೃಷ್ಣಪ್ಪ, ರಘು, ಗೋಪಾಲಪ್ಪ, ನಾರಾಯಣಸ್ವಾಮಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.