ಬುಧವಾರ, ಜೂನ್ 23, 2021
28 °C

ಕುಡಿಯುವ ನೀರು ಆಗ್ರಹಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಟ(ಬ್ರಹ್ಮಾವರ ): ಕೋಟ ಸಮೀಪದ ವಡ್ಡರ್ಸೆ ಗ್ರಾಮ ಪಂಚಾಯಿತಿ  ವ್ಯಾಪ್ತಿಯ ಎಂ.ಜಿ ಕಾಲೊನಿ­ಯಲ್ಲಿ ಹಲವು ದಿನಗಳಿಂದ ನೀರಿನ ಪೂರೈಕೆ­ಯಾ­ಗುತ್ತಿಲ್ಲ, ಕುಡಿಯುವ ನೀರನ್ನು ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಒತ್ತಾಯಿಸಿ ಸ್ಥಳಿಯರು ಭಾನುವಾರ ಪ್ರತಿಭಟನೆ ನಡೆಸಿದರು.ಕಾಲೊನಿಗೆ ನೀರು ಒದಗಿಸುವ ಬಾವಿಯು ಸಂಪೂರ್ಣ ಕಲುಷಿತಗೊಂಡಿದ್ದು,  ನೀರು ಕುಡಿಯಲು ಅಸಾಧ್ಯವಾಗಿದೆ. ಈ ಹಿಂದೆ ಇಲ್ಲಿಗೆ ಸಮೀಪದ ಕುಂಬಾರುಬೆಟ್ಟು ವಾಟರ್ ಟ್ಯಾಂಕ್‌ನಿಂದ  ನೀರಿನ ವ್ಯವಸ್ಥೆ ಮಾಡಿದ್ದು, ಇತ್ತೀಚೆಗೆ ಅಲ್ಲಿನ  ಸ್ಥಳಿಯರು ನೀರು ಪೂರೈಕೆಯಾಗದಂತೆ ತಡೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಈ ಸಮಸ್ಯೆ ಕುರಿತು ಪಂಚಾಯಿತಿ ಗಮನಕ್ಕೆ ತಂದಿದ್ದರೂ ಇದುವರೆಗೆ ಯಾವುದೇ ಸ್ಪಂದನೆ ದೊರಕಿಲ್ಲ. ಕಳೆದ ಹಲವು ತಿಂಗಳಿನಿಂದ ಇಲ್ಲಿನ ೨೦೦ ಕ್ಕೂ ಹೆಚ್ಚಿನ ಮನೆಗಳಿಗೆ ನೀರಿನ ಸಮಸ್ಯೆ ಉಂಟಾ­ಗಿದ್ದು, ಇದಕ್ಕೆ ಸರ್ಮಪಕವಾದ ಪರಿಹಾರ ಒದಗಿಸು­ವುದರ ಬದಲಿಗೆ, ಕಲುಷಿತಗೊಂಡ ನೀರಿನ ಬಾವಿಗೆ ಟ್ಯಾಂಕ್ ನಿರ್ಮಿಸುವ ಹುನ್ನಾರ ನಡೆಯುತ್ತಿದ್ದು, ಈ ಕಾಮಗಾರಿಯನ್ನು ವಿರೋಽಧಿಸುವುದಾಗಿ ಪ್ರತಿಭಟನಾ­ಕಾರರು ಎಚ್ಚರಿಸಿದ್ದಾರೆ. ಕೂಡಲೇ ನೀರಿನ ಸಮಸ್ಯೆ­ಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ರಾಜು ಪೂಜಾರಿ, ಕೋಟಿ ಪೂಜಾರಿ, ಪಂಚಾಯಿತಿ ಸದಸ್ಯೆ ರತ್ನಾ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.