ಶುಕ್ರವಾರ, ಜೂಲೈ 3, 2020
29 °C

ಕುಡಿಯುವ ನೀರಿನ ಮಿತ ಬಳಕೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಡಿಯುವ ನೀರಿನ ಮಿತ ಬಳಕೆಗೆ ಮನವಿ

ಕೆಂಗೇರಿ: ನಾಗರಿಕರು ಕುಡಿಯುವ ನೀರಿನ ಅಭಾವ ಅರಿತು ಮಿತವಾಗಿ ಬಳಸಲು ಮುಂದಾಗಬೇಕು ಎಂದು ಬಿಬಿಎಂಪಿ ಸದಸ್ಯ ಎಂ.ಬಿ. ಗೋವಿಂದೇಗೌಡ ಮನವಿ ಮಾಡಿದರು.

 ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಹೆಗ್ಗನಹಳ್ಳಿ ವಾರ್ಡ್‌ನ ಮಾರುತಿ ನಗರದಲ್ಲಿ ಕೊಳವೆಬಾವಿ ಮೂಲಕ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

`ಈ ಹಿಂದೆ ವಾರ್ಡ್ ವ್ಯಾಪ್ತಿಯ ಕೆಲವು ಪ್ರದೇಶಗಳು ಗ್ರಾಮೀಣ ಪ್ರದೇಶಗಳಿಗೆ ಸೇರಿದ್ದರಿಂದ ಬಿಬಿಎಂಪಿ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಾಗದೆ ಜನತೆ ತೊಂದರೆ ಅನುಭವಿಸುವಂತಾಯಿತು. ಇದೀಗ ವಾರ್ಡ್‌ನಲ್ಲಿ ನೀರಿನ ಬವಣೆ ನೀಗಿಸಲು ಬಿಬಿಎಂಪಿ ವತಿಯಿಂದ 13 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಅವುಗಳಲ್ಲಿ ಹನ್ನೊಂದರಲ್ಲಿ ನೀರು ದೊರೆತಿದೆ~ ಎಂದು ಅವರು ಹೇಳಿದರು.

`ನಿರುದ್ಯೋಗಿಗಳಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ತರಬೇತಿ ನೀಡಲಾಗುವುದು. ಅರ್ಹ ನಿರುದ್ಯೋಗಿಗಳು ತರಬೇತಿ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಬೇಕು~ ಎಂದರು.

ಮುಖಂಡರಾದ ಎಂ.ಬಿ.ಗಂಗಾಧರ್, ಶಿವಣ್ಣ, ನಿಂಗಪ್ಪ, ಭೀಮಣ್ಣ, ಆಂಜನಪ್ಪ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.