ಸರಗೂರು: ಪಟ್ಟಣದ ಪೌರ ಕಾರ್ಮಿಕರ ಕಾಲೋನಿಯ ಮೂರನೇ ವಾರ್ಡಿನಲ್ಲಿ ಕುಡಿಯುವ ನೀರು ಪೂರೈಕೆ ಮೇನ್ವಾಲ್ ಕಂಟ್ರೋಲ್ಗೆ ಚರಂಡಿಯ ಮೂಲಕ ಕೊಳಚೆ ನೀರು ಹರಿದು ಬರುತ್ತಿದೆ. ಪಟ್ಟಣದಲ್ಲಿ 11ವಾರ್ಡ್ಗಳಿದ್ದು, 4ವಾರ್ಡ್ ಹೊರತು ಪಡಿಸಿ ಉಳಿದ 7 ವಾರ್ಡ್ಗಳಿಗೆ ಕಪಿಲಾ ನದಿಯ ನೀರಿನ ಜೊತೆಗೆ ಕಲುಷಿತ ನೀರು ನೀರು ಮಿಶ್ರಣವಾಗಿ ನೀರು ಸರಬರಾಜು ಆಗುತ್ತಿದೆ.

ಸಂತೆ ಮಾಳದ ಟಿಪ್ಪು ಬಡಾವಣೆಯ ಹಳೇ ಟ್ಯಾಂಕ್ನಿಂದ 3ರಿಂದ 9ನೇ ವಾರ್ಡ್ಗಳಿಗೆ ಪೌರ ಕಾರ್ಮಿಕರ ಕಾಲೋನಿಯ ಬಣ್ಣಾರಿ ಅಮ್ಮನವರ ದೇವಸ್ಥಾನದ ಮುಂದೆ ಇರುವ ಮೈನ್ ವಾಲ್ ಕಂಟ್ರೋಲ್ಗೆ ಮಲ, ಮೂತ್ರ, ಮಿಶ್ರತವಾದ ಕೊಳಚೆ ನೀರು ಹರಿದು ಬರುತ್ತಿದೆ. ದೇವಸ್ಥಾನದ ಮುಂದೆ ಮೈನ್ ವಾಲ್ ಕಂಟ್ರೋಲ್ ಇದ್ದು, ಚರಂಡಿಯ ಮಧ್ಯದಲ್ಲಿ ಒಂದು ಅಡಿ ಕೆಳಗೆ ನೀರು ಸರಬರಾಜು ಆಗುವ ಮೈನ್ವಾಲ್ ಸೇರಿ ಕೊಂಡಿರುತ್ತದೆ. ಚರಂಡಿಯ ಮಧ್ಯೆ ಮೇನ್ವಾಲ್ ಕಂಟ್ರೋಲ್ಗೆ ಆರ್ಎಂಸಿ, ಪೌರಕಾರ್ಮಿಕರ ಬೀದಿಯ ಕೋಳಚೆ ನೀರು ವಾಲ್ಗೆ ಬಂದು ಬೀಳುತ್ತದೆ.ಮೇಲೆ ಎಲ್ಲಾ ಕೊಳಚೆ ನೀರು ಅಲ್ಲಿ ಶೇಖರಣೆ ಆಗುತ್ತದೆ. ನಂತರ ನೀರು ಬಿಡಲು

ವಾಲ್ ತೆಗೆದಾಗ ಕೊಳಚೆ ನೀರೆಲ್ಲ ವಾಲ್ ಮೂಲಕ ವಿಲೀನಗೊಂಡು ನೀರು ಹರಿದು ಹೋಗುತ್ತಿದೆ. ಪಟ್ಟಣದ 7 ವಾರ್ಡ್ಗಳಿಗೂ ಇದೇ ನೀರು ಸರಬರಾಜು ಆಗುತ್ತಿದೆ. ಜನರು ಇದೇ ನೀರನ್ನು ಕುಡಿಯುತ್ತಿದ್ದಾರೆ. ಈ ನೀರು ಕುಡಿದು ಕೆಲವರು ಅನಾರೋಗ್ಯಪೀಡಿತರಾಗಿದ್ದಾರೆ.

ಮೈನ್ವಾಲ್ ಪಕ್ಕದಲ್ಲಿ ಕೆಲವು ಮಕ್ಕಳು ಮಲ, ಮೂತ್ರ ವಿಸರ್ಜನೆ ಮಾಡುತ್ತಾರೆ. ಇನ್ನು ಮಳೆಗಾಲ ಆರಂಭವಾದರೆ ವಾಲ್ಗೆ ನೀರು ತುಂಬಿಕೊಳ್ಳುತ್ತದೆ. ಪಟ್ಟಣ ಪಂಚಾಯಿತಿವತಿಯಿಂದ ಸಾರ್ವಜನಿಕರಿಗೆ ಕುಡಿಯಲು ಶುದ್ಧ ನೀರನ್ನು ನೀಡಬೇಕು ಎಂಬುದು ಜನರ ಒತ್ತಾಯ. ಕೂಡಲೆ ಚರಂಡಿಯ ಮಧ್ಯೆ ಇರುವ ಮೈನ್ವಾಲ್ ಕಂಟ್ರೋಲ್ನ್ನು ಬೇರೆ ಕಡೆ ಸ್ಥಳಾಂತರಿಸಬೇಕು. ಮುಖ್ಯವಾಗಿ ಪಟ್ಟಣದಲ್ಲಿ ಯಾವುದೇ ವಾರ್ಡ್ಗೂ ನೀರು ಸರಬರಾಜು ಆಗುವ ವಾಲ್ಗಳಿಗೆ ಚೇಂಬರ್ ಇರುವುದಿಲ್ಲ.

ಪಟ್ಟಣದ ಸುಮಾರು 40ರಿಂದ 50 ವಾಲ್ಗಳಿಗೆ ಯಾವುದಕ್ಕೂ ಚೇಂಬರ್ ಇರುವುದಿಲ್ಲ. ಇದರಿಂದ ಕೊಳಚೆ ನೀರು ಹರಿದು ಬರುತ್ತದೆ. ವಾಲ್ಗಳಿರುವ ಜಾಗದಲ್ಲಿ ಚೇಂಬರ್ ನಿರ್ಮಿಸಿ ಮೇಲೆ ಸ್ಲಾಬ್ ಹಾಕಿದರೆ ತೊಂದರೆ ಆಗುವುದಿಲ್ಲ. ರಾತ್ರಿ ಸಮಯದಲ್ಲಿ ಕೆಲವರು ವಾಲ್ ಗುಂಡಿಗೆ ವೃದ್ಧರು, ಮಕ್ಕಳು, ಮಹಿಳೆಯರು ಗುಂಡಿಗೆ ಬಿದ್ದಿದ್ದಾರೆ.

4ನೇ ವಾರ್ಡಿನಲ್ಲಿ ಸುಮಾರು ಒಂದು ತಿಂಗಳಿಂದ ಕಸವನ್ನು ತೆಗೆದಿಲ್ಲ. ಚರಂಡಿಯಲ್ಲಿ ಮತ್ತು ಬೀದಿಗಳಲ್ಲಿ ತ್ಯಾಜ್ಯದ ರಾಶಿ ತುಂಬಿದ್ದು, 10ಮಂದಿ ಹಂಗಾಮಿ ಪೌರಕಾರ್ಮಿಕರನ್ನು ತೆಗೆದುಕೊಳ್ಳುವುದಾಗಿ ಈ ಹಿಂದೆ ನಡೆದ ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀರ್ಮಾಸಿದ್ದರೂ ಇನ್ನು ತೆಗೆದುಕೊಂಡಿಲ್ಲ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಂಜುಂಡಸ್ವಾಮಿ, ಹಂಗಾಮಿ ಎಂಜಿನಿಯರ್ ಪ್ರಕಾಶ್, ಪಟ್ಟಣದ ಸ್ವಚ್ಛತೆ ವಿಲೇವಾರಿ ಅಧಿಕಾರಿ ಲೋಕೇಶ್ಗೆ ಈ ವಿಚಾರವನ್ನು ತಿಳಿಸಿದರೂ ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂಬುದು ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಲೀಲ್, ಸದಸ್ಯ ರಮೇಶ್, ಮಾಜಿ ಸದಸ್ಯ ಶ್ರೀನಿವಾಸ್, ಎಸ್ಡಿಎಂಸಿ ಅಧ್ಯಕ್ಷ ಎಸ್.ಎಲ್.ರಾಜಣ್ಣ ಅವರ ಒತ್ತಾಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.